ಜೀವನ ಸುಂದರವಾಗಿರಲು ಪತಿ ಪತ್ನಿಯರಲ್ಲಿ ಪರಸ್ಪರ ನಂಬಿಕೆಯಿರಬೇಕು – ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಪತಿ ಪತ್ನಿಯರಲ್ಲಿ ಪರಸ್ಪರ ನಂಬಿಕೆಯಿದ್ದಾಗ ಮಾತ್ರ ಅಂತಹ ವಿವಾಹಗಳು ಸುಧೀರ್ಘವಾಗಿ ಮುಂದುವರೆಯುತ್ತವೆ. ಆದ್ದರಿಂದ, ನಂಬಿಕೆಯೊಂದಿಗೆ ಜೀವನ ನಡೆಸಿ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನವದಂಪತಿಗಳಿಗೆ ಕಿವಿಮಾತು ಹೇಳಿದರು.

ನಗರ ದೇವತೆ ಶ್ರೀದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಶನಿವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಅಪನಂಬಿಕೆ ಹಚ್ಚಾಗಿ ವೈಮನಸ್ಸುಗಳು ಉಂಟಾಗುತ್ತಿರುವುದರಿಂದ ಪತಿ-ಪತ್ನಿಯರ ಸಂಬಂಧ ಶಿಥಿಲಗೊಳ್ಳುತ್ತಿದೆ ಎಂದು ವಿಷಾದಿಸಿದರು.

ಗಂಡ ಹೆಂಡತಿಯರಿಬ್ಬರು ಪರಸ್ಪರ ಅರಿತು ಬಾಳಿದರೆ ನಿಮ್ಮ ಬದುಕು ಸುಂದರವಾಗಿರಲಿದೆ. ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇದ್ದಾಗ ಮಾತ್ರ ಆ ವಿವಾಹಕ್ಕೊಂದು ಅರ್ಥ ಬರಲಿದೆ ಎಂದು ಹೇಳಿದರು.

ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸುತ್ತಿದ್ದು, ಕಳೆದ ವರ್ಷ ಕೊರೊನಾ ಕಾರಣದಿಂದ ನಡೆಸಿರಲಿಲ್ಲ. ಈ ವರ್ಷ ಕೊರೊನಾ ಕಡಿಮೆಯಾಗಿದ್ದರಿಂದ ಸರಳವಾಗಿ ಸಾಮೂಹಿಕ ವಿವಾಹ ಮಹೋತ್ಸವ ನಡೆಸಲಾಗಿದೆ. ಈ ಬಾರಿ ನಾಲ್ಕು ಜೋಡಿಗಳು ನವದಾಂಪತ್ಯಕ್ಕೆ ಕಾಲಿರಿಸಿವೆ. ಈ ಹೊಸ ಜೋಡಿಗಳು ಆನಂದದಿಂದ ಬಾಳಿರಿ ಎಂದು ಶುಭಹಾರೈಸಿದರು.

ಪ್ರತಿ ಶುಕ್ರವಾರ ಮತ್ತು ಮಂಗಳವಾರ ದೇವಸ್ಥಾನ ಆಡಳಿತ ಮಂಡಳಿಯಿಂದ ದಾಸೋಹ ಏರ್ಪಡಿಸಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದರು

 ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ಎಚ್.ಬಿ.ಗೋಣೆಪ್ಪ, ಗುರುರಾಜ್, ಗೌಡ್ರು ರಾಮಣ್ಣ, ನಾಗರಾಜ್, ಕೆ.ಎಂ.ಮಂಜುನಾಥ್, ಬಾಬುರಾವ್ ಸಾಳಂಕಿ, ಜಮ್ಮೆನಹಳ್ಳಿ ನಾಗರಾಜ್, ಬಳ್ಳಾರಿ ನೀಲಪ್ಪ, ವಿನಾಯಕ ಪೈಲ್ವಾನ್, ಗಣೇಶ್ ಬಿ.ಶೇಟ್, ನಾಗರಾಜ ಸಿದ್ದಪ್ಪ, ಸುಬ್ರಮಣ್ಯ, ಮೋಹನ್‌ಕುಮಾರ್, ನಂದೀಶ್ ದೇವಜ್ಜರ, ಗಣೇಶ್ ದೇವಜ್ಜರ, ಭೈರೇಶ್ ಇನ್ನಿತರರಿದ್ದರು 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!