ಮದುವೆಗೆ ವಧು ಹುಡುಕಿಕೊಡಿ.! ತಹಸೀಲ್ದಾರ್ ಯುವಕರ ಮನವಿ.!

ತುಮಕೂರು : ಜಿಲ್ಲೆಯಲ್ಲಿ ಪ್ರಸ್ತುತ ಯುವಕರಿಗೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ . ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಮದುವೆಯಾಗಲು ಹೆಣ್ಣು ಸಿಗದೇ ವಯಸ್ಸು ಮೀರಿರುವ 30 ರಿಂದ 40 ಮಂದಿ ಯುವಕರು ಕಂಡು ಬರುತ್ತಾರೆ . ಕೃಷಿಕರಾಗಿರುವ ಕಾರಣ ನಮಗೆ ಹೆಣ್ಣು ಕೊಡ್ತಿಲ್ಲ ಎಂದು ಅವಿವಾಹಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ

ಗ್ರಾಮೀಣ ಭಾಗದಲ್ಲಿ ಸಣ್ಣ ಹಿಡುವಳಿದಾರರಿಗೆ ಮದುವೆ ಭಾಗ್ಯವೇ ಇಲ್ಲದಂತಾಗಿದೆ . ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಯುವಕರಿಗೆ ಹೆಣ್ಣು ಕೊಡ್ತಾರೆ . ರೈತರಾಗಿರುವವರಿಗೆ ಹೆಣ್ಣುಗಳು ಸಿಗುತ್ತಿಲ್ಲ . ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮಗೆ ಹೆಣ್ಣು ಕೊಡಲು ಹೆಣ್ಣು ಹೆತ್ತವರು ಮುಂದಾಗುತ್ತಿಲ್ಲ .

ಹೆಣ್ಣು ಸಿಗದೇ ಪರದಾಡುತ್ತಿರುವ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಯುವಕರು ಉತ್ತರ ಕರ್ನಾಟಕದ ದೂರದ ಊರುಗಳ ಹೆಣ್ಣನ್ನು ಮದುವೆ ಮಾಡಿಕೊಳ್ಳುತ್ತಿದ್ದಾರೆ . ಸರ್ಕಾರ ವಧು ಸಿಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಬೇಕಿದೆ . ಅಂತಹವರಿಗೆ ಆರ್ಥಿಕ ಸಹಾಯ ಮಾಡಬೇಕಿದೆ ಅಂತಾರೆ ಸ್ಥಳೀಯರು .

ವಧುವನ್ನು ಹುಡುಕಿಕೊಡುವಂತೆ ಯುವಕರು ತಹಶೀಲ್ದಾರ್ ಮೊರೆ ಹೋಗಿರುವ ಘಟನೆಯೂ ತಾಲೂಕಿನ ಲಕ್ಕಗೊಂಡನಹಳ್ಳಿಯಲ್ಲಿ ಜರುಗಿದೆ . ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಲಕ್ಕಗೊಂಡನಹಳ್ಳಿ , ತಿಪಟೂರು ತಾಲೂಕಿನ ತಿಮ್ಮಾಪುರ ಗ್ರಾಮದ 15 ಯುವಕರು ಹೆಣ್ಣುಗಳನ್ನು ಹುಡುಕಿ ಕೊಡುವಂತೆ ಅರ್ಜಿ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!