ದಾವಣಗೆರೆ.: ಮಹಾನಗರ ಪಾಲಿಕೆಯಲ್ಲಿ ಹಂಚಿಕೆಯಾಗಿರುವ ಆಶ್ರಯ ಮನೆ ಹಂಚಿಕೆ ವಿಚಾರದಲ್ಲಿ ನಡೆದಿರುವ ಭ್ರಷ್ಟಾಚಾರ ಸೇರಿ ದಾವಣಗೆರೆ ನಗರ ಹಾಗೂ ಜಿಲ್ಲೆಯಲ್ಲಿ ನಡೆದಿರುವ ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ನಗರದಲ್ಲಿಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದ್ರರು.
ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಹಂಚಿಕೆಯಾಗಿರುವ ಆಶ್ರಯ ಮನೆ ನಿವೇಶನದಲ್ಲು ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತರು ಈ ಬಗ್ಗೆ ತನಿಖೆ ನಡೆಸಿ ಅಕ್ರಮದ ಬಗ್ಗೆ ಶೀಘ್ರದಲ್ಲಿಯೇ ತನಿಖೆ ವರದಿ ನೀಡಲಿದ್ದಾರೆ. ಬಿಜೆಪಿ ಶಾಸಕರು ಸಚಿವರು ದಾವಣಗೆರೆಯನ್ನು ಲೂಟಿ ಮಾಡಿ ಹೋಗಿದ್ದಾರೆ, ಅದನ್ನ ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಸರ್ಕಾರಿ ಆಸ್ತಿಯನ್ನು ಸಬ್ ರಿಜಿಸ್ಟರ್ ಆಪೀಸ್ ನಲ್ಲಿ ರಿಜಿಸ್ಟರ್ ಮಾಡಿಸಿ ಮಾರಿದ ಆರೋಪ ಇದೆ.ಈ ಬಗ್ಗೆ ತನಿಖೆ ನಡೆಸಲಾಗುವುದು.ನಾವು ಇದ್ದಾಗ ಕೇವಲ 3 ಕೋಟಿ ವೆಚ್ಚದಲ್ಲಿ ಕುಂದವಾಡ ಕೆರೆ ಕಟ್ಟಿದ್ದೇವೆ. ಇದೀಗ ಆ ಕೆರೆ ಅಭಿವೃದ್ಧಿ ಗೆ 13 ಕೋಟಿ ವೆಚ್ಚಮಾಡಿದ್ದಾರೆ. ದಾವಣಗೆರೆ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಹಲವಾರು ಹಗರಣಗಳು ನಡೆದಿವೆ. ಅವುಗಳ ವರದಿಯನ್ನು ಜಿಲ್ಲಾಧಿಕಾರಿಗೆ ಕೊಡುವಂತೆ ಕೇಳಿದ್ದೇನೆ ಎಂದರು.
