ದುಡಾದಿಂದ 3 ಕೋಟಿ ಕಾಮಗಾರಿಗೆ ಚಾಲನೆ ನೀಡಿದ ಸಂಸದ
ದಾವಣಗೆರೆ: ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 3.00 ಕೋಟಿ ರೂ ಅನುದಾನದಡಿ ರಸ್ತೆ, ಒಳಚರಂಡಿ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಸನ್ಮಾನ್ಯ ಲೋಕಸಭಾ ಸದಸ್ಯರು ಮಾಜಿ ಕೇಂದ್ರ ಸಚಿವರಾದ ಜಿ.ಎಂ.ಸಿದ್ದೇಶ್ವರ, ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರು ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ,ಧೂಡಾ ಅಧ್ಯಕ್ಷರಾದ ದೇವರಮನೆ ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಿದರು
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್, ಧೂಡಾ ಮಾಜಿ ಅಧ್ಯಕ್ಷರು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್, ಉಪ ಮಹಾಪೌರರಾದ ಶ್ರೀಮತಿ ಶಿಲ್ಪಾ ಜಯಪ್ರಕಾಶ್, ಪಾಲಿಕೆ ಸದಸ್ಯರು ಸದಸ್ಯರು, ಧೂಡಾ ಸದಸ್ಯರಾದ ಮಾರುತಿರಾವ್ ಘಾಟ್ಗೆ,ಭಾತಿ ಚಂದ್ರಶೇಖರ, ಆರ್ ಲಕ್ಷ್ಮಣ್, ಗೌರಮ್ಮ ಪಾಟೀಲ್, ಶ್ರೀನಿವಾಸ ದಾಸಕರಿಯಪ್ಪ,ಕೊಂಡಜ್ಜಿ ಜಯಪ್ರಕಾಶ್, ಮತ್ತಿ ಇತರರು ಉಪಸ್ಥಿತರಿದ್ದರು.