ರಾಜಕೀಯ

MLA: ಜಮೀರಣ್ಣ ಕೆಪಾಸಿಟಿ ಇರುವ ನಾಯಕ: ಟೀಕಾಕಾರರಿಗೆ ಮತ್ತು ಅಬ್ದುಲ್ ಜಬ್ಬಾರ್‌ಗೆ ಶಾಸಕ ಶಿವಗಂಗಾ ಟಾಂಗ್

Share
Share

ದಾವಣಗೆರೆ: (MLA) “ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡಲು ಸಾಧ್ಯ, ಅದೇ ರೀತಿ ನಮ್ಮ ನಾಯಕರು ಸಚಿವ ಸ್ಥಾನ ಕೇಳಿದರೆ ಮಾತ್ರ ನೀಡಲು ಸಾಧ್ಯ. ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರು ದೆಹಲಿಗೆ ಹೋಗಿರುವುದು ನ್ಯಾಯಯುತವಾಗಿದೆ,” ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದಲ್ಲಿ ‘ಹಳೇ ಬೇರು ಹೊಸ ಚಿಗುರು’ ಎನ್ನುವಂತೆ ಬದಲಾವಣೆಯಾಗಬೇಕು. ರವಿ ಗಣಿಗ ಸೇರಿದಂತೆ ಐವರು ಹೊಸಬರಿಗೆ ಸಚಿವ ಸ್ಥಾನ ನೀಡಬೇಕು. ನಾನೇನು ಸನ್ಯಾಸಿಯಲ್ಲ, ನನಗೂ ಸಚಿವ ಸ್ಥಾನ ನೀಡಿದರೆ ಖಂಡಿತ ನಿರಾಕರಿಸುವುದಿಲ್ಲ ಎಂದು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.

​ರಾಜ್ಯ ರಾಜಕಾರಣದ ನಾಯಕತ್ವ ಬದಲಾವಣೆಯ ಕುರಿತು ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಆಸೆ. “ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ, ಡಿಕೆಶಿಯವರು ಸಿಎಂ ಆಗುವುದು ಅಷ್ಟೇ ಸತ್ಯ” ಎಂದು ಭವಿಷ್ಯ ನುಡಿದರು. ಯಾವ ಎತ್ತು ಭಾರ ಎಳೆಯುತ್ತದೆಯೋ ಆ ಎತ್ತಿನ ಮೇಲೆಯೇ ಹೆಚ್ಚು ಹೊರೆ ಹಾಕುವಂತೆ, ಡಿಕೆಶಿಯವರು ಸಮರ್ಥರಾಗಿರುವುದರಿಂದಲೇ ಹೈಕಮಾಂಡ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುತ್ತಿದೆ. ಉಪಚುನಾವಣೆಗಳ ಫಲಿತಾಂಶದ ನಂತರ ಕಾಂಗ್ರೆಸ್‌ನಲ್ಲಿ ಧನಾತ್ಮಕ ಬದಲಾವಣೆಗಳಾಗಲಿದ್ದು, ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಬಿಜೆಪಿಗರ ಆರೋಪಗಳಿಗೆ ತಿರುಗೇಟು ನೀಡಿದರು.

​ಇದೇ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಅವರ ಪರವಾಗಿ ಬ್ಯಾಟಿಂಗ್ ಮಾಡಿದ ಶಾಸಕರು, “ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಸಿಕ್ಕಿದಂತೆ” ಜಮೀರಣ್ಣನ ಮೇಲೆ ಕೆಲವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ಅವರ ಸಾಮರ್ಥ್ಯ ನೋಡಿಯೇ ಹೈಕಮಾಂಡ್ ಅವರನ್ನು ಕೇರಳ ಚುನಾವಣಾ ಪ್ರಚಾರಕ್ಕೆ ಕಳುಹಿಸಿತ್ತು. ಯಾರು ಏನೇ ಹೇಳಿದರೂ ಜಮೀರಣ್ಣ ಪವರ್‌ಫುಲ್ ನಾಯಕ ಎಂದು ಸಮರ್ಥಿಸಿಕೊಂಡರು. ಇದೇ ವೇಳೆ, ಪಕ್ಷದ ಕೆಲಸಕ್ಕೆ ಯಾರೂ ಆಮಂತ್ರಣ ನೀಡಬೇಕಿಲ್ಲ, ಜವಾಬ್ದಾರಿಯುತವಾಗಿ ನಾವೇ ಬಂದು ಕೆಲಸ ಮಾಡಬೇಕು ಎಂದು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರ ಹೇಳಿಕೆಗೆ ಮಾರ್ಮಿಕವಾಗಿ ಟಾಂಗ್ ನೀಡಿದರು. ಒಟ್ಟಾರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ದೆಹಲಿಗೆ ಹೋಗಿರೋದು ಸರಿ ಇದೆ. ಈಗ ಮಗು ಹತ್ತರೆ ಹಾಲು ಕುಡಿಸೋದು ತಾಯಿ. ಮನೆಯಲ್ಲೇ ಕುಂತರೆ ಯಾರೋ ಕರೆದು ಮಂತ್ರಿ ಸ್ಥಾನ ಕೊಡುವ ವ್ಯವಸ್ಥೆ ಇಲ್ಲ. ಎಲ್ಲ ಹೋಗಿರೋದು ನಿಜವಾಗಲೂ ಒಳ್ಳೆ ಬೆಳವಣಿಗೆ. ಕೊಡ್ಲಿ ಹಿರಿಯರು ಇದ್ದಾರೆ ಅವರಿಗೆ ಅವಕಾಶ ಮಾಡಿಕೊಡ್ಲಿ. ಡಿ.ಕೆ ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರು. ಪಕ್ಷಕ್ಕೆ ಯಾವುದೇ ರೀತಿಯ ಡ್ಯಾಮೇಜ್ ಆಗಬಾರದು ಅನ್ನೋ ಉದ್ದೇಶದಿಂದ ಒಬ್ಬರೊಬ್ಬರು ಹೇಳಿಕೆ ಕೊಟ್ಟು ಅನ್ನೋ ಉದ್ದೇಶದಿಂದ ಹೇಳಿರೋದು ತಪ್ಪೇನಿಲ್ಲ. ಅಧ್ಯಕ್ಷರು ಹೇಳಿರೋದು ಸರಿ ಇದೆ. ಅವರು ಸಹ ಯಾರು ಏನೂ ಹೇಳಿಕೆ ಕೊಟ್ಟಿಲ್ಲ. ಬಂದಿದ್ದೀವಿ ನಾವು ಮಂತ್ರಿ ಆಕಾಂಕ್ಷಿ ಇದ್ದೀವಿ, ಕೇಳಕ್ಕೆ ಬಂದಿದ್ದೀವಿ ಅಂತ ಹೇಳಿದ್ದಾರೆ. ಹಿರಿಯರಿಗೆ ಅವಕಾಶ ಕೊಡ್ಲಿ. ಜೊತೆಗೆ ನಾವು, ನಮ್ಮ ರವಿ ಗಾಣಿಗ, ಮಂಡ್ಯ ಶಾಸಕರು ನಾವೆಲ್ಲ ಮುಂಚೆಯಿಂದ ಡಿಮ್ಯಾಂಡ್ ಮಾಡಿದ್ದೀವಿ. ಪ್ರಥಮ ಬಾರಿ ಆಯ್ಕೆಯಾದವರಿಗೂ ಅವಕಾಶ ಕೊಡಿ. ಯಾಕೆಂದರೆ ಈ ಹಿಂದೆ ಎಲ್ಲಾ ಪ್ರಥಮ ಬಾರಿ ಆಯ್ಕೆಯಾದವರು ಮುಖ್ಯಮಂತ್ರಿಯಾಗಿರುವ ನಿದರ್ಶನಗಳಿವೆ. ಅನುಭವ ಅಧಿಕಾರ ಸಿಕ್ಕ ಮೇಲೆ ಬರುತ್ತದೆ. ಹಂಗಾಗಿ ಪ್ರಥಮ ಬಾರಿ ಆಯ್ಕೆಯಾಗಿರೋರಿಗೂ ಅವಕಾಶ ಕೊಡಿ. ಅದರಂತೆ ಕೊಟ್ರೆ ಅವರ ಜೊತೆ ನಾವೂ ಸೇರಿ ಕೆಲಸ ಮಾಡ್ತೀವಿ. ನನಗೆ ಕೊಡ್ರಿ ಅಂತ ಹೇಳಲ್ಲ, ಯಾರಾದರೂ ಹೊಸಬರಿಗೆ ಒಂದು ನಾಲ್ಕೈದು ಜನರಿಗೆ ಅವಕಾಶ ಕೊಡಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆ

IGP: ವರದಿಗಾರರ ಮೇಲೆ ASP ದರ್ಪ: ಕ್ರಮಕ್ಕೆ ಒತ್ತಾಯಿಸಿ IGPಗೆ ಪತ್ರಕರ್ತರ ಮನವಿ

ದಾವಣಗೆರೆ:(IGP) ಹರಿಹರದ ಪಂಚಮಸಾಲಿ ಮಠದಲ್ಲಿ ನಡೆದ ಘಟನೆಯೊಂದರ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದುರ್ವರ್ತನೆ ತೋರಿರುವುದನ್ನು ಖಂಡಿಸಿ...

ದಾವಣಗೆರೆ

Panchamasali: ಹರಿಹರ ಪಂಚಮಸಾಲಿ ಪೀಠದಲ್ಲಿ ‘ಲೆಕ್ಕದ’ ಸಮರ! ಸ್ವಾಮೀಜಿ vs ಟ್ರಸ್ಟಿಗಳ ನೇರ ಹಣಾಹಣಿ!

ದಾವಣಗೆರೆ: (Panchamasali) ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಮಠದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ. ವಚನಾನಂದ ಸ್ವಾಮೀಜಿ ಹಾಗೂ ಮಠದ ಟ್ರಸ್ಟಿಗಳ ನಡುವಿನ ಸಮರ...

Related Articles
ದಾವಣಗೆರೆರಾಜಕೀಯರಾಜ್ಯ / ಕರ್ನಾಟಕ

BSY: ಚಿತ್ರದುರ್ಗದಲ್ಲಿ ನಾಳೆ ‘ಬಿಎಸ್ ವೈ ಅಭಿಮಾನೋತ್ಸವ’ದ ಅಬ್ಬರ: ಅಮಿತ್ ಶಾ ಭಾಗಿ, ದಾವಣಗೆರೆಯಿಂದ ಹೊರಟ ಯಡಿಯೂರಪ್ಪ ಕುಟುಂಬ!

ದಾವಣಗೆರೆ/ಚಿತ್ರದುರ್ಗ: (BSY) ಕರ್ನಾಟಕ ರಾಜಕಾರಣದ ಧ್ರುವತಾರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ...