ಭಾರತದ ಹುಡುಗನನ್ನು ವರಿಸಲಿದ್ದಾಳೆ ಪಾಕಿಸ್ತಾನದ ಹುಡುಗಿ! ಸಿಕ್ತು 45 ದಿನಗಳ ವೀಸಾ

pakistan-girl-will-marry-indian-man-in-kolkata-west-bengal

ನವದೆಹಲಿ: ಭಾರತದ ಅಂಜು ಮತ್ತು ಪಾಕಿಸ್ತಾನದ ಸೀಮಾ ಹೈದರ್ ಅವರ ಕ್ರಾಸ್‌ ಬಾರ್ಡರ್‌ ಲವ್ ಸ್ಟೋರಿಗಳ ಮಧ್ಯೆ, ಪಾಕಿಸ್ತಾನ ಮತ್ತೊಬ್ಬ ಹುಡುಗಿಯೊಬ್ಬಳು ಭಾರತದ ಹುಡುಗನನ್ನು ಮದುವೆಯಾಗಲು ಮುಂದಾಗಿದ್ದಾಳೆ. ಇದಕ್ಕಾಗಿ ಆಕೆಗೆ 45 ದಿನಗಳ ಭಾರತದ ವೀಸಾ ಕೂಡ ದೊರೆತಿದೆ. ಭಾರತದ ಹುಡುಗನನ್ನು ವರಿಸಲಿರುವ ಪಾಕಿಸ್ತಾನದ ವಧು ಜವಾರಿಯಾ ಖಾನುಮ್ ಅವರು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಬರಲಿದ್ದಾಳೆ.

ಜವಾರಿಯಾ ಖಾನುಮ್ ಅವರು ಕೋಲ್ಕೊತಾ ಮೂಲದ ಸಮಿರ್ ಖಾನ್ ಅವರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರೂ ಈಗಾಗಲೇ ನಿಶ್ಛಿತಾರ್ಥ ಮಾಡಿಕೊಂಡಿದ್ದಾರೆ. ಮದುವೆಯಾಗಲಿರುವ ಜವಾರಿಯಾ ತಮ್ಮ ತಂದೆ ಜತೆಗೆ ಭಾರತಕ್ಕೆ ಬರಲಿದ್ದಾಳೆ. ವಾಘಾ ಗಡಿಯಲ್ಲಿ ಸಮಿರ್ ಖಾನ್ ಹಾಗೂ ಅವರ ತಂದೆ ಅಹ್ಮದ್ ಕಮಲ್ ಖಾನ್ ಯುಸಫ್‌ಜಾಯಿ ಅವರು, ಕರಾಚಿ ನಿವಾಸಿ ಅಜ್ಮತ್ ಇಸ್ಮಾಯಿಲ್ ಖಾನ್ ಮತ್ತು ಅವರ ಮಗಳು ಜವಾರಿಯಾ ಖಾನುಮ್ ಅವರನ್ನು ಬರಮಾಡಿಕೊಳ್ಳಲಿದ್ದಾರೆ.

ಸಮೀರ್ ಖಾನ್ ಮತ್ತು ಅವರ ತಂದೆ ಪ್ರಸ್ತುತ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಖಾಡಿಯನ್ ಗ್ರಾಮದಲ್ಲಿ ಸಂಬಂಧಿಕರೊಂದಿಗೆ ಇದ್ದಾರೆ. ಪಾಕಿಸ್ತಾನದಿಂದ ಆಗಮಿಸುವ ತಮ್ಮ ಇಬ್ಬರು ಅತಿಥಿಗಳಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಪಾಕಿಸ್ತಾನ ಮತ್ತು ಭಾರತ ಮಧ್ಯೆ ರಾಜತಾಂತ್ರಿಕ ಸಂಬಂಧಗಳು ಚೆನ್ನಾಗಿಲ್ಲ. ಅದೇ ಕಾರಣಕ್ಕಾಗಿ ಪಾಕಿಸ್ತಾನದ ಜವಾರಿಯಾಗೆ ವೀಸಾ ಸಿಗುವುದು ಭಾರೀ ಕಷ್ಟವಾಗಿತ್ತು. ಆದರೆ, ಪಂಜಾಬ್‌ನ ಖಾಡಿಯನ್ ಗ್ರಾಮದ ಸಾಮಾಜಿಕ ಕಾರ್ಯಕರ್ತ ಮಕ್ಬೂಲ್ ಅಹ್ಮದ್ ಖಾದಿಯಾನ್ ಅವರು, ಜವಾರಿಯಾ ಖಾನುಮ್ ಮತ್ತು ಅವರ ತಂದೆಗೆ ವೀಸಾ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಬ್ಬರಿಗೂ ಭಾರತವು 45 ದಿನಗಳ ವೀಸಾವನ್ನು ದಯಪಾಲಿಸಿದೆ.

ಜವಾರಿಯಾ ಮತ್ತು ಸಮಿರ್ ಖಾನ್ ಮದುವೆಯು ಕೋಲ್ಕೊತಾದಲ್ಲಿ ನಡೆಯಲಿದೆ. ವಾಘಾ-ಅಟ್ಟಾರಿ ಗಡಿಗೆ ಜವಾರಿಯಾ ಖಾನುಮ್ ಮತ್ತು ಅವರ ತಂದೆ ಆಗಮಿಸುತ್ತಿದ್ದಂತೆ ಅವರನ್ನು ಅಮೃತಸರಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿಂದ ಅವರು ಕೋಲ್ಕೊತಾಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಸಮಿರ್ ಮತ್ತು ಜವಾರಿಯಾ ಇಬ್ಬರು ಮದುವೆಯಾಗಲಿದ್ದಾರೆ. ಮದುವೆಯ ಬಳಿಕ ಜವಾರಿಯಾ ಅವರು ವೀಸಾ ಅವಧಿಯನ್ನು ವಿಸ್ತರಿಸುವಂತೆ ಮತ್ತೆ ಮನವಿ ಸಲ್ಲಿಸಲಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!