ಲಂಬಾಣಿ ತಾಂಡಗಳಲ್ಲಿ ಲಸಿಕೆ ಬಗ್ಗೆ ಅಭಿಯಾನ ಕಾರ್ಯ – ಕೆಪಿಸಿಸಿ ಎಸ್ ಸಿ ಘಟಕದ ನಾಗರಾಜನಾಯ್ಕ್ ಹೇಳಿಕೆ

ದಾವಣಗೆರೆ : ಜಿಲ್ಲೆಯ ಎಲ್ಲಾ ಬಂಜಾರ ಲಂಬಾಣಿ ತಾಂಡಗಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಅಭಿಯಾನವನ್ನು ಜೂನ್ 23ರಂದು ಮಾಯಕೊಂಡ ವಿಧಾನ ಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಉಪಾಧ್ಯಕ್ಷ ನಾಗರಾಜನಾಯ್ಕ ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ,  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,  ಪರಿಶಿಷ್ಟ ಜಾತಿ ಘಟಕದ  ರಾಜ್ಯಾಧ್ಯಕ್ಷ ಎಫ್.ಹೆಚ್.ಜಕ್ಕಪ್ಪ ಇವರ ಆಶಯದಂತೆ 23ರ  ಬೆಳಿಗ್ಗೆ 11ಕ್ಕೆ ಮಾಯಕೊಂಡ ಕ್ಷೇತ್ರದ ಬಸವಾಪಟ್ಟಣ ಹೋಬಳಿಯ ಹೊಸನಗರ ತಾಂಡದಲ್ಲಿ ಬಂಜಾರ ಲಂಬಾಣಿ ತಾಂಡಗಳಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಲಸಿಕೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಕಾರಣ 18 ರಿಂದ 45 ವರ್ಷದ ಮೇಲ್ಪಟ್ಟ ಎಲ್ಲ ವಯಸ್ಸಿನ ಜನತೆ ಯಾವುದೇ ಗೊಂದಲ ಇಲ್ಲದೇ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು. ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯದವರು ಲಸಿಕೆ ಪಡೆಯಲು ಮುಂದಾಗಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಹೆಚ್.ಬಿ.ವೀರಭದ್ರಪ್ಪ , ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಪಾಧ್ಯಕ್ಷ ನಾಗರಾಜನಾಯ್ಕ , ದಾವಣಗೆರೆ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್ . ನಂಜಾನಾಯ್ಕ , ಜಿಲ್ಲಾ ಉಪಾಧ್ಯಕ್ಷ ಡಾ.ಡಿ.ತುಳಸಿನಾಯ್ಕ, ಕಾಂಗ್ರೆಸ್ ಮುಖಂಡರಾದ  ಕಾಶೀನಾಥ್ , ಬಸವಾಪಟ್ಟಣ ಬ್ಲಾಕ್ ಪರಿಶಿಷ್ಟ ಜಾತಿ ಅಧ್ಯಕ್ಷ ಶಿವಗನಾಯ್ಕ , ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಕಾರ್ಯದರ್ಶಿ  ರಾಕೇಶ್ , ಪರಮೇಶ ನಾಯ್ಕ, ಮಂಜಾನಾಯ್ಕ ಮತ್ತು ಇನ್ನಿತರೆ ಬಂಜಾರ ಲಂಬಾಣಿ ಜನಾಂಗದವರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಬಿ.ಹೆಚ್.ವೀರಭದ್ರಪ್ಪ, ಶಿವನಾಯ್ಕ, ಬಿ.ಎಂ.ಈಶ್ವರ, ನಂಜಾನಾಯ್ಕ, ಡಾ.ತುಳಸೀ ನಾಯ್ಕ, ಶಿವಮೂರ್ತಿ, ರಾಕೇಶ್ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!