new payment system; ಸಿನಿಮಾ ಕಾರ್ಮಿಕರಿಗಾಗಿ ಹೊಸ ವೇತನ ಜಾರಿ, ಸಿನಿ ಕಾರ್ಮಿಕರ ಪರ ನಿಂತ ಚಿತ್ರರಂಗ
ಕೊರೋನಾ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಸಿನಿಮಾ ಕಾರ್ಮಿಕರ ವೇತನ ಪರಿಷ್ಕರಣೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ನಿರ್ಮಾಪಕ ಕೆ ಮಂಜು ಅವರ ಅಧ್ಯಕ್ಷತೆಯಲ್ಲಿ 36ಕ್ಕೂ ಹೆಚ್ಚು ನಿರ್ಮಾಪಕರನ್ನು ಒಳಗೊಂಡ ಸಿನಿಮಾ ಕಾರ್ಮಿಕರ ವೇತನ ಪರಿಷ್ಕರಣೆ ಸಮಿತಿಯಿಂದ ಹೊಸ ವೇತನ ವರದಿಯನ್ನು (new payment system) ರೂಪಿಸಿಲಾಗಿದ್ದು, ಸಮಿತಿ ಸೂಚಿಸಿರುವ ವರದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಸಂಪೂರ್ಣವಾಗಿ ಒಪ್ಪಿಗೆ ಸೂಚಿಸಿದೆ. ಆ ಮೂಲಕ ನಿರ್ಮಾಪಕರಿಗೆ ಹೊರೆ ಅನಿಸಿದರೂ ಚಿತ್ರೋದ್ಯಮದ ಕುಟುಂಬದ ಸದಸ್ಯರಾಗಿರುವ ಸಿನಿಮಾ ಕಾರ್ಮಿಕರಿಗೆ ಒಳ್ಳೆಯದಾಗಬೇಕು ಎನ್ನುವ ಆಲೋಚನೆಯಲ್ಲಿ ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಒಳಗೊಂಡಂತೆಯೇ ಹೊಸ ವೇತನ ಪರಿಷ್ಕರಣೆ ಮಾಡಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾ ಕಾರ್ಮಿಕರಿಗಾಗಿ ರೂಪಿಸಿರುವ ಹೊಸ ವೇತನದ ಕುರಿತು ನೀಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಅವರು , ‘36ಕ್ಕೂ ಹೆಚ್ಚು ನಿರ್ಮಾಪಕರನ್ನು ಒಳಗೊಂಡ ವೇತನ ಪರಿಷ್ಕರಣೆ ಸಮಿತಿಯನ್ನು ನಿರ್ಮಾಪಕ ಕೆ ಮಂಜು ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಮೂರು ತಿಂಗಳ ಕಾಲ ಹಲವು ಹಂತಗಳಲ್ಲಿ ಸಭೆಗಳನ್ನು ನಡೆಸುವ ಜತೆಗೆ ಹಲವರ ಅಭಿಪ್ರಾಯಗಳನ್ನು ಸಂಗ್ರಹಿಸಿ ನೀಡಿರುವ ವೇತನ ಪರಿಷ್ಕರಣಾ ವರದಿ ಅತ್ಯಂತ ಸಮಂಜಸವಾಗಿದೆ. ರಜೆ ಹಾಗೂ ಹಬ್ಬದ ದಿನಗಳಲ್ಲಿ ಕೆಲಸ ಮಾಡಿದರೆ ಸಂಬಳದ (ದಿನದ ವೇತನ) ಜತೆಗೆ ಹೆಚ್ಚುವರಿ ಕೆಲಸದ ಬಾಟಾ (ದಿನದ ಕೂಲಿ), ಪ್ರಯಾಣದ ಬಾಟಾ ವೇತನದಲ್ಲಿ ಅರ್ಧ ಮಾತ್ರ ಕಡಿತ ಮಾಡಲಾಗಿದೆ. ಆದರೂ ಪೂರ್ತಿ ಬಾಟಾ ಕೋಡಲೇ ಬೇಕು ಎಂದು ಪಟ್ಟು ಹಿಡಿದಿರುವುವುದು ಸರಿಯಲ್ಲ. ದಿನದ ವೇತನ ಜತೆಗೆ ಪೂರ್ತಿ ಹೆಚ್ಚುವರಿ ಬಾಟಾ ಬದಲು ಅರ್ಧ ಕೂಲಿ ಕೊಡಲು ಸಮಿತಿ ಸೂಚಿಸಿದೆ. ನಿರ್ಮಾಪಕರಿಗೆ ಸ್ವಲ್ಪ ಹೊರೆಯಾದರೂ ನಿರ್ಮಾಪಕರು ಈ ಹೊಸ ವೇತನಕ್ಕೆ ಒಪ್ಪಿಕೊಂಡಿದ್ದಾರೆ. ಆದರೂ ಕೆಲವರು ದಿನದ ಬಾಟಾದಲ್ಲಿ ಕಡಿತ ಮಾಡಿದ್ದಾರೆ ಎಂದು ನೆಪ ಒಡ್ಡಿ ಹೊಸ ವೇತನಕ್ಕೆ ವಿರೋಧ ಮಾಡುತ್ತಿದ್ದಾರೆ. ಜತೆಗೆ ಶೂಟಿಂಗ್ನಲ್ಲಿರುವ ಸಿನಿಮಾಗಳ ಕೆಲಸಗಳನ್ನು ನಿಲ್ಲಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಇದು ಸರಿಯಾದ ನಡೆ ಅಲ್ಲ. ಒಂದು ವೇಳೆ ಈ ಬೆದರಿಕೆ ವರ್ತನೆಗಳು ಮುಂದುವರಿದರೆ ಕಾನೂನು ವ್ಯಾಪ್ತಿಯ ಜತೆಗೆ ಚಿತ್ರರಂಗದ ನಿಯಮಗಳ ಪ್ರಕಾರ ನಾವೂ ಕೂಡ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
Gandaberunda; ನಮ್ಮ ಹೆಮ್ಮೆಯ ಕರುನಾಡಿನ ಗಂಡಭೇರುಂಡ; ಈ ಎರಡು ತಲೆ ಪಕ್ಷಿಯ ರಹಸ್ಯ ?
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ‘ಕೆ ಮಂಜು ಅವರ ಅಧ್ಯಕ್ಷತೆಯ ವೇತನ ಪರಿಷ್ಕರಣೆ ಸಮಿತಿ ನೀಡಿರುವ ವರದಿಗೆ ನಿರ್ಮಾಪಕರ ಸಂಘದ ಒಪ್ಪಿಗೆ ಇದೆ. ಈಗಿನಿಂದಲೇ ಹೊಸ ವೇತನ ಜಾರಿಯಾಗಲಿದೆ. ಯಾರಾದರೂ ಈ ಹೊಸ ವೇತನವನ್ನು ಉಲ್ಲಂಘಿಸುವುದು ಅಥವಾ ಚಿತ್ರೀಕರಣಕ್ಕೆ ತೊಂದರೆ ಕೊಟ್ಟರೆ ನಿರ್ಮಾಪಕರು ತೆಗೆದುಕೊಳ್ಳುವ ಸ್ವತಂತ್ರ ನಿರ್ಧಾರಗಳಿಂದ ಬರಬಹುದಾದ ಪರಿಣಾಮಗಳನ್ನು ಸಿನಿಮಾ ಕಾರ್ಮಿಕರೇ ಎದುರಿಸಬೇಕಾಗುತ್ತದೆ’ ಎಂದು ಪರೋಕ್ಷವಾಗಿ ಎಚ್ಚರಿಸಿದರು.
ಹೊಸ ವೇತನ ಪರಿಷ್ಕರಣೆ ಸಮಿತಿ ಅಧ್ಯಕ್ಷ ಕೆ ಮಂಜು ಮಾತನಾಡಿ, ‘ಮೂರು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವುದು ಚಿತ್ರೋದ್ಯಮದ ವಾಡಿಕೆ. ಕೊರೋನಾದಿಂದ ಕಳೆದ ನಾಲ್ಕು ವರ್ಷಗಳಿಂದ ಸಿನಿಮಾ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಆಗಿಲ್ಲ. ನಿರ್ಮಾಪಕರಿಗೆ ಏನೇ ಕಷ್ಟ ಇದ್ದರೂ ಕಾರ್ಮಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮೂರು ತಿಂಗಳ ಕಾಲ ಕೆಲಸ ಮಾಡಿ 30ಕ್ಕೂ ಹೆಚ್ಚು ಸಭೆ, ಚಿತ್ರರಂಗದ ದಿಗ್ಗಜರ, ಚಿತ್ರೋದ್ಯಮದ ಸಂಘ- ಸಂಸ್ಥೆಗಳ ಅಭಿಪ್ರಾಯಗಳನ್ನು ತೆಗೆದುಕೊಂಡೇ ನಾವು ಹೊಸ ವೇತನ ಪರಿಷ್ಕರಣೆ ಮಾಡಿದ್ದೇವೆ. ರಜೆ ಹಾಗೂ ಹಬ್ಬದ ದಿನಗಳಲ್ಲಿ ಮಾಡುವ ಕೆಲಸಕ್ಕೆ ಅರ್ಧ ಬಾಟಾ ಕಡಿತ ಮಾಡಿರುವುದಕ್ಕೆ ವಿರೋಧ ಮಾಡುತ್ತಿರುವುದು ಸರಿಯಲ್ಲ. ರಜೆ ದಿನಗಳಲ್ಲೂ ಕೆಲಸ ಕೊಡುತ್ತಿದ್ದೇವೆ. ಸಂಬಳ ಜತೆಗೆ ಅರ್ಧ ಕೂಲಿಯೂ ಹೆಚ್ಚುವರಿಯಾಗಿ ಕೊಡುತ್ತಿದ್ದೇವೆ. ಹೀಗಾಗಿ ನಾವು ರೂಪಿಸಿರುವ ಹೊಸ ವೇತನ ಪರಿಷ್ಕರಣೆ ವರದಿ ಅತ್ಯಂತ ವೈಜ್ಞಾನಿಕವಾಗಿದೆ. ಚಿತ್ರರಂಗ ತುಂಬಾ ಕಷ್ಟದಲ್ಲಿದೆ. ನಿರ್ಮಾಪಕರಿಗೆ ಹಾಕಿದ ಹಣ ವಾಪಸ್ಸು ಬರುತ್ತದೋ ಇಲ್ಲವೋ ಎನ್ನುವ ಗ್ಯಾರಂಟಿ ಇಲ್ಲ. ಆದರೂ ನಾವು ಎಲ್ಲರಿಗೂ ಹಣ ಪಾವತಿ ಮಾಡಿಯೇ ಕೆಲಸ ಮಾಡಿಸುತ್ತಿದ್ದೇವೆ’ ಎಂದರು.
Trailer; “ಇನಾಮ್ದಾರ್” ಚಿತ್ರದ ಟ್ರೇಲರ್ ರಿಲೀಸ್; ಅ. 27ರಂದು ತೆರೆಗೆ
ವೇತನ ಪರಿಷ್ಕರಣೆ ಸಮಿತಿ ಸದಸ್ಯ ದಯಾಳ್ ಪದ್ಮನಾಭನ್ ಮಾತನಾಡಿ, ‘ನಾಲ್ಕು ವರ್ಷಗಳಿಂದ ವೇತನ ಪರಿಷ್ಕರಣೆ ಮಾಡಿಲ್ಲ. ಆ ನಾಲ್ಕು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ವರ್ಷಕ್ಕೆ ಶೇ.5ರಂತೆ ನಾಲ್ಕು ವರ್ಷಗಳನ್ನು ಸೇರಿಸಿ ಶೇ.20ರಷ್ಟು ವೇತನ ಹೆಚ್ಚಳ ಮಾಡಿದ್ದೇವೆ. ಇದರಿಂದ ಚಿತ್ರರಂಗದ ಆಯಾ ವಿಭಾಗಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರಿಗೆ ಶೇ.45 ರಿಂದ 70ರಷ್ಟು ವೇತನ ಹೆಚ್ಚಳವಾಗಲಿದೆ’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮೀಳಾ ಜೋಷಾಯ್, ನರಸಿಂಹಲು, ಭಾ ಮ ಗಿರೀಶ್, ಪ್ರವೀಣ್ ಕುಮಾರ್ ಮುಂತಾದವರು ಹಾಜರಿದ್ದರು.