ಲೋಕಾಯುಕ್ತ ಬಲೆಗೆ ಹರಿಹರ ಕ್ಷೇತ್ರ ಶಿಕ್ಷಾಧಿಕಾರಿ ಸಿದ್ದಪ್ಪ:15 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಬಿಇಓ ಬಲೆಗೆ
ದಾವಣಗೆರೆ: ಖಾಸಗಿ ಶಾಲೆಯೊಂದಕ್ಕೆ ಪರವಾನಿಗೆ ನವೀಕರಣ ಕ್ಕೆ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ. ದಾವಣಗೆರೆ ಲೋಕಾಯುಕ್ತರ ಬಲೆಗೆ ಬಿಇಓ ಸಿದ್ದಪ್ಪ ಬಿದ್ದಿದ್ದಾರೆ.ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇಂದು ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ಸಿದ್ದಪ್ಪ ನನ್ನು ರೆಡ್ ಹ್ಯಾಂಡ್ ಆಗಿ ಬಲೆಗೆ ಬಿಳಿಸಿದ್ದಾರೆ.
ಐವತ್ತು ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಸಿದ್ದಪ್ಪ ಈ ಹಿಂದೆ ಹತ್ತು ಸಾವಿರ ಪಡೆದಿದ್ದ, ಇಂದು 15 ಸಾವಿರ ಲಂಚ ಸ್ವೀಕಾರದ ವೇಳೆ ಬಲೆಗೆ ಬಿದ್ದಿದ್ದಾರೆ. ಹರಿಹರ ವಿದ್ಯಾದಾಹಿನಿ ಶಾಲೆಯ ಮುಖ್ಯಸ್ಥ ರಘುನಾಥ್ ಅವರಿಂದ ಲಂಚ ಸ್ವೀಕರಿಸುವಾಗ ದಾಳಿ ನಡೆದಿದ್ದು, ಸಿಬಿಎಸ್ ಸಿ ಶಾಲೆ ಪರವಾನಿಗೆ ನವೀಕರಣಕ್ಕಾಗಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ದಾವಣಗೆರೆ ಲೋಕಾಯುಕ್ತ ಎಸ್ ಪಿ ಎಂ.ಎಸ್ ಕೌಲಾಪುರೆ ನೇತ್ರತ್ವದಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಾದ ಆಂಜನೇಯ ಹಾಗೂ ರಾಷ್ಟ್ರಪತಿ ಅವರಿಂದ ದಾಳಿ ನಡೆದಿದ್ದು ಬಿಇಓ ಸಿದ್ದಪ್ಪ ಅವರನ್ನ ವಶಕ್ಕೆ ಲೋಕಾಯುಕ್ತ ಪೊಲೀಸರು ಪಡೆದಿದ್ದಾರೆ.
*ಕ್ಷಣ ಕ್ಷಣದ ಸುದ್ದಿಗಾಗಿ ಗ್ರೂಪ್ ಗೆ ಸೇರಲು 👇ಇಲ್ಲಿ ಕ್ಲಿಕ್ ಮಾಡಿ.*
https://chat.whatsapp.com/KKoKihnFdmWGVs3kl4BVty