ಪಿಸಿ & ಪಿ ಎನ್ ಡಿ ಟಿ ಸಮಿತಿ ವತಿಯಿಂದ ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆ

ದಾವಣಗೆರೆ: ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಪಿಸಿ & ಪಿಎನ್‍ಡಿಟಿ ವಿಭಾಗ ಮಹಿಳಾ ಮತ್ತು ಹೆರಿಗೆ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಉಪವಿಭಾಗಧಿಕಾರಿ ಮಮತಾ ಹೊಸಗೌಡರ ರವರು ಮಾತನಾಡಿ ಪ್ರಾಚೀನ ಕಾಲದಿಂದ ಅಧುನಿಕ ಯುಗದ ವರೆಗೂ ಕೂಡ ಗೌರವಯುತವದ ಸ್ಥಾನಮಾನವನ್ನು ಸ್ತ್ರೀಯರಿಗೆ ನೀಡಲಾಗಿದೆ, ಹೆಣ್ಣನ್ನು ಬೆಳೆಸಿ ಉಳಿಸಿ ಎಂಬ ಸಂದೇಶ ನೀಡಿದರು.

ಖ್ಯಾತ ವೈದ್ಯ ಡಾ. ಎನ್.ಕೆ ಕಾಳಪ್ಪನವರು ಮಾತನಾಡಿ, ವಿವಿಧ ರಂಗಗಳಲ್ಲಿ ಮಹಿಳೆಯರು ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಹೆಣ್ಣು ಸಂಸಾರದ ಕಣ್ಣು, ಹಾಗಾಗಿ ನಾವು ಹೆಣ್ಣನ್ನು ಆರಾಧ್ಯ ದೇವತೆ ಎನ್ನುತ್ತೇವೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗ ಡಾ. ನಾಗರಾಜ ಮಾತನಾಡಿ, ಹಿಂದಿನ ಕಾಲದಲ್ಲಿ ಸ್ತ್ರೀಯರನ್ನು ಸಾಕಷ್ಟು ತುಳಿತಕ್ಕೆ ಒಳಗಾಗಿಸಿದ್ದರು, ಆಧುನಿಕ ಯುಗದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನ ನೀಡಿ ಗೌರವಿಸಲಾಗುತ್ತಿದೆ ಆದ್ದರಿಂದ ಹೆಣ್ಣನ್ನು ಬೆಳೆಸುವ ಜೊತೆಗೆ ಉಳಿಸುವ ಕಾರ್ಯ ಮಾಡೋಣ ಎಂದು ಕರೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಆರ್.ಜಿ ರಾಘವನ್ ಮಾತನಾಡಿ ಹೆಣ್ಣಿಗೆ ವಿಶೇಷವಾದ ಗೌರವ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಿಸಿ & ಪಿಎನ್‍ಡಿಟಿ ಸಲಹಾ ಸಮಿತಿಯ ಸದಸ್ಯ ಶ್ರೀಕಾಂತ್ ಮಾತನಾಡಿ, ಹೆಣ್ಣು ಮಗುವಿಗೆ ಕುಟುಂಬದಲ್ಲಿ ಗೌರವವಿದೆ. ಅಲ್ಲದೆ ಕುಟುಂಬ ನಿರ್ವಹಿಸುವ ಜವಾಬ್ದಾರಿ ಅವರ ಮೇಲಿದೆ ಆದ್ದರಿಂದ ಕುಟುಂಬ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣ ಆಧಿಕಾರಿ ಡಾ. ಎ. ಎಮ್ ರೇಣುಕರಾದ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಸುರೇಶ ಎನ್ ಬಾರ್ಕಿ ಕಾರ್ಯಕ್ರಮ ಕುರಿತು ಮಾತನಾಡಿದರು.

ಇದೇ ವೇಳೆ ಜ.24 ರಂದು ಜನಿಸಿದ ಹೆಣ್ಣು ಮಗುವಿನ ತಾಯಂದಿರರಿಗೆ ಸಿಹಿಯನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ ಡಾ.ಸುಮಿತ್ರ ಹೆರಿಗೆ ಆಸ್ಪತ್ರೆಯ ವೈದ್ಯರು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪೋಷಕರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!