Female Model: ಮಹಿಳಾ ಯುವ ರೂಪದರ್ಶಿಯಾಗಲು ಅವಕಾಶ: ಆಡಿಷನ್ ಆಯ್ಕೆಗೆ ನೊಂದಾಯಿಸಿ

Model-Hunt-Add
ದಾವಣಗೆರೆ: ಕಲಾನಿಕೇತನ ಕಾಲೇಜ್ ಆಫ್ ಫ್ಯಾಷನ್ ಡಿಜೈನಿಂಗ್ ಕಾಲೇಜಿನ ವತಿಯಿಂದ 2022-23ನೇ ಸಾಲಿನ ವಿದ್ಯಾರ್ಥಿನಿಯರುಗಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡ “ಕಲಾ ಕೃತಿಕ -2023” ಫ್ಯಾಷನ್ ಶೋ ಹಮ್ಮಿಕೊಂಡಿದ್ದಾರೆ.

ಸದರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ತಾವುಗಳೇ ವಿನ್ಯಾಸಗೊಳಿಸಿದ ವೈವಿಧ್ಯಮಯ ಮತ್ತು ಕಲಾತ್ಮಕವಾದ ವಸ್ತç ವಿನ್ಯಾಸ ಪ್ರದರ್ಶನವನ್ನು ನಡೆಸಿಕೊಡುವರು.

ಸ್ಥಳೀಯ ಉದಯೋನ್ಮುಖ ಯುವ ಮಹಿಳೆಯರಿಗೆ ಮಾಡೆಲಿಂಗ್ ಕ್ಷೇತ್ರವನ್ನು ಪ್ರವೇಶಿಸಲು ನಮ್ಮ ಕಾಲೇಜಿನ ಈ ವೇದಿಕೆ ಅತ್ಯಂತ ಪ್ರಶಸ್ತವಾಗಿದೆ. ಕಾರಣ ದಾವಣಗೆರೆ ಜಿಲ್ಲೆ ಹಾಗು ಸುತ್ತ ಮುತ್ತಲಿನ ಜಿಲ್ಲೆಯ 16 ರಿಂದ 28 ವರ್ಷಗಳ ಯುವತಿಯರು ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಫಿಮೇಲ್ ಮಾಡೆಲ್ ಆಡಿಷನ್‌ನಲ್ಲಿ ಆಯ್ಕೆಯಾದ ಯುವತಿಯರಿಗೆ “ಕಲಾ ಕೃತಿಕ -2023” ವೈವಿಧ್ಯಮಯ ಮತ್ತು ಕಲಾತ್ಮಕವಾದ ವಸ್ತç ವಿನ್ಯಾಸ ಪ್ರದರ್ಶನದ ಫ್ಯಾಷನ್ ಸ್ಪರ್ಧೆಯಲ್ಲಿ ವಿಜೇತರಿಗೆ ವಿವಿಧ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳ ಜೊತೆಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರ ಮಾಡೆಲಿಂಗ್ ಪ್ರೊಫೈಲ್ ಕೂಡ ನೀಡಲಾಗುವುದು.

ಮಾಡೆಲ್ ಆಡಿಷನ್ ನೀಡಲು ಬಯಸುವ ಯುವತಿಯರು ಈ ಕೆಳಗಿನ ಮೋಬೈಲ್ ನಂಬರ್‌ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಮೋಬೈಲ್ ಸಂಖ್ಯೆ : 9538179129, 7892133211, 9880817773.

ಮಾಡೆಲ್ ಆಡಿಷನ್ ದಿನಾಂಕ: 09-07-2023
ಸ್ಥಳ : ಕಲಾನಿಕೇತನ ಕಾಲೇಜ್ ಆಫ್ ಫ್ಯಾಷನ್ ಡಿಜೈನಿಂಗ್, ದಾವಣಗೆರೆ.
ಸಮಯ: ಬೆಳಿಗ್ಗೆ 10.30 ರಿಂದ

– ಪ್ರಾಂಶುಪಾಲರು
ಕಲಾನಿಕೇತನ ಕಾಲೇಜ್ ಆಫ್ ಫ್ಯಾಷನ್ ಡಿಜೈನಿಂಗ್, ದಾವಣಗೆರೆ

Leave a Reply

Your email address will not be published. Required fields are marked *

error: Content is protected !!