ಮಾ.19ರಂದು `ಸಂಪಾದನ ಸೂಕ್ತಿಗಳು’ ಕೃತಿ ಲೋಕಾರ್ಪಣೆ

ಮಾ.19ರಂದು `ಸಂಪಾದನ ಸೂಕ್ತಿಗಳು' ಕೃತಿ ಲೋಕಾರ್ಪಣೆ

ದಾವಣಗೆರೆ: ಇದೇ ಮಾರ್ಚ್ 19ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ಡಿ.ಜಿ ರೇವಣಸಿದ್ದಪ್ಪ ಅವರ ಚೊಚ್ಚಲ ಕೃತಿ `ಸಂಪಾದನ ಸೂಕ್ತಿಗಳು’ ಲೋಕಾರ್ಪಣೆ ಸಮಾರಂಭ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಾಹಿತಿ ಎಸ್.ಓಂಕಾರಯ್ಯ ತವನಿಧಿ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೇಣುಕಾ ಪ್ರಕಾಶನ ಸಹಯೋಗದಲ್ಲಿ ನಡೆಯುವ ಲೋಕಾರ್ಪಣೆ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಉದ್ಘಾಟಿಸಲಿದ್ದಾರೆ. ನಿಕಟೂರ್ವ ಅಧ್ಯಕ್ಷ ಡಾಹೆಚ್.ಎಸ್. ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಶಾ ತಂತ್ರಜ್ಞರ ಅಧ್ಯಕ್ಷ ಮಹೇಶ್ ಕೆ.ಟಿ. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಕೃತಿಯ ಲೇಖಕ ರೇವಣಸಿದ್ದಪ್ಪ ಡಿ.ಜಿ. ಮಾತನಾಡಿ, ಔಷಧಿ ರಹಿತ ಜೀವನ ವ್ಯವಸ್ಥೆ, ರಸಾಯನಿಕ ಮುಕ್ತ ಆಹಾರಪದ್ಧತಿ ಕುರಿತ ಅನುಭವಗಳು ಕೃತಿಯಲ್ಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಎಸ್. ನಾಗರಾಜ್, ಪಿ.ಎಸ್. ಜಯಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!