ಸಂಸದ ತೇಜಸ್ವಿ ಸೂರ್ಯ ರೈತರ ಬಳಿ ಕ್ಷಮೆಯಾಚಿಸಬೇಕು: ಜೆ. ಅಮಾನುಲ್ಲಾಖಾನ್
ದಾವಣಗೆರೆ: ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಯಾವುದೇ ಪ್ರಯೋಜವಿಲ್ಲ ಎಂದಿರುವ ತೇಜಸ್ವಿ ಕೂಡಲೇ ದೇಶದ ರೈತರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಜೆಡಿಎಸ್ ವಕ್ತಾರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ. ಅಮಾನುಲ್ಲಾಖಾನ್ ಆಗ್ರಹಿಸಿದ್ದಾರೆ.
ಉದ್ಯಮಿಗಳಾದ ವಿಜಯ ಮಲ್ಯ, ನೀರವ್ ಮೋದಿಯಂತಹ ಬಂಡವಾಳಶಾಹಿಗಳು ದೇಶವನ್ನು ಕೊಳ್ಳೆ ಹೊಡೆದು ಓಡಿ ಹೋದಾಗ ತಾವು ತೇಜಸ್ವಿ ಸೂರ್ಯ ಎಲ್ಲಿದ್ದರು, ಅದಾನಿ ಅಂಬಾನಿಯಂತವರು ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ, ಮೊದಲು ಅಂತವರ ಬಗ್ಗೆ ಮಾತನಾಡಿ. ರೈತರ ಬಗ್ಗೆ ಉಡಾಫೆಯಿಂದ ಮಾತನಾಡಿದರೆ ದೇಶದ ರೈತಾಪಿ ವರ್ಗ ಸರಿಯಾಗಿ ಬುದ್ದಿ ಕಲಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ಭಾರತ ಹಳ್ಳಿಗಳೇ ಪ್ರಧಾನವಾಗಿರುವ ದೇಶ ಭಾರತದ ಆರ್ಥಿಕತೆ ನಿಂತಿರುವುದು ರೈತರು ಹಾಗೂ ಕೂಲಿ ಕಾರ್ಮಿಕರ ಮೇಲೆ. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿದರೆ ರೈತರ ಸಾಲ ಮನ್ನ ಮಾಡುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಆಳುತ್ತಿರುವ ಡಬಲ್ ಇಂಜಿನ್ ಸರ್ಕಾರಗಳಿಗೆ ಸಂಸದ ತೇಜಸ್ವಿ ಸೂರ್ಯ ರೈತರ ಸಾಲ ಮನ್ನಾ ಮಾಡಿಸಲು ಮುಂದಾಗಬೇಕು ಇಲ್ಲವಾದರೆ ತಮ್ಮ ಸಂಸದ ಸ್ಥಾನಕ್ಕೆ ತೇಜಸ್ವಿ ಸೂರ್ಯ ರಾಜೀನಾಮೆ ನೀಡಿ ರಾಜಕೀಯ ಕ್ಷೇತ್ರದಿಂದ ದೂರ ಉಳಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೂಡಲೇ ಸಂಸದ ತೇಜಸ್ವಿಸೂರ್ಯ ಅವರು ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರವ ಸಂಸದ ತೇಜಸ್ವಿ ಸೂರ್ಯ ದೇಶದ ರೈತರ ಮುಂದೆ ಕ್ಷಮೆಯಾಚಿಸಬೇಕು, ಕ್ಷಮೆಯಾಚಿಸದೇ ಹೋದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.