Blood donation; ರಕ್ತದಾನ ಎಂಬುದು ಕೇವಲ ದಾನವಲ್ಲ, ಜೀವದಾನ

ದಾವಣಗೆರೆ, ಅ.07: ಪ್ರಗತಿಪರ ಶಿಕ್ಷಕರ ವೇದಿಕೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಸಮಿತಾಶ್ರಯದಲ್ಲಿ ಪಟ್ಟಣದ ಗುರುಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ (Blood donation) ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಪ್ರಗತಿಪರ ಶಿಕ್ಷಕರ ವೇದಿಕೆಯ ಮುಖಂಡರಾದ ಕೆ.ಹುಸೇನ್ ಸಾಹೇಬ್ ಪ್ರಾಸ್ತಾವಿಕ ನುಡಿ ಮಾತನಾಡಿ ಪ್ರಗತಿಪರ ಶಿಕ್ಷಕರ ವೇದಿಕೆ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸರ್ಕಾರಿ ಶಾಲೆಗಳ ಪ್ರಾಥಮಿಕ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸುವಂತಹ ಕೆಲಸ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಅನಾಥ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನ ವಿತರಿಸುವಂತಹ ಕೆಲಸ ಮಾಡುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೈಲೇಶ್ ಬೆವೂರ್ ಕಾರ್ಯಕ್ರಮದ ಉದ್ಘಾಟನಾ ನುಡಿ ಮಾತನಾಡಿ, ರಕ್ತದಾನ ಎಂಬುದು ಕೇವಲ ದಾನವಲ್ಲ ಅದು ಜೀವದಾನವಿದ್ದಂತೆ, ನಿರಂತರ ರಕ್ತದಾನ ಮಾಡುವುದರಿಂದ ಅನೇಕ ಖಾಯಿಲೆಗಳು ದೂರವಾಗಿ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಜಿಯವರ ಕೊಡುಗೆ ಅಪಾರವಾದದ್ದು ಎಂದು ಸ್ಮರಿಸಿದರು.

Gandaberunda; ನಮ್ಮ ಹೆಮ್ಮೆಯ ಕರುನಾಡಿನ ಗಂಡಭೇರುಂಡ; ಈ ಎರಡು ತಲೆ ಪಕ್ಷಿಯ ರಹಸ್ಯ ?

ಖ್ಯಾತ ವೈದ್ಯರಾದ ಡಾ. ಹೆಚ್. ಆನಂದ್ ಹಾಗೂ ಡಾ.ಪಿ .ಅಶ್ವಿನಿ ಅವರು ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆ ಮಾಡಿ ಉಚಿತವಾಗಿ ಔಷಧಿಗಳನ್ನು ವಿತರಿಸಿದರು. ಈ ಆರೋಗ್ಯ ತಪಾಸಣೆಯಲ್ಲಿ 150 ಜನರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಕೊಟ್ರೇಶ್ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಎಲ್,ಡಿ ರವಿ ನಾಯ್ಕ, ಶಿಕ್ಷಣ ಸಂಯೋಜಕರಾದ ಮುಸ್ತಕ್ ಅಹಮದ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಉಮಪತಿ ಶೆಟ್ಟರ್, ಜಿಲ್ಲಾ ಉಪಾಧ್ಯಕ್ಷರಾದ ಬುಡ್ಡಿ ಬಸವರಾಜ್ ,ಪ್ರಧಾನ ಕಾರ್ಯದರ್ಶಿ, ಡಿ ಭೀಮರಾಜ ನಾಯಕ ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಕೆ. ಮಲ್ಲಿಕಾರ್ಜುನ, ಪ್ರಾಥಮಿಕ ಶಾಲಾ ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷರಾದ ಬಿ. ಚಂದ್ರಪ್ಪ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ಅಧ್ಯಕ್ಷರಾದ ಎ. ಸೋಮನಗೌಡ, ದಲಿತ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾದ ಬಿಬಿಜಿ ಗೌತಮ್ ಪ್ರಧಾನ ಕಾರ್ಯದರ್ಶಿ ಡಿ. ರಾಮನಾಯ್ಕ, ಹಾಲಪ್ಪ , ಜಿ. ವೀರಣ್ಣಗೌಡ, ಹೆಚ್.ಕೊಟ್ರಪ್ಪ, ಎಂ.ರಾಜು, ಗೂಳೆಪ್ಪ ಹೂಲಿಮನಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ತಂಬ್ರಹಳ್ಳಿ ನಾಗರಾಜ್, ಸ್ವಾಮಿ ವಿವೇಕಾನಂದ ರಕ್ತ ಕೇಂದ್ರದ ಸಿಬ್ಬಂದಿಯವರಾದ ವಿರೂಪಾಕ್ಷ, ಪ್ರದೀಪ್, ಕೀರ್ತನ ಉಪಸ್ಥಿತರಿದ್ದರು .

25 ರಕ್ತದಾನಿಗಳು ರಕ್ತದಾನ ಮಾಡಿದರು .ರಕ್ತದಾನ ಮಾಡಿದ ಎಲ್ಲ ರಕ್ತದಾನಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಶಿಕ್ಷಕಿ ಗಾಯಿತ್ರಿ ಪ್ರಾರ್ಥನೆ ಮಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಟಿ. ಸೋಮಶೇಖರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು, ಬಿಬಿಜಿ ಗೌತಮ್ ಎಲ್ಲರಿಗೂ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!