ಶೀಲ ಶಂಕಿಸಿ ಸೊಸೆಯನ್ನ ಹತ್ಯೆಗೈದ ಮಾವನಿಗೆ ಜೀವಾವಧಿ ಶಿಕ್ಷೆ
ದಾವಣಗೆರೆ: ಶೀಲ ಶಂಕಿಸಿ ಪತ್ನಿಯನ್ನು ಹತ್ಯೆ ಮಾಡಿದ ಆರೋಪಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಹೊನ್ನಾಳಿ ತಾಲ್ಲೂಕು ಚೀಲಾಪುರ ಗ್ರಾಮದ ಅತಾವುಲ್ಲಾ ಅವರು, ತನ್ನ ಹೆಂಡತಿ ರಮೀಜಬೀ ಅವರ ಶೀಲದ ಮೇಲೆ ಅನುಮಾನಪಟ್ಟು, ಪತ್ನಿ ಬಹಿರ್ದೆಸೆಗೆ ಹೋದಾಗ ಹಿಂಬಾಲಿಿಸಿಕೊಂಡು ಹೋಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವುದಾಗಿ ತನ್ನ ತಂದೆ ಶಫಿವುಲ್ಲಾ ಅವರ ಮೆಲೆಯೇ ದೂರು ನೀಡಿದ್ದರು.
ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ಪ್ರಕರಣದ ತನಿಖೆ ನಡೆಸಿ ಆರೋಪಿತನ ವಿರುದ್ಧ ದೋಷಾರೋಪಣ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲ್ಲಿ ವಿಚಾರಣೆ ನಡೆದು, ನ್ಯಾಯಾಧೀಶರಾದ ಜೆ.ವಿ ವಿಜಯಾನಂದರು ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಸತೀಶ್ ವಾದ ಮಂಡಿಸಿದ್ದರು.