prathibha karanji; ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಉದ್ಘಾಟನೆ
ಚಿತ್ರದುರ್ಗ, ಸೆ.02: ವಿದ್ಯಾರ್ಥಿಗಳ ಪಠ್ಯೇತರ ಪ್ರತಿಭಾ ಅನ್ವೇಷಣೆ ಮತ್ತು ಸೂಪ್ತ ಪ್ರತಿಭೆಯ ಅನಾವರಣಗೊಳಿಸುವ ಇಲಾಖೆಯ ಅತ್ಯಮೂಲ್ಯ ಕಾರ್ಯಕ್ರಮವಾದ ಚಿತ್ರದುರ್ಗ ಪಶ್ಚಿಮ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ (prathibha karanji) ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಾಣಾಧಿಕಾರಿ ನಾಗಭೂಷಣ್.ಎಸ್. ಅವರು ಮಕ್ಕಳಿಂದಲೇ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಸಂಪತ್ ಕುಮಾರ್.ಇ ರವರು, ಅತ್ಯಂತ ಶಿಸ್ತುಬದ್ಧವಾಗಿ, ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ಪ್ರತಿಭೆಗೆ ತಕ್ಕ ಮೌಲ್ಯ ನೀಡಿ ಮುಂದಿನ ಹಂತಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ತೀರ್ಪುಗಾರರ ಮೇಲಿರುತ್ತದೆ ಆ ಕಾರಣದಿಂದ ಎಲ್ಲಾ ತೀರ್ಪುಗಾರರು ತಮ್ಮ ಮಗುವಿಗೆ/ತಮ್ಮ ಶಾಲೆಯ ಮಕ್ಕಳಿಗೆ ತೀರ್ಪು ನೀಡುತ್ತೇವೆ ಎಂಬ ಭಾವನೆಗಿಂತ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಆಯ್ಕೆ ಮಾಡುತ್ತಿದ್ದೇವೆ ಎಂಬ ಅಂಶವನ್ನು ಗಮನದಲ್ಲಿರಿಸಿಕೊಂಡು ತೀರ್ಪು ನೀಡುವಂತೆ ತೀರ್ಪುಗಾರರಿಗೆ ಕಿವಿಮಾತು ತಿಳಿಸಿದರು.
farmer; ನೀರಿಲ್ಲ, ಮೇವಿಲ್ಲ…ಸರ್ಕಾರವೇ, ರೈತರ ಬವಣೆ ಕೇಳಿ ಸ್ವಲ್ಪ!
ಪ್ರಾಸ್ತವಿಕ ಮಾತುಗಳನ್ನಾಡಿದ ಸಿ.ಆರ್.ಪಿ. ಅಜಯ್ ಕುಮಾರ್ ರವರು ಸುಮಾರು 800 ಮಕ್ಕಳು 31 ಶಾಲೆಗಳಿಂದ ವಿವಿಧ ಹಂತಗಳಲ್ಲಿ ವಿವಿಧ ಸ್ಪರ್ಧೆಗಳಿಗೆ ಭಾಗವಹಿಸಿರುತ್ತಾರೆ. 100ಕ್ಕೂ ಹೆಚ್ಚು ತೀರ್ಪುಗಾರರು ತೀರ್ಪು ನೀಡುತ್ತಾರೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ನೀಡಲಾಗುತ್ತದೆ. ಕ್ಲಸ್ಟರ್ ಹಂತದಲ್ಲಿ ಪ್ರಥಮ ಸ್ಥಾನ ಗಳಿಸಿದ ಮಕ್ಕಳಿಗೆ ಮಾತ್ರ ತಾಲ್ಲೂಕು ಹಂತದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಕ್ಲಸ್ಟರ್ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ 1 ಶಾಲೆಗೆ ಸಮಗ್ರ ಪ್ರಶಸ್ತಿಯನ್ನುನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪುಷ್ಪರಾಜ್.ಸಿ. ಮುಖ್ಯ ಶಿಕ್ಷಕರು ಇಲಾಖೆ ಮತ್ತು ಶಾಲೆಗಳು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸಹಸ್ರಾರು ಕಾರ್ಯಕ್ರಮಗಳನ್ನು ಆಯೋಜಿಸುವುದು ನಿರಂತರವಾಗಿರುತ್ತದೆ ಅಂತಹುಗಳಲ್ಲಿ ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವ ವಿಕಸನದ ದಾರಿದೀಪದಂತಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಆಯೋಜಿಸಲು ಅವಕಾಶ ಮಾಡಿಕೊಟ್ಟ ಇಲಾಖೆಗೆ ಧನ್ಯವಾದ ತಿಳಿಸಿದರು.
Ganesh Chaturthi; ಪ್ಲಾಸ್ಟರ್ ಗಣೇಶ ವಿಗ್ರಹಗಳನ್ನು ನೀರಿನ ಮೂಲಗಳಲ್ಲಿ ವಿಸರ್ಜಿಸುವಂತಿಲ್ಲ
ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಮತ್ತು ಅನುದಾನರಹಿತ ಶಾಲೆಗಳಲ್ಲಿ ೫ ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಕ್ಲಸ್ಟರಿನ ಶಿಕ್ಷಕರುಗಳಿಗೆ ಗೌರವ ಸಮರ್ಪಣೆ ಮತ್ತು ಕಸಬಾ ಇ.ಸಿ.ಓ ಆದ ಸೈಯದ್ ಇನಾಯತ್ ಉಲ್ಲಾ ಅವರಿಗೆ ವರ್ಗಾವಣೆ ಪ್ರಯುಕ್ತ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಇ.ಸಿ.ಓ. ನಾಗರಾಜ್, ಇ.ಸಿ.ಓ. ರವೀಂದ್ರನಾಥ್ ಮತ್ತು ಸಿ.ಆರ್.ಪಿ.ಗಳು ಆಸಿನರಾಗಿದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ರುದ್ರಪ್ಪ.ಜಿ.ಕೆ ನಿರ್ವಹಿಸಿದರು. ವಂದನಾರ್ಪಣೆಯನ್ನು ಮಾರುತಿ.ಬಿ.ಎಸ್ ಮೇಲ್ವಿಚಾರಕರಿಂದ ನಿರ್ವಹಿಸಲಾಯಿತು.