ಹಾಲಿನ ಸಹಾಯಧನ ವಿಳಂಬಕ್ಕೆ ಮಂಡಲೂರು ವಿಶ್ವನಾಥ ಅಸಮಾಧಾನ

ದಾವಣಗೆರೆ: ಜಿಲ್ಲೆಯಲ್ಲಿ ಸುಮಾರು 480 ಹಾಲು ಉತ್ಪಾದಕರ ಸಂಘಗಳು ಇವೆ. ರೈತರಿಗೆ ಕಳೆದ ಆರು ತಿಂಗಳಿಂದ ಯಾವುದೇ ಸಹಾಯಧನದ ಹಣವನ್ನು ಸರ್ಕಾರ ನೀಡಿಲ್ಲ.  ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ ಎಂದು ರೈತ ಸಂಘ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ ಆರೋಪಿಸಿದ್ದಾರೆ.

ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಹಾಗೂ ಇದರ ನಡುವೆ ಹಾಲಿನ ಸಹಾಯದ ಹಣವನ್ನು ಬಾರದೇ ಇದ್ದುದರಿಂದ ರೈತರು ಜೀವನ ನಡೆಸಲು ಕಷ್ಟಕರವಾಗಿದೆ. ಸರ್ಕಾರ ಕೂಡಲೇ ಹಾಲಿನ ಸಹಾಯದ ಹಣವನ್ನು ಬಿಡುಗಡೆ ಮಾಡಿ ರೈತರ ಸಂಕಷ್ಟಕ್ಕೆ ನೆರವಾಗಬೇಕು ಮತ್ತು ಸರ್ಕಾರ ಹಾಲಿನ ಸಹಾಯದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಬರ ಹಾಗೂ ಮಳೆಯ ಅಭಾವದಿಂದ ಅಂತರ್ಜಲ ಕುಸಿದಿರುವ ಹಿನ್ನೆಲೆಯಲ್ಲಿ ರೈತರಿಂದ ಹಗಲು ದರೋಡೆಗೆ ಮುಂದಾಗಿದ್ದು, ಬೆಳೆಗಳನ್ನು ಉಳಿಸಿಕೊಳ್ಳಲು ರೈತರ ಸಾಲ ಸೂಲ ಮಾಡಿಕೊಂಡು ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲು ರೈತರು ಮುಂದಾಗಿರುದನ್ನು ಮನಗೊಂಡು ಬೋರ್‌ವೆಲ್ ಗಾಡಿಗಳ ಮಾಲೀಕರು ಮತ್ತು ಏಜೆಂಟರು ಏಕಾಏಕಿ ಬೋರ್‌ವೆಲ್ ಕೊರಿಯುವ ದರ ಹೆಚ್ಚಳ ಮಾಡಿ, ಹಗಲು ದರೋಡೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ತಕ್ಷಣ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡು ದರ ಹೆಚ್ಚಳವನ್ನು ಹಿಂಪಡೆಯುವಂತೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!