ಹಿಂದೂಗಳಿಗೆ ಭಾರತಕ್ಕೆ ಬಾರದಂತೆ ತಡೆದ ಪಾಕಿಸ್ತಾನ

ಭಾರತಕ್ಕೆ ಬಾರದಂತೆ ತಡೆದ ಪಾಕಿಸ್ತಾನ
ಇಸ್ಲಾಮಾಬಾದ್: ಧಾರ್ಮಿಕ ವೀಸಾದಡಿ ಭಾರತಕ್ಕೆ ತೆರಳಲು ಹೊರಟಿದ್ದ ಹಿಂದೂಗಳಿಗೆ ಪಾಕಿಸ್ತಾನದ ಅಧಿಕಾರಿಗಳು ತಡೆ ಹಾಕಿದ್ದಾಗಿ ವರದಿಯಾಗಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ 190 ಮಂದಿ ಹಿಂದೂಗಳಿಗೆ ಭಾರತಕ್ಕೆ ತೆರಳದಂತೆ ಅಲ್ಲಿನ ಅಧಿಕಾರಿಗಳು ತಡೆ ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಿಂಧ್ ಪ್ರಾಂತ್ಯದ ಹಲವು ಹಿಂದೂ ಕುಟುಂಬಗಳು ಧಾರ್ಮಿಕ ವೀಸಾದಡಿ ಭಾರತಕ್ಕೆ ತೆರಳಲು ಮಂಗಳವಾರ ವಾಘಾ ಗಡಿ ತಲುಪಿದ್ದವು. ಅವರು ಭಾರತಕ್ಕೆ ತೆರಳುತ್ತಿರುವ ಕುರಿತಂತೆ ಸೂಕ್ತ ಕಾರಣ ನೀಡದ ಹಿನ್ನೆಲೆಯಲ್ಲಿ ಗಡಿಯಲ್ಲೇ ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹಳ ಪ್ರಮಾಣದ ಪಾಕಿಸ್ತಾನದ ಹಿಂದೂಗಳು ದೆಹಲಿ ಮತ್ತು ರಾಜಸ್ತಾನದಲ್ಲಿ ಅಲೆಮಾರಿಗಳಾಗಿ ಜೀವಿಸುತ್ತಿದ್ದಾರೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆ ಪೈಕಿ ಶೇಕಡ 1.18ರಷ್ಟು( 22,10,566) ಮಂದಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರಿದ್ದಾರೆ.