ಕುವೆಂಪು ಏರ್ಪೋರ್ಟ್:ಆಗಸ್ಟ್ ತಿಂಗಳಿನಿಂದ ವಿಮಾನ ನಿಲ್ದಾಣ ಕಾರ್ಯಚರಣೆ-ಸಚಿವ ಎಂ ಬಿ ಪಾಟೀಲ್
ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ಧಾಣ ಫೆಬ್ರವರಿ ತಿಂಗಳಿನಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಯವರ ಅಮೃತ ಹಸ್ತದಿಂದ ಲೋಕಾರ್ಪಣೆ ,ಮಾಡಲಾಗಿತ್ತು ಆದರೆ ಇಲ್ಲಿಯವರೆಗೂ ವಿಮಾನ ಹಾರಟ ಪ್ರಾರಂಭವಾಗಿಲ್ಲ. ಆದರೆ ಈಗ ಶಿವಮೊಗ್ಗದ ವಿಮಾನ ಹಾರಾಟಕ್ಕೆ ರೆಕ್ಕೆ ಬಂದಂತಾಗಿದೆ.
ಶಿವಮೊಗ್ಗದ ಕುವೆಂಪು ವಿಮಾನ ನಿಲ್ಧಾಣ ಇನ್ನೇನು ಕಾರ್ಯಚರನೆಗೆ ಸಿದ್ದವಾದಂತೆ ಕಾಣುತ್ತಿದೆ. ಬೃಹತ್ ಕೈಗಾರಿಕೆ ಸಚಿವರಾದ ಸನ್ಮಾನ್ಯ ಎಂಬಿ ಪಾಟೀಲ್ ರವರು ಆಗಸ್ಟ ತಿಂಗಳ 11 ರಂದು ಕಾರ್ಯಚರಣೆ ಶುರುವಾಗಲಿದೆ ಎಂಬ ಶುಭ ಸುದ್ದಿಯನ್ನು ಕೊಟ್ಟಿದ್ದಾರೆ. ಜುಲೈ 20 ರ ಒಳಗೆ ಬಾಕಿ ಉಳಿದಿರುವ ಇಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಆಂಬುಲೆನ್ಸ್ ವ್ಯವಸ್ಥೆ. ಕಾಫಿ ಕೆಫೆಗಳನ್ನು ತೆರೆಯಲಾಗುವುದು ಅದರ ಕೆಲಸಗಳು ನೆಡಯುತ್ತಿವೆ ಹಾಗೂ ತಾಂತ್ರಿಕ ಮತ್ತು ತಾಂತ್ರಿಕೇತರ ಕೆಲಸಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದುತಿಳಿದಿರು.
ಸದ್ಯದಲ್ಲೆ ರಾಜ್ಯದ ಹೊಸ ವಿಮಾನ ನಿಲ್ದಾಣಗಳ ಕಾಮಗಾರಿ ಪ್ರಗತಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ವಿಮಾನಗಳ ಕಾರ್ಯಾಚರಣೆಗೆ ಮುನ್ನ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪಾಟೀಲ್ ತಿಳಿಸಿದ್ದಾರೆ.