family court; ಮದುವೆ ಮನೆಯಾದ ಕೌಟುಂಬಿಕ ಕೋರ್ಟ್
ದಾವಣಗೆರೆ : family court ಸದಾ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ನ್ಯಾಯಾಲಯಕ್ಕೆ ಬರುತ್ತಿದ್ದ ಜನರು, ಈ ನಡುವೆ ಸಾಮೂಹಿಕ ವಿವಾಹದ ಖುಷಿ, ಸಂತಸ ಅಲ್ಲಿ ಮನೆ ಮಾಡಿತ್ತು, ಹತ್ತಾರು ವರ್ಷಗಳಿಂದ ಕಿತ್ತಾಡುತ್ತಿದ್ದವರನ್ನು ಪುನಃ ಒಂದು ಮಾಡಲಾಗಿದ್ದು, ನೆರೆದಿದ್ದವರು ಶುಭ ಹಾರೈಸಿದರು.
ಇಂತಹ ಘಟನೆಗೆ ಸಾಕ್ಷಿಯಾಗಿದ್ದು, ಜಿಲ್ಲಾ ಕೌಟುಂಬಿಕ ನ್ಯಾಯಾಲಯ. ಈ ಕೋರ್ಟ್‌ನಲ್ಲಿ ಡೈವರ್ಸ್‌ಗಾಗಿ 13 ದಂಪತಿಗಳು ಅರ್ಜಿ ಸಲ್ಲಿಸಿದ್ದು, ವೈಮನಸ್ಸು ತೊರೆದು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದಾದರು. 9 ಜೋಡಿ ಹಾಗೂ ವಿವಿಧ ತಾಲೂಕುಗಳ ನ್ಯಾಯಾಲಯದಲ್ಲಿ 4 ದಂಪತಿಗಳು ಜೊತೆಗೂಡಿದರು. ವಿವಿಧ ನ್ಯಾಯಾಧೀಶರು ಹಾಗೂ ವಕೀಲರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.
ಈ ಕೋರ್ಟ್ ಆವರಣದಲ್ಲಿ ಅತ್ತ ಗಂಡ, ಇತ್ತ ಹೆಂಡತಿ ತಮ್ಮ ಮಕ್ಕಳನ್ನು ಕರೆದುಕೊಂಡು ಸುತ್ತಾಡುತ್ತಿದ್ದರು, ಲಾಯರ್‌ಗಳು ಇವರಿಗೆ ತಿಳಿ ಹೇಳುತ್ತಿದ್ದರು. ಇವರು ಸುತ್ತಾಡುವುದನ್ನು ನೋಡಿದ ಮನಸ್ಸುಗಳು, ಮುಮ್ಮಲಮರಗುತ್ತಿದ್ದವು. ಇನ್ನು ಮಕ್ಕಳು ಚಿಕ್ಕವು, ಗಂಡ ಜತೆಗಿಲ್ಲ, ಜೀವನ ಹೇಗೆ ಮಾಡಬೇಕು ಎಂಬ ಮಾತುಗಳು ಆಗಾಗ ಗುಯ್ಯುಗುಡುತ್ತಿದ್ದವು. ಒಂದು ರೀತಿಯಲ್ಲಿ ಸಾಮೂಹಿಕ ವಿವಾಹದ ಕಲ್ಯಾಣ ಮಂಟಪವಾಗಿತ್ತು. ವಕೀಲರೇ ಇಲ್ಲಿ ಎರಡು ಕಡೆಯ ಬೀಗರು. ನ್ಯಾಯಮೂರ್ತಿ ರಾಜೇಶ್ವರ ಎನ್ ಹೆಗಡೆ ಅವರೇ ಒಂದು ರೀತಿಯಲ್ಲಿ ಪ್ರಧಾನ ಪುರೋಹಿತರಾಗಿ ವಧು-ವರರಿಗೆ ಶುಭ ಹಾರೈಸುತ್ತಿದ್ದರು. ಈ ನಡುವೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಒಂದಾದ ದಂಪತಿಗೆ ಸಿಹಿ ತಿನಿಸಿ ಶುಭ ಹಾರೈಸಿದರು.
hitech toilet; ದಾವಣಗೆರೆ ಸ್ಮಾರ್ಟ್ ಸಿಟಿಯಲ್ಲಿ ಪ್ರಪಂಚದ ಅತ್ಯಂತ ದುಬಾರಿ ಹೈಟೆಕ್ ಶೌಚಾಲಯ!
ಹತ್ತಾರು ವರ್ಷಗಳಿಂದ ಪತಿ, ಪತ್ನಿ ಪ್ರತ್ಯೇಕ ಜೀವನ ಮಾಡುತ್ತಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದ ದಂಪತಿಗಳು ವಕೀಲರ ಮೂಲಕ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿ ಹೋರಾಟ ಮಾಡುತ್ತಿದ್ದರು. ಆದರೆ ಇವರೆಲ್ಲ ಇವುಗಳನ್ನು ಕೈ ಬಿಟ್ಟು ಮತ್ತೆ ಒಂದಾದರು. ನ್ಯಾಯ ವಿಲೇವಾರಿಗೆ ತ್ವರಿತಗೊಳಿಸಲು ಈ ಲೋಕ್ ಅದಾಲತ್ ಮಾಡಲಾಗಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಐದು ಸಾವಿರ ಪ್ರಕರಣಗಳಿದ್ದವು.
ಇವುಗಳಲ್ಲಿ 3600 ಪ್ರಕರಣಗಳು ಇತ್ಯರ್ಥವಾಗಿದ್ದು, ಇವುಗಳಲ್ಲಿ 13 ಜೋಡಿಗಳು ಒಂದಾಗಿರುವುದು ವಿಶೇಷ. ಈ ವೇಳೆ ಇನ್ನೂ ಕೆಲವರು ಭಾವುಕರಾಗಿ ಕಣ್ಣೀರು ಸುರಿಸಿದರು. ಗಂಡ ಸರಿಯಿಲ್ಲ ಎಂದು ಹೇಳುವ ಬದಲು ಗಂಡನನ್ನೇ ಮಗನಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ಅಚ್ಚರಿ ಮೂಡಿಸಿದರು. ಹೀಗಾಗಿ ಮತ್ತೆ ಹೊಸ ಜೀವನ ಆರಂಭಿಸಲು ನಿರ್ಧರಿಸಿದರು.
ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಸಣ್ಣ ಕಾರಣಕ್ಕೆ ಪತ್ನಿಯ ಜೊತೆ ಮುನಿಸಿಕೊಂಡು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಏಳೇ ತಿಂಗಳಲ್ಲಿ ಮತ್ತೆ ಸಹಬಾಳ್ವೆಗೆ ಸಮ್ಮತಿಸಿದರು. ನಾನು ಈಗಾಗಲೇ ತಲಾಕ್‌ನಿಂದ ನೊಂದಿದ್ದೆ. ವಿವಾಹ ವಿಚ್ಛೇದನ ಮಾಡಿಕೊಳ್ಳುವುದು ಬೇಡ ಎಂದು ಮತ್ತೆ ಒಂದಾಗಿದ್ದೇವೆ ಎಂದು ಮೂರು ವರ್ಷದಿಂದ ದೂರವಿದ್ದ ಮಹಿಳೆಯೊಬ್ಬರು ಹೇಳಿದರು.ಇನ್ನು ಮುಂದೆ ಯಾವುದೇ ಕಾರಣಕ್ಕೂ ನಾನು ತಲಾಖ್ ಹೇಳುವುದಿಲ್ಲ’ ಎಂದು ಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ತಿಳಿಸಿದರು.
ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದ ಜೋಡಿಯೊಂದು ಮಗನಿಗೋಸ್ಕರ ಒಂದಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಾಲಕನನ್ನು ಶ್ರೀಕೃಷ್ಣನ ವೇಷದಲ್ಲಿ ನ್ಯಾಯಾಲಯಕ್ಕೆ ಕರೆತಂದಿದ್ದು ವಿಶೇಷವಾಗಿತ್ತು. ಒಟ್ಟಾರೆ ಲೋಕಅದಾಲತ್‌ನಿಂದ ಜೋಡಿಗಳು ಒಂದಾಗಿದ್ದುಘಿ, ಮತ್ತೆಂದೂ ಕೋರ್ಟ್ ಮೆಟ್ಟಿಲು ಏರದೇ ಸಹಬಾಳ್ವೆಯಿಂದ ಜೀವನ ಮಾಡುತ್ತೇವೆ ಎಂದು ನ್ಯಾಯಾಧೀಶರಿಗೆ ದಂಪತಿಗಳು ಮಾತು ಕೊಟ್ಟರು.