ಶಾಸಕ ಶಾಮನೂರು ಶಿವಶಂಕರಪ್ಪ ಆಟ.! ಮೇಯರ್ ಅವಿರೋಧ ಆಯ್ಕೆ: ಬಿಜೆಪಿಗೆ ಭಾರಿ ಮುಖಭಂಗ.!

ಶಾಸಕ ಶಾಮನೂರು ಶಿವಶಂಕರಪ್ಪ ಆಟ
ದಾವಣಗೆರೆ : ಶಾಸಕ ಶಾಮನೂರು ಶಿವಶಂಕರಪ್ಪ ಹೂಡಿದ ತಂತ್ರಕ್ಕೆ ಬಿಜೆಪಿ ಬಲಿಯಾಗಿದ್ದು ಅಂತಿಮವಾಗಿ ಕಾಂಗ್ರೆಸ್ ಚಿಹ್ನೆಯಿಂದ ಗೆದ್ದ ವಿನಾಯಕ ಪೈಲ್ವಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಎರಡು ಚುನಾವಣೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ನೇತೃತ್ವದಲ್ಲಿ ದಾಳ ಹೂಡಿದ್ದ ಬಿಜೆಪಿ ಶಾಸಕ ಶಾಮನೂರು ತಂತ್ರಕ್ಕೆ ಸಖತ್ ಜಾಖ್ ಕೊಟ್ಟಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಐದು ಜನ ಸೇರಿ ಶುಕ್ರವಾರ ರಾತ್ರಿ ಸಭೆ ನಡೆದಿದೆ..ಈ ನಡುವೆ ತಂತ್ರ ಹೂಡಿದ ಶಾಮನೂರು ಸವಿತಾಹುಲ್ಲುಮನಿ ಹಾಗೂ ವಿನಾಯಕ್ ಪೈಲ್ವಾನ್ ಎಂಬ ಎರಡು ಹೆಸರನ್ನು ಆಯ್ಕೆ ಮಾಡಿದೆ. ಹಾಗೆಯೇ ಸವಿತಾ ಹುಲ್ಮನಿ ಕ್ಯಾಂಡೇಟ್ ಎಂದು ಎಲ್ಲ ಕಡೆ ಸುದ್ದಿ ಹರಡುವಂತೆ ಮಾಡಿದ್ದಾರೆ..ಈ ವಿಷಯ ಬಿಜೆಪಿಗೂ ಗೊತ್ತಾಗಿದೆ..ಇದನ್ನರಿತ ಬಿಜೆಪಿ ವಿನಾಯಕ ಪೈಲ್ವಾನ್‌ಗೆ ಗಾಳ ಹಾಕಿದೆ..ಅಂತೆಯೇ ತಾನೇ ವಿನಾಯಕ ಪೈಲ್ವಾನ್‌ನ್ನು ಪಾಲಿಕೆಗೆ ಕರೆತಂದಿದೆ..ಬಳಿಕ ವಿಪ್ ಜಾರಿ ಮಾಡಲಾಗಿದೆ..ಆದರೆ ವಿನಾಯಕ ಪೈಲ್ವಾನ್ ವಿಪ್‌ಗೆ ಸಹಿ ಹಾಕಲಿಲ್ಲಘಿ..ನೇರವಾಗಿ ನಾಮಪತ್ರ ಸಲ್ಲಿಸಿದ್ದಾರೆ..ಇವರಿಗೆ ಪಕ್ಷೇತರರು ಸೂಚಕರಾಗಿದ್ದರು. ಇನ್ನು ಸವಿತಾ ಹುಲ್ಲುಮನಿ ಕೂಡ ನಾಮ ಪತ್ರಸಲ್ಲಿಸಿದ್ದುಘಿ, ವಾಪಸ್ ತೆಗೆದುಕೊಂಡಿದ್ದಾರೆ..ಇಷ್ಟೇಲ್ಲ ಹೈಡ್ರಾಮ ಆದ ಬಳಿಕ ಬಿಜೆಪಿಯಲ್ಲಿ ಕ್ಯಾಂಡೇಂಟ್ ಇಲ್ಲದ ಕಾರಣ ಅಲ್ಲಿಂದ ಯಾರು ನಾಮಪತ್ರ ಸಲ್ಲಿಸೋದಿಲ್ಲಘಿ. ಅಷ್ಟೋತ್ತಿಗೆ ವಿನಾಯಕ್ ಪೈಲ್ವಾನ್ ನಮ್ಮೋನು ಎಂದು ಬಿಜೆಪಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.ಅವಿರೋಧವಾಗಿ ವಿನಾಯಕ ಪೈಲ್ವಾನ್ ಮೇಯರ್ ಆಗಿ ಬಿಜೆಪಿಗೆ ಭಾರಿ ಮುಖಭಂಗವಾಗುತ್ತದೆ..ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಗೆಲುವಿನ ನಗೆ ಬೀರಿ..ಮಳ್ಳಿನಿಂದ ಮುಳ್ಳು ತೆಗೆದಿದ್ದೇವೆ ಎಂದು ಹೇಳುತ್ತಿದೆ. ಒಟ್ಟಾರೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದ ಸದಸ್ಯರು, ಕಾರ್ಯಕರ್ತರು ಮೇಯರ್ ನಮ್ಮೋವರೆ ಎಂದು ಸಂಭ್ರಮಿಸಿದರು. ಇನ್ನು ಮೇಯರ್ ಆಗಿ ಆಯ್ಕೆಯಾದ ವಿನಾಯಕ ಪೈಲ್ವಾನ್ ‘ನಾನು ಶಾಮನೂರು ಶಿವಶಂಕರಪ್ಪ ಆಶೀರ್ವಾದದಿಂದ ಮೇಯರ್ ಆಗಿ ಆಯ್ಕೆಯಾಗಿದ್ದೇನೆ ಎಂದು ಘೋಷಿಸುವ ಮೂಲಕ ನಾನು ಕಾಂಗ್ರೆಸ್ ಮೇಯರ್ ಎಂದು ಹೇಳಿಕೆ ನೀಡಿದರು.