ಹಿಂದುಳಿದ ಜಾತಿ ಮತ್ತು ದಲಿತ ಮಠಗಳ ಶ್ರೀಗಳ ಒಕ್ಕೂಟದಿಂದ ಸಚಿದ್ವಯರ ಭೇಟಿ

 

ಶಿವಮೊಗ್ಗ: ಇಂದು ಸಂಜೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಗೃಹ ಕಚೇರಿಗೆ ಹಿಂದುಳಿದ ಜಾತಿಗಳ ಮಠಾಧೀಶರ ಒಕ್ಕೂಟದವರು ಭೇಟಿ ನೀಡಿ ತಮ್ಮ ಮಠ ಮಾನ್ಯಗಳಿಗೆ ಸರ್ಕಾರದಿಂದ ಆಗಬೇಕಾಗಿರುವ ಹಲವಾರು ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ಒಕ್ಕೂಟದ ಅಧ್ಯಕ್ಷರಾದ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀ ನಿರಂಜನಾಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಇಂದು ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಶ್ರೀ ಕೆ.ಎಸ್.ಈಶ್ವರಪ್ಪರವರನ್ನು ಭೇಟಿ ಮಾಡಿದರು.
ಸಭೆಯಲ್ಲಿ ಮಾದಾರ ಚೆನ್ನಯ್ಯ ಶ್ರೀಗಳು, ಬಸವ ಮಾಚಿದೇವ ಮಹಾಸ್ವಾಮಿಗಳು, ಭಗೀರಥ ಪೀಠದ ಪುರುಷೊತ್ತಮಾನಂದ ಮಹಾಸ್ವಾಮಿಗಳು, ಶ್ರೀ ಶ್ರೀ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು ಸೇರಿದಂತೆ ಇನ್ನೂ ಹಲವಾರು ಮಹಾಸ್ವಾಮಿಜಿಗಳು ಸೇರಿದ್ದರು.
ಕನಕಗುರುಪೀಠದ ಮಹಾಸ್ವಾಮಿಗಳು ಮಾತನಾಡಿ.
ಈ ಹಿಂದೆಯೇ ಹಲವಾರು ಬಾರಿ ನಾವೆಲ್ಲ ಒಂದು ಕಡೆ ಸೇರಲು ನಿಶ್ಚಯಸಿದ್ದೀವಿ ಆದರೆ ಇಂದು ಆ ಸುಕಾಲ ಕೂಡಿ ಬಂದಿದೆ.
ನಮ್ಮ ಹಿಂದುಳಿದ ದಲಿತ ಮಠಗಳ ಒಕ್ಕೂಟದಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ.
ಸೂರಿಲ್ಲದ ಮಠಮಾನ್ಯಗಳಿಗೆ ಮಾನ್ಯ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪನವರು ಈ ಹಿಂದೆ ಸದಾನಂದಗೌಡರು ಮುಖ್ಯಮಂತ್ರಿಗಳಿದ್ದಾಗ ನಾರಾಯಣಸ್ವಾಮಿಗಳು ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ ಸಾಕಷ್ಟು ಹಿಂದುಳಿದ ದಲಿತ ಮಠಗಳಿಗೆ ಸೂರು ಕಲ್ಪಿಸಿಕೊಟ್ಟಿದ್ದಾರೆ.
ಗ್ರಾಮೀಣ ಭಾಗದಲ್ಲಿ ಜಾತಿ ವೈಷಮ್ಯ ಹೆಚ್ಚಾಗುತ್ತಿದೆ ಜಾತಿ ಸಂಘರ್ಷ ತಡೆಯುವುದು ಒಕ್ಕೂಟದ ಮೂಲ ಉದ್ದೇಶ ಎಂದು ಶ್ರೀಗಳು ತಿಳಿಸಿದರು.

ನಂತರ
ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಮಾತನಾಡಿ
ದೇವಲೋಕದಂತೆ ಎಲ್ಲ ಸ್ವಾಮೀಜಿಗಳು ನಮ್ಮ ಮನೆಗೆ ಬಂದಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ, ಸರ್ಕಾರ ಮಾಡುವ ಕೆಲಸಗಳನ್ನು ಮಾನ್ಯ ಮಠಗಳು ಮತ್ತು ಸ್ವಾಮೀಜಿಗಳು ನಡೆಸಿಕೊಂಡು ಹೋಗುತ್ತಿದ್ದಾರೆ.
ಮಠಗಳ ಮೂಲಕ ಶೈಕ್ಷಣಿಕ, ಸಾಮಾಜಿಕ ಸೇವೆ ಮಾಡುತ್ತಿರುವುದು ಶ್ಲಾಘನೀಯ.
ಸರ್ಕಾರದಿಂದ ಬರುವ ಎಲ್ಲ ಸೌಲತ್ತುಗಳನ್ನು ನೀಡುತ್ತಿದ್ದೇವೆ, ಇನ್ನೂ ಅವರ ಅಹವಾಲುಗಳ ಇದ್ದರೆ ಅವುಗಳನ್ನು ಕೂಡ ಬಗೆಹರಿಸುತ್ತೇವೆ ಅವಶ್ಯಕತೆ ಬಿದ್ದರೆ ಮಾನ್ಯ ಮುಖ್ಯಮಂತ್ರಿಗಳನ್ನೂ ಅವರೊಂದಿಗೆ ಭೇಟಿ ಮಾಡಿ ಅವರ ಎಲ್ಲ ಕೆಲಸ ಕಾರ್ಯಗಳಿಗೆ ಸಹಕಾರ ನೀಡುವ ಎಲ್ಲ ಭರವಸೆ ನಮಗಿದೆ ಎಂದು ವಿವರಿಸಿದರು.
ನಂತರ ಹಿಂದುಳಿದ ಕಲ್ಯಾಣ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ಇಂದು ನಮ್ಮನ್ನು ಮತ್ತು ನಮ್ಮ ಹಿರಿಯ ನಾಯಕರಾದ ಶ್ರೀ ಕೆ.ಎಸ್.ಈಶ್ವರಪ್ಪರವರನ್ನು ಮಾನ್ಯ ಹಿಂದುಳಿದ ಮತ್ತು ದಲಿತ ಮಠಾಧೀಶರುಳು ಭೇಟಿ ಮಾಡಿ ವಿವಿಧ ಕೆಲಸ ಕಾರ್ಯಗಳ ಕುರಿತು ನಮ್ಮ ಗಮನಕ್ಕೆ ತಂದಿದ್ದಾರೆ. ಮಠಗಳಿಗೆ ಅತ್ಯಗತ್ಯ ಸೌಕರ್ಯಗಳನ್ನು ನೀಡುವ ಕುರಿತು ಕೂಡ ಚರ್ಚಿಸಿದ್ದಾರೆ. ಅವರ ಅಹವಾಲು ಕೇಳಿದ್ದೇವೆ.


ಮಠಗಳಿಗೆ ಅವಶ್ಯವಿರುವ ಸೌಕರ್ಯ ನೀಡಲಾಗುತ್ತದೆ.
ಹೆಚ್ಚಿನ ಅನುದಾನ ನೀಡಿ, ಅಭಿವೃದ್ಧಿ ಮಾಡಲಾಗುತ್ತದೆ.
ಸಿಎಂ ಬಸವರಾಜ ಬೊಮ್ಮಾಯಿಯವರನ್ನೂ ಭೇಟಿ ಮಾಡಲಾಗುವುದು.
ಮಠಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಸಿದರು

Leave a Reply

Your email address will not be published. Required fields are marked *

error: Content is protected !!