Mayor Concern Clear Rain Water: ಮಳೆಯಿಂದ ಕೆರೆಯಂತಾದ ರಸ್ತೆಗಳು.! ಮೇಯರ್ ಜೊತೆ ಕೈ ಜೋಡಿಸಿದ ಪಾಲಿಕೆ ಸದಸ್ಯ | ಮೇಯರ್ ಕಾಳಜಿಗೆ ಫುಲ್ ಮಾರ್ಕ್ಸ್
ದಾವಣಗೆರೆ: ನಗರದಲ್ಲಿ ಸುರಿದ ಕುಂಭದ್ರೋಣ ಮಳೆಗೆ ಕೆಲವು ಮನೆಗಳಿಗೆ ನೀರು ನುಗ್ಗಿರುವುದಷ್ಟೇ ಅಲ್ಲದೇ ರಸ್ತೆಯ ತುಂಬೆಲ್ಲಾ ನದಿಯಂತೆ ನೀರು ಉಕ್ಕಿ ಹರಿದಿದೆ. ಇದರ ಪರಿಣಾಮ ನಗರದ ಈರುಳ್ಳಿ ಮಾರುಕಟ್ಟೆ ಮತ್ತು ಪಾಲಿಕೆ ಎದುರಿನ ಅಂಡರ್ ಪಾಸ್ ನಲ್ಲಿ ರಸ್ತೆಯ ಮೇಲೆ ಎದೆಯೆತ್ತರಕ್ಕೆ ನೀರು ಹರಿಯುತ್ತಿರುವ ಕಾರಣ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ನಗರದ ಈರುಳ್ಳಿ ಮಾರುಕಟ್ಟೆಯ ಬಳಿ ಇರುವ ಅಂಡರ್ ಪಾಸ್ ಹತ್ತಿರ ನೀರು ತುಂಬಿಕೊಂಡಿದ್ದು ವಾಹನಗಳಿಗೆ, ಜನರಿಗೆ ಸಂಚರಿಸಲು ತೊಂದರೆಯಾಗುತ್ತಿರುವುದನ್ನು ಕಂಡ ಪಾಲಿಕೆ ಮೇಯರ್ ಎಸ್. ವೀರೇಶ್ ಆ ಸ್ಥಳಕ್ಕೆ ಧಾವಿಸಿ 19 ನೇ ವಾರ್ಡಿನ ಸದಸ್ಯರಾದ ಶಿವಪ್ರಕಾಶ್ ಅವರೊಂದಿಗೆ ಸೇರಿ ಅವರು ಸ್ವತಃ ರಸ್ತೆಯಲ್ಲಿ ತುಂಬಿಕೊಂಡಿದ್ದ ಕಸ ಕಡ್ಡಿಗಳನ್ನು ತಾವೆ ಎತ್ತಿಹಾಕುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟರು.
ಅಲ್ಲದೇ ಭಾರಿ ಮಳೆಗೆ ಪಿಬಿ ರಸ್ತೆಯಲ್ಲಿ ತುಂಬಿದ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಮೇಯರ್ ವೀರೇಶ್ ಕಳೆದ ಮಳೆಗಾಲದ ಸಂದರ್ಭದಲ್ಲಿ ಪಾಲಿಕೆ ಎದುರಿನ ಅಂಡರ್ ಪಾಸ್ ರಸ್ತೆಯಲ್ಲಿ ನೀರು ನಿಂತು ಆದ ಅಸ್ತವ್ಯಸ್ತತೆಯನ್ನು ಮನಗೊಂಡು ತಾವೆ ಅಲ್ಲಿದ್ದ ಕಸಕಡ್ಡಿಗಳನ್ನೆಲ್ಲ ಶುಚಿಗೊಳಿಸಿ ಜನರ ಮೆಚ್ಚುಗೆ ಗಳಿಸಿದ್ದರು. ಈಗಲೂ ಜನರಿಗೆ ತೊಂದರೆಯಾಗದಂತೆ ತಾವೆ ಸ್ವತಃ ಸ್ಥಳಕ್ಕೆ ಆಗಮಿಸಿ ಸ್ವಚ್ಛಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅವರ ಜನಪರ ಕಾಳಜಿಗೆ ನಗರದ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.