ಅತಿ ಸಣ್ಣ ವೃತ್ತಿಪರ ಕುಶಲಕರ್ಮಿಗಳಿಗೆ ಸಾಲ ಸಹಾಯಧನ ಸೌಲಭ್ಯ

ವೃತ್ತಿಪರ ಕುಶಲಕರ್ಮಿ

ದಾವಣಗೆರೆ :ವಿವಿಧ ವೃತ್ತಿಯ ಕುಶಲಕರ್ಮಿಗಳಿಗೆ ಸಾಲ-ಸಹಾಯಧನ ಯೋಜನೆಯಡಿ ವೃತ್ತಿ ಚಟುವಟಿಕೆಯನ್ನು ಮುಂದುವರೆಸಲು ವಾಣಿಜ್ಯ ಬ್ಯಾಂಕ್‍ಗಳು, ಸಹಕಾರ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ರೂ.50,000/-ಗಳವರೆಗೆ ಸಾಲ ಸೌಲಭ್ಯ ಹಾಗೂ ಇಲಾಖೆ ವತಿಯಿಂದ ಗರಿಷ್ಠ ರೂ.15,000/-ಸಹಾಯಧನ ಪಡೆಯಬಹುದು. ಅರ್ಜಿ ಸಲ್ಲಿಸಲು ಅರ್ಹವಿರುವ ಚಟುವಟಿಕೆ, ವೃತ್ತಿಗಳಾದ ಕ್ಷೌರಿಕ, ಚರಮ್ಮಾರಿಕೆ ಮತ್ತು ದೋಬಿ ವೃತ್ತಿಗಳನ್ನು ಸೇರ್ಪಡೆ ಮಾಡಲಾಗಿದೆ. ಈ ವೃತ್ತಿಯ ಕುಶಲಕರ್ಮಿಗಳು ಸಾಲ ಸೌಲಭ್ಯಕ್ಕಾಗಿ ನಿಗಧಿತ ಅರ್ಜಿಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ದಾವಣಗೆರೆ ಇಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!