ದಾವಣಗೆರೆ: ವಿಜಯ ಕರ್ನಾಟಕ ಐಟಿ ವಿಭಾಗದ ವ್ಯವಸ್ಥಾಪಕ ಚಂದ್ರಶೇಖರ್ ಹಿರೇಮಠ (೪೬) ಭಾನುವಾರ ಬೆಳಗಿನ ಜಾವ ಆನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಚಂದ್ರಶೇಖರ್ ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ದೊಡ್ಡಬ್ಬಿಗೆರೆ ಗ್ರಾಮದವರು. ಅವರಿಗೆ ಮೂರು ವರ್ಷದ ಅವಳಿ ಪುತ್ರ-ಪುತ್ರಿ, ಪತ್ನಿ, ತಂದೆ-ತಾಯಿ, ಸಹೋದರಿ ಇದ್ದಾರೆ. ವಿಜಯ ಕರ್ನಾಟಕದ ಕೇಂದ್ರ ಕಚೇರಿಯಲ್ಲಿ 21 ವರ್ಷದಿಂದ ಮಾಹಿತಿ ತಂತ್ರಜ್ಞಾನ ವಿಭಾಗದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಸಂತೆಬೆನ್ನೂರು ಗ್ರಾಮದ ಮನೆಯಲ್ಲಿ ಸೋಮವಾರ ಬೆಳಗ್ಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ 12 ಗಂಟೆಗೆ ದೊಡ್ಡಬ್ಬಿಗೆರೆಯಲ್ಲಿನ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
