mortuary; 4 ಸಾವಿರ ಜನಸಂಖ್ಯೆಯ ಗ್ರಾಮದಲ್ಲಿ 400 ಅಡಿ ಸ್ಮಶಾನ, ಹೆಣ ಹೂಳಲು ಜಾಗವೇ ಇಲ್ಲ!
ದಾವಣಗೆರೆ, ಅ.೦2: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್ ಬಸಾಪುರ ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರ ಜನಸಂಖ್ಯೆ ಇದ್ದು, ಇಲ್ಲಿರುವುದು ಕೇವಲ 400 ಅಡಿ ಸ್ಮಶಾನ (mortuary). ಅದರಲ್ಲಿ ಜಾಗ ಇಲ್ಲದ ಕಾರಣ ಒಂದರ ಮೇಲೆ ಒಂದರಂತೆ ಹೆಣ ಹೂಳುವ ಕಾರ್ಯ ನಡೆಯುತ್ತಿದೆ.
ಹೆಣ ಹೂಳಲು ಗುದ್ದಿಗೆ ತೆಗೆದರೆ ಪಕ್ಕದ ಹಳ್ಳದ ನೀರು ಬಸಿದು ಹೆಣ ಹುಳುವ ಮುನ್ನವೇ ಗುದ್ದುಗೆಯಲ್ಲಿ ಒಂದು ಅಡಿ ನೀರು ತುಂಬುತ್ತದೆ. ಈ ರೀತಿ ಘಟನೆ ಹಲವು ಬಾರಿ ನಡೆದಿದೆ. ಒಂದೋ ಆ ನೀರು ಇಂಗುವವರೆಗೆ ಕಾದು ಹೆಣ ಹೂಳಬೇಕು. ಇಲ್ಲವಾದರೆ ಮತ್ತೊಂದು ಗುದ್ದಿಗೆ ತೆಗೆಯಬೇಕು. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸದೇ ಜಾಣ ಕಿವುಡು ತೋರುತ್ತಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧಿ ಜಯಂತಿ ಪ್ರಯುಕ್ತ ನಡೆಯುವ ಶ್ರಮದಾನ ಇಂತಹ ಸ್ಥಳಗಳಲ್ಲಿ ಆಗಬೇಕಾಗಿರುವುದು ಮುಖ್ಯವಾಗಿದೆ.