Navarathri Utsav Hamsavahini: ನಗರದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ನವರಾತ್ರಿಗೆ ಚಾಲನೆ | ಹಂಸವಾಹಿನಿ ಅಲಂಕಾರದಲ್ಲಿ ಕಂಗೊಳಿಸಿದ ದುಗ್ಗಮ್ಮ
ದಾವಣಗೆರೆ : ನಗರದ ಶಿವಾಜಿನಗರದಲ್ಲಿರುವ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಇಂದಿನಿಂದ ( ಅ . 07 ) ಅ . 16 ವರೆಗೆ ಸಂಭ್ರಮದಿಂದ ನವರಾತ್ರಿ ಮಹೋತ್ಸವ ಹಾಗೂ ಪುರಾಣ ಪ್ರವಚನ ನಡೆಯಲಿದೆ .
ಇಂದು ಬೆಳಿಗ್ಗೆ 6.30 ಕ್ಕೆ ದೀಪರಾಧನೆ ಮುಖಾಂತರ ಶ್ರೀ ವಿಜ್ಞೇಶ್ವರ ಘಟಸ್ಥಾಪನೆ, ನವರಾತ್ರಿ, ನವದುರ್ಗ,ನವಗ್ರಹ,ದ್ವಾರಪಾಲ, ಕಾಲಭೈರವ ಪೂಜಾ ಹಾಗೂ ದೇವಿಗೆ ಪಂಚಾಮೃತ ಅಭಿಷೇಕ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಇಂದು ನಗರ ದೇವತೆ ದುರ್ಗಾಂಬಿಕ ದೇವಿ ಗೆ ಮೊದಲನೇ ದಿನದ “ಹಂಸವಾಹಿನಿ “ಅಲಂಕಾರ ಮಾಡಲಾಗಿದ್ದು. ಒಂಬತ್ತು ದಿನಗಳು ದೇವಿಗೆ ಒಂದೊಂದು ಅಲಂಕಾರ ಮಾಡಲಾಗುವುದು.
ಪ್ರತಿದಿನ ರಾತ್ರಿ 8 ಗಂಟೆಗೆ ದುರ್ಗಾಂಬಿಕದೇವಿಯ ಪಾದಗಟ್ಟಿ ಬಳಿ ಇರುವ ಸಭಾಭವನದಲ್ಲಿ “ಶ್ರೀ ದೇವಿ ಪುರಾಣ ಪ್ರವಚನ” ವನ್ನು ಹಾವೇರಿ ಜಿಲ್ಲಾ ಹಾವನೂರು ತಾಲೂಕು ಕರಡಿ ಗ್ರಾಮದ ಹರಿಕಥಾ ವಿದ್ವಾನ್ ಶ್ರೀ ರೇವಣಸಿದ್ದಯ್ಯ ಶಾಸ್ತ್ರಿ ಮತ್ತು ಸಂಗಡಿಗರಿಂದ ಪ್ರವಚನ ನಡೆಯಲಿದೆಯೆಂದು ಸಮಿತಿಯವರು ತಿಳಿಸಿದ್ದಾರೆ