ಮೈಸೂರು ಅತ್ಯಾಚಾರ ಖಂಡಿಸಿ ನ್ಯಾಷನಲ್ ವುಮೆನ್ಸ್ ಫ್ರಂಟ್ ಸಂಘಟನೆಯಿಂದ ಪ್ರತಿಭಟನೆ

IMG-20210830-WA0010

 

ದಾವಣಗೆರೆ: ಕೆಲದಿನಗಳಿಂದ ರಾಷ್ಟ್ರವ್ಯಾಪ್ತಿ ನಡೆಯುತ್ತಿರುವ ಅತ್ಯಾಚಾರ ಪ್ರಕಾರಗಳು ಖಂಡಿಸಿ ನ್ಯಾಷನಲ್ ವುಮೆನ್ ಫ್ರಂಟ್ ಕರ್ನಾಟಕದ ವತಿಯಿಂದ ಉಪವಿಭಾಗಾಧಿಕಾರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ದೇಶದ ವಿವಿಧ ಭಾಗಗಳಲ್ಲಿ ಉತ್ತರಭಾರತ ದೆಹಲಿ ಹಾಗೂ ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಅತ್ಯಾಚಾರಿಗಳು ರಾಜಾರೋಷವಾಗಿ ಎಗ್ಗಿಲ್ಲದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರನ್ನು ಬೆಂಬಲಿಸುವ ಭ್ರಷ್ಟಾಚಾರಿ ರಾಜಕೀಯ ಪುಡಾರಿಗಳಿಂದ ನಮ್ಮ ಕಾನೂನುಗಳು ದುರ್ಬಲಗೊಂಡಿರುವುದು ಅಷ್ಟೇ ಅಲ್ಲದೆ ಕಾನೂನು ರಕ್ಷಿಸುವ ಪೊಲೀಸರು ಕೂಡ ಅವರ ಕೈಗೊಂಬೆಗಳಾಗಿದಾರೆ. ಇದರಿಂದ ಸಂತ್ರಸ್ತೆಯರಿಗೆ ನ್ಯಾಯವು ಮರೀಚಿಕೆಯಾಗಿದೆ. ಮೈಸೂರಿಂದ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರವು ಇದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಾಚಾರಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಂತ್ರಸ್ತೆಯ ಪರವಾಗಿ ಪೊಲೀಸರೇ ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಬೇಕು ಹಾಗೂ ಸಂತ್ರಸ್ತೆಗೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸಬೇಕು.
ಪ್ರಕರಣವು ನ್ಯಾಯಾಲಯದಲ್ಲಿ ಇತರ ತೆಗಳುವವರು ಯಾವುದೇ ಶಿಫಾರಿಸ್ಸಿಗೆ ಮಾನ್ಯ ಮಾಡಬಾರದು ಎಂದು ಒತ್ತಾಯಿಸಿದರು.
ಪ್ರತಿ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕಾರ್ಯಪಡೆ ನೇಮಿಸಬೇಕು.
ಪ್ರೀತಿ ಶಾಲೆ-ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಕಲಿಕೆಯೊಂದಿಗೆ ಸೆಲ್ಫ್ ಡಿಫೆನ್ಸ್ ಕಡ್ಡಾಯವಾಗಿ ಉಚಿತವಾಗಿ ಕಲಿಸುವ ಯೋಜನೆ ಜಾರಿಗೊಳಿಸಬೇಕು.

ಈ ಸಂದರ್ಭದಲ್ಲಿ ಸಂಘಟನೆಯ ಶಬಾನಾ ಬಾನು, ಸೈಯದ್ ಅಪಿಪ, ಅಂಬ್ರೀನ್ ಬಾನು, ಆಯಿಶಾ ಇಸ್ಮೈಲ್ ಪದಾಧಿಕಾರಿಗಳು ಇದ್ದರು

Leave a Reply

Your email address will not be published. Required fields are marked *

error: Content is protected !!