PDS Rice Siezed.! ಡಿ ಸಿ ಆರ್ ಬಿ ಪೋಲಿಸರ ಕಾರ್ಯಾಚರಣೆಯಲ್ಲಿ ಸಿಕ್ತು 23 ಟನ್ ಪಡಿತರ ಅಕ್ಕಿ

ದಾವಣಗೆರೆ: ಬಡವರ ಹಸಿವು ನೀಗಿಸಲು ಸರ್ಕಾರದಿಂದ ಕೊಡಮಾಡುತ್ತಿರುವ ಪಡಿತರ ಅಕ್ಕಿ ಕಾಳುಸಂತೆಕೋರರ ಪಾಲಾಗುತ್ತಿದೆ. ದಿನದಿಂದ ದಿನಕ್ಕೆ ಪಡಿತರ ಅಕ್ಕಿ ಕಳ್ಳ ಸಾಗಾಣೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ( pds rice) ಇಂದು ಸಹ ರಾಣೇಬೆನ್ನೂರಿನಿಂದ ಚಿತ್ರದುರ್ಗ-ತುಮಕೂರಿಗೆ ಸಾಗಿಸುತ್ತಿದ್ದ ಸುಮಾರು 3.59 ಲಕ್ಷ ಮೌಲ್ಯದ ಪಡಿತರ ಅಕ್ಕಿಯನ್ನು ವಿದ್ಯಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಮಧ್ಯಾಹ್ನ 1-30 ಗಂಟೆಗೆ ವಿದ್ಯಾನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದೀಪಕ್ @ ದೀಪು ಎಂಬ ವ್ಯಕ್ತಿ ಇತರರೊಂದಿಗೆ ಸೇರಿಕೊಂಡು ಲಾರಿಯಲ್ಲಿ ಬರೋಬ್ಬರಿ 23,950 ಕೆಜಿ (23 ಟನ್) ಅಕ್ಕಿಯನ್ನು ಗೋಣಿ ಚೀಲಗಳಿಂದ ತೆಗೆದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ರೂಪಾಂತರಗೊಳಿಸಿ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ವಿದ್ಯಾನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆಹಾರ ನಿರೀಕ್ಷಕರಾದ ಶಬಾನ ಪರ್ವೀನ್ ಅವರು ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!