ಹರಿಹರ, ಚನ್ನಗಿರಿಯಲ್ಲಿ ಮನೆ ಕಳ್ಳತನ ಮಾಡಿದ್ದ 6 ಜನ ಕಳ್ಳರ ಬಂಧನ : 3 ಲಕ್ಷ ಮೌಲ್ಯದ ಬಂಗಾರ ವಶಕ್ಕೆ ಪಡೆದ ಪೊಲೀಸ್

ದಾವಣಗೆರೆ: ಜಿಲ್ಲೆಯ ಹರಿಹರ, ಚನ್ನಗಿರಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಕಳ್ಳತನ ಮಾಡಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಸೇರಿದಂತೆ ಆರು ಆರೋಪಿಗಳನ್ನು ಮಲೇಬೆನ್ನೂರು ಪೊಲೀಸರು ಬಂಧಿಸಿದ್ದು, ತಲೆಮರೆಸಿ ಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಆರೋಪಿಗಳಿಂದ ಕಳ್ಳತನವಾಗಿದ್ದ 3 ಲಕ್ಷ ರೂ., ಮೌಲ್ಯದ 65 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,470 ರೂ., ನಗದು ಹಣವನ್ನು ವಶಕ್ಕೆಪಡೆದಿದ್ದಾರೆ.

ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಡರನಾಯಕನಹಳ್ಳಿ, ಕುಣಿಬೆಳಕೆರೆ, ನಿಟ್ಟೂರು, ಎಕ್ಕೆಗೊಂದಿ ಗ್ರಾಮಗಳು, ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುತ್ತೂರು , ಕೊಂಡಜ್ಜಿ, ಚನ್ನಗಿರಿ ಪೊಲೀಸ್ ಠಾಣೆಯ ಲಿಂಗದಹಳ್ಳಿ ಗ್ರಾಮದಲ್ಲಿ ವರದಿಯಾಗಿದ್ದ ಒಟ್ಟು 08 ಮನೆ ಕಳ್ಳತನ ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರೆ.

ಆರೋಪಿತರ ಪತ್ತೆಗಾಗಿ ದಾವಣಗೆರೆ ಗ್ರಾಮಾಂತರ ಉಪ -ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಕನ್ನಿಕಾ ಸಕ್ರಿವಾಲ್ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು ನೇತೃತ್ವದಲ್ಲಿ ಪ್ರೊ.ಡಿ.ಎಸ್.ಪಿ ಭೂತೇಗೌಡ, ಪಿ.ಎಸ್.ಐಗಳಾದ ವೀರಬಸಪ್ಪ ಕುಸಲಾಪುರ, ರವಿ ಕುಮಾರ್‌ ಡಿ, ಸುನೀಲ್ ಬಿ ತೇಲಿ, ಲತಾ ವಿ ತಾಳೇಕರ್‌ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ. ಯಾಸೀನ್ ಉಲ್ಲಾ, ರಾಜಶೇಖರ್.ಎ.ಬಿ., ಶಿವಕುಮಾರ್‌.ಕೆ., ಫೈರೋಜ್ ಖಾನ್, ವೆಂಕಟರಮಣ, ಲಕ್ಷ್ಮಣ್.ಆರ್, ನಾಗಪ್ಪ ಕಡೆಮನಿ, ಸಂತೋಷ್ ಕುಮಾರ್‌ ಹೆಚ್.ಜಿ., ವೆಂಕಟೇಶ್‌, ನಾಗರಾಜ ಸುಣಗಾರ, ಹನುಮಂತ ಎಸ್ ಗೋಪನಾಳ ಸೇರಿದಂತೆ ಮತ್ತಿತರ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಹರಿಹರ, ಚನ್ನಗಿರಿಯಲ್ಲಿ ಮನೆ ಕಳ್ಳತನ ಮಾಡಿದ್ದ 6 ಜನ ಕಳ್ಳರ ಬಂಧನ : 3 ಲಕ್ಷ ಮೌಲ್ಯದ ಬಂಗಾರ ವಶಕ್ಕೆ ಪಡೆದ ಪೊಲೀಸ್

Leave a Reply

Your email address will not be published. Required fields are marked *

error: Content is protected !!