ಕಸ ಗುಡಿಸಿ ಸರಳತನಕ್ಕೆ ಸಾಕ್ಷಿಯಾದ ರೇಣುಕಾಚಾರ್ಯ.!

ದಾವಣಗೆರೆ: ಒಬ್ಬ ಜನಪ್ರತಿನಿಧಿ ಹೇಗಿರಬೇಕೆಂಬುದಕ್ಕೆ ಪ್ರತಿ ವಿಷಯದಲ್ಲೂ ಹೊನ್ನಾಳಿ ಶಾಸಕ ನಿದರ್ಶನವಾಗಿ ನಿಲ್ಲುತ್ತಿದ್ದಾರೆ!

ಕರೋನಾ ಎರಡನೇ ಅಲೆಯಲ್ಲಂತೂ ಅವರ ಸೋಂಕಿತರಿಗೆ ಮಾಡಿದ ಸೇವೆ, ತುಂಬಿದ ಆತ್ಮಸ್ಥೈರ್ಯ ಅವರಿಗೆ ಅಂತರ್ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಷ್ಟೇ ಅಲ್ಲ ಅಭಿಮಾನಿಗಳನ್ನು ಹುಟ್ಟಿಹಾಕಿತು.

ನ್ಯಾಮತಿಯಲ್ಲಿ ಕರೋನಾ ವಾರಿಯರ್ಸ್‌ಗಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಐದು ಸಾವಿರ ವಿವಿಧ ಇಲಾಖೆಯ ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನಿಸಿದ್ದಷ್ಟೇ ಅಲ್ಲದೇ 15 ಸಾವಿರ ಜನರಿಗೆ ಹೋಳಿಗೆ ಊಟವನ್ನು ಬಡಿಸಿದರು‌.

 

ಕಾರ್ಯಕ್ರಮವಾದ ಜಾಗದಲ್ಲಿ ಬಿದ್ದಿದ್ದ ರಾಶಿ ಗಟ್ಟಲೆ ಕಸಕಡ್ಡಿಯನ್ನು ಸ್ವತಃ ರೇಣುಕಾಚಾರ್ಯ ತಮ್ಮ ಸಹಚರರೊಂದಿಗೆ ಸೇರಿಕೊಂಡು ಸ್ವಚ್ಛಗೊಳಿಸುವ ಮೂಲಕ ಸರಳತನಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ.

Leave a Reply

Your email address will not be published. Required fields are marked *

error: Content is protected !!