ಸಾಂಕ್ರಾಮಿಕ ರೋಗ ತಡೆಗಟ್ಟಲು ಕ್ರಮಕ್ಕೆ ಜಾಗೃತರಾಗಿ – ಆರೋಗ್ಯ ಇಲಾಖೆ ಎಂ ಉಮ್ಮಣ್ಣ
ಹರಿಹರ: ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ಸೊಳ್ಳೆಗಳನ್ನು ನಿಯಂತ್ರಣ ಗೊಳಿಸುವುದಕ್ಕೆ ಗ್ರಾಮೀಣ ಪ್ರದೇಶದ ಜನರು ಜಾಗೃತರಾಗಬೇಕೆಂದು ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಎಂ ಉಮ್ಮಣ್ಣ ಹೇಳಿದರು
ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಲೇರಿಯಾ ಮಾಸಾಚರಣೆ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿದ್ದು ಸಾಂಕ್ರಮಿಕ ರೋಗಗಳು ಹೆಚ್ಚೆಚ್ಚು ಹರಡುವುದರಿಂದ ನಾಗರಿಕರು ತಮ್ಮ ತಮ್ಮ ಮಕ್ಕಳ ಮತ್ತು ಕುಟುಂಬದ ಸದಸ್ಯರ ಆರೋಗ್ಯ ಹಿತ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು ಹೆಮ್ಮಾರಿ ವೈರಸ್ ಜತೆಗೆ ಇತರೆ ರೋಗವು ಉಲ್ಬಣ ಆಗುವ ಮೊದಲೇ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕಿನಲ್ಲಿ ಪ್ರತಿ ಗ್ರಾಮಗಳಿಗೆ ತೆರಳಿ ಆರೋಗ್ಯ ಇಲಾಖೆಯಿಂದ ಜಾಗೃತಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ನಗರ ಗ್ರಾಮೀಣ ಪ್ರದೇಶದ ಜನರು ರೋಗಗಳನ್ನು ತಡೆಗಟ್ಟುವುದಕ್ಕೆ ಆರೋಗ್ಯ ಇಲಾಖೆಯ ನರ್ಸಿಂಗ್ ಅಧಿಕಾರಿಗಳು ಆಶಾ ಕಾರ್ಯಕರ್ತರು ವೈದ್ಯ ಸಿಬ್ಬಂದಿಗಳೊಂದಿಗೆ ಸಹಕರಿಸಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದರು
ವೈದ್ಯರಾದ ಆಶಾ .ಹಿರಿಯ ಆರೋಗ್ಯ ಸಹಾಯಕ ಮಂಜುನಾಥ್ .ಕಿರಿಯ ಆರೋಗ್ಯ ಸಹಾಯಕ ಅಕ್ಷಯ್ ಕುಮಾರ್ .ನರ್ಸಿಂಗ್ ಅಧಿಕಾರಿ ಸುಧಾ .ಮೇಲ್ವಿಚಾರಕಿ ಸುಧಾ ಹಾಗೂ ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಇದ್ದರು