Moral Policing: ದೊಡ್ಡೇಶ ಹಾಗೂ ನಿಂಗರಾಜ್ ವಿರುದ್ದ ನೈತಿಕ ಪೋಲಿಸ್ ಗಿರಿ ಹಾಗೂ ಜಾತಿನಿಂದನೆ ಪ್ರಕರಣದಡಿ ಅರೆಸ್ಟ್
ದಾವಣಗೆರೆ: ಯುವತಿಯೊಬ್ಬಳ ಮೇಲೆ ಹಲ್ಲೆ ಮಾಡಿ ಅವಳ ವೀಡಿಯೋವನ್ನು ಸಾಮಾಜಿಕಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ದೊಡ್ಡೇಶ ಹಾಗೂ ನಿಂಗರಾಜ್ ಅವರುಗಳ ಮೇಲೆ ನೈತಿಕ ಪೋಲಿಸ್ ಗಿರಿ ಹಾಗೂ ಜಾತಿನಿಂದನೆ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗದ ಮುದ್ದಾಪುರ ಗ್ರಾಮದ ಕುಮಾರಿ ಸೌಂದರ್ಯ ಅವರು ಕೆಟಿಜೆ ನಗರ ಪೋಲಿಸ್ ಠಾಣೆಯಲ್ಲಿ ಶುಕ್ರವಾರ ಸಂಜೆ ದೂರು ದಾಖಲಿಸಿದ್ದಾರೆ.
ಅಂತಿಮ ಬಿಎ ವ್ಯಾಸಂಗ ಮಾಡುತ್ತಿರುವ ನಾನು ನನ್ನ ಸ್ನೇಹಿತರಾದ ಇಬ್ರಾಹಿಂ ಹಾಗೂ ಮೆಹಬೂಬ್ ಸುಭಾನಿ ಅವರೊಂದಿಗೆ ಸಿನಿಮಾ ನೋಡುತ್ತಿದ್ದಾಗ ಇಬ್ಬರು ಬಂದು ನೀನು ಯಾವ ಜಾತಿಯವಳು ಎಂದಾಗ ನಾನು ನಾಯಕ ಜಾತಿ ಎಂದು ಹೇಳಿದೆ. ನಂತರ ಸಿನಿಮಾ ಹಾಲ್ ನಿಂದ ಹೊರಹೋಗುವಾಗ ನಮ್ಮನ್ನು ಅಡ್ಡಗಟ್ಟಿ ನೀನು ಕೀಳು ಜಾತಿಯವಳಾಗಿ ಬೇರೆ ಕೋಮಿನವರೊಂದಿಗೆ ಬಂದಿದ್ದೀಯ ಎಂದು ಬೈದು ಹಲ್ಲೆ ಮಾಡಿ, ಅನುಮತಿ ಇಲ್ಲದೆ ಸ್ನೇಹಿತರ ಜೊತೆ ಇದ್ದ ನಮ್ಮ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅವರ ಮೇಲೆಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕಲಂ:341, 323, 504, 505(2), 354 ರೆ/ವಿ 34 ಐಪಿಸಿ ಮತ್ತು ಕಲಂ 3(1)(ಆರ್),3(1)(ಎಸ್), 3(2)(ವಿ-ಎ) 23 ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್-1989 ಅಡಿ ದೂರು ದಾಖಲಾಗಿದೆ.