loksabha; 1.5 ಲಕ್ಷ ಅಂತರದಲ್ಲಿ ಗೆಲ್ಲುವೆ: ಆಕಾಂಕ್ಷಿ ವಿನಯ್ ಕುಮಾರ್ ವಿಶ್ವಾಸ
ದಾವಣಗೆರೆ, ಅ.02: ರಾಜ್ಯ, ರಾಷ್ಟ್ರೀಯ ಮಟ್ಟದ ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆದೇ ದಾವಣಗೆರೆ ಲೋಕಸಭಾ (loksabha) ಕ್ಷೇತ್ರದಲ್ಲಿ ಸತತ ಮೂರು ತಿಂಗಳಿಂದ ಜನರ ಸಂಪರ್ಕ ಮಾಡುತ್ತಾ ಹತ್ತು ಹಲವು ಸಾಮಾಜಿಕ ಸೇವಾ ನಿರತನಾಗಿದ್ದು ಕಾಂಗ್ರೆಸ್ ಪಕ್ಷ ಈ ಬಾರಿ ಅಹಿಂದ ವರ್ಗದಿಂದ ಟಿಕೆಟ್ ನೀಡುವ ಭರವಸೆ ಇದ್ದುಎದುರಾಳಿ ಬಿಜೆಪಿ ಅಭ್ಯರ್ಥಿಗಿಂತ 1.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ದಾವಣಗೆರೆ ಲೋಕಸಭಾ ಟಿಕೆಟ್ ಪ್ರಬಲ ಆಕಾಂಕ್ಷಿ ಇನ್ಸೇಟ್ಸ್ ಐಎಎಸ್ ವಿನಯ್ ಕುಮಾರ್ ಭರವಸೆ ವ್ಯಕ್ತಪಡಿಸಿದರು.
ತಮ್ಮ ಜನಸಂಪರ್ಕ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವಿನಯ್ ರವರು, ತಾವು ಮುಂಚಿನಿಂದಲೂ ಕಾಂಗ್ರೆಸ್ ಅಭಿಮಾನಿ ರಾಜೀವ್ ಗಾಂಧಿ ರವರ ಅಭಿವೃದ್ಧಿ ಕನಸುಗಳ ಯುವಜನರಿಗೆ ಅವರು ನೀಡುತ್ತಿದ್ದ ಉತ್ತೇಜನ, ದೇಶವನ್ನು ಮುನ್ನಡೆಸುವ ದಿಟ್ಟ ನಾಯಕ, ರಾಹುಲ್ ರವರ ಭಾರತ್ ಜೋಡೋ ಯಾತ್ರೆ ನಮಗೆಲ್ಲ ಸ್ಪೂರ್ತಿ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಸದಸ್ಯನಾಗಿ ಐದು ವರ್ಷಗಳು ಕಳೆದಿವೆ, ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷಕ್ಕೆ ಸೇವೆ ಸಲ್ಲಿಸುತ್ತಿರುವೆ ಎಂದು ತಿಳಿಸಿದರು.
family court; ಮದುವೆ ಮನೆಯಾದ ಕೌಟುಂಬಿಕ ಕೋರ್ಟ್
ಈ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಅಹಿಂದ ವರ್ಗದ ಯಾರೊಬ್ಬರೂ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಭಾರಿ ಹೊನ್ನಾಳಿ ಮಂಜಪ್ಪ ನವರಿಗೆ ಕೇವಲ 15 ದಿನಗಳು ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನೀಡಿ ಅವರನ್ನು ಸೋಲಿಸಿದ ಉದಾಹರಣೆ ನಮ್ಮ ಮುಂದಿದೆ. ಮೊದಲೇ ಘೋಷಣೆ ಮಾಡಿದ್ದಾರೆ ಅವರು ಗೆಲ್ಲುತ್ತಿದ್ದರು. ಈ ತಂತ್ರಗಾರಿಕೆ ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ಆ ತಂತ್ರ ಕುತಂತ್ರ ಗಳನ್ನ ಮೆಟ್ಟಿ ನಿಂತು ಗೆದ್ದೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ವಿನಯ್, ದಾವಣಗೆರೆ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪನವರು, ಸಚಿವ ಮಲ್ಲಿಕಾರ್ಜುನ ರವರ ಸಲಹೆ ಸಹಕಾರ ಪಡೆದು ಕೊಂಡೆ ಅವರ ಬಾಯಲ್ಲಿ ನಾನೇ ಸೂಕ್ತ ಅಭ್ಯರ್ಥಿ ಎಂದು ಗುರುತಿಸಿ ಕೊಳ್ಳುವ ಆ ನಿಟ್ಟಿನಲ್ಲಿ ಇಡೀ ಕ್ಷೇತ್ರವನ್ನು ನಾಲ್ಕೈದು ಬಾರಿ ಸುತ್ತಿ ನಿತ್ಯ ಹಳ್ಳಿಗಳ ಮುಖಂಡರು ಹಿರಿಯರು ನಿಷ್ಟಾವಂತ ಕಾರ್ಯಕರ್ತರ ನಡುವೆ ರಾಜಕೀಯ ಸಮಾಲೋಚನೆ ನಡೆಸುತ್ತಿರುವೆ. ಅಲ್ಲಿನ ಸಮಸ್ಯೆ ಗಳ ವಿವರ ಸಂಗ್ರಹಿಸಿ ಸೂಕ್ತ ಪರಿಹಾರ ಹುಡುಕುವ ಹಾದಿಯಲ್ಲಿರುವೆ ಎಂದು ಹೇಳಿದರು.
ನಮ್ಮ ವಾಟ್ಸ್ ಆಪ್ ಗ್ರೂಪ್ ಸೇರಲು 👇ಕ್ಲಿಕ್ ಮಾಡಿ
https://chat.whatsapp.com/KKoKihnFdmWGVs3kl4BVty