ಪಶುಪತಿನಾಥ ದೇವಸ್ಥಾನದ ಲೋಕಾರ್ಪಣೆ

ದಾವಣಗೆರೆ: ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಪಶುಪತಿನಾಥ ದೇವಸ್ಥಾನದ ಲೋಕಾರ್ಪಣಾ ಸಮಾರಂಭವು ಜೂ.೧೬ರ ಇಂದು ಮಧ್ಯಾಹ್ನ ೨:೨೦ಕ್ಕೆ ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಾಲಯವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ, ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ಜಂಟಿ ಕಾರ್ಯದರ್ಶಿ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸ್ಥೆಯ ಅಧ್ಯಕ್ಷ ಆರ್. ರಮಾನಂದ, ಉಪಾಧ್ಯಕ್ಷರಾದ ಕೆ.ಎ. ಗಿರಿಜಮ್ಮ, ಡಾ. ಎಸ್. ಎಸ್. ನ್ಯಾಷನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಸ್.ಎಸ್ . ಗಣೇಶ್, ಖಜಾಂಚಿ ಎಸ್.ಎಸ್. ನಿರಂಜನ್, ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಎ.ಎಸ್. ವೀರಣ್ಣ, ಸಂಸ್ಥೆಯ ಸದಸ್ಯರಾದ ಪ್ರಭಾ ಮಲ್ಲಿಕಾರ್ಜುನ್, ಎಸ್.ಎಸ್. ಜಯಣ್ಣ ಮತ್ತು ಸಂಪನ್ನ ಮುತಾಲಿಕ್ ಇವರು ಉಪಸ್ಥಿತರಿರುವರು.

Leave a Reply

Your email address will not be published. Required fields are marked *

error: Content is protected !!