Kiccha Sudeep : ಬಿಜೆಪಿ ಪರ ಚಿತ್ರನಟ ಸುದೀಪ್ ಪ್ರಚಾರ: ಮುಂದಿನ ಭವಿಷ್ಯ ಯೋಚಿಸಿ – ಸಚಿವ ರಾಜಣ್ಣ ಕಿವಿಮಾತು

ದಾವಣಗೆರೆ; ಇತ್ತೀಚೆಗೆ ನಡೆದ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಚಿತ್ರನಟ ಸುದೀಪ್ ಒಂದು ಪಕ್ಷದ ಪರವಾಗಿ ಒಂದೇ ಸಮುದಾಯ ಇರುವ ಪ್ರದೇಶದಲ್ಲಿ ಪ್ರಚಾರ ಮಾಡಿರುವುದು ಸರಿಯಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಕಿಡಿಕಾರಿದ್ದಾರೆ.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಸಮಾಜದ ನೂತನ ಸಚಿವರು, ಶಾಸಕರಿಗೆ ಇಂದು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಸುದೀಪ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ಕ್ಷೇತ್ರಗಳಿಗೂ ಹೋಗಿ ಒಬ್ಬರ ಪರವಾಗಿ ಪ್ರಚಾರ ಮಾಡಿದ್ದನ್ನೂ ನಾವು ಖಂಡಿಸುತ್ತೇವೆ. ಸುದೀಪ್ ಒಬ್ಬ ಪ್ರತಿಭಾವಂತ ನಟರಾಗಿದ್ದು, ಅವರಿಗೆ ಎಲ್ಲಾ ಪಕ್ಷಗಳಲ್ಲೂ ಎಲ್ಲಾ ವರ್ಗದ ಅಭಿಮಾನಿ ಗಳಿದ್ದಾರೆ. ಈ ಅರಿವು ಇಲ್ಲದೇ ಅವರು ಒಂದು ಪಕ್ಷಕ್ಕೆ ಹಾಗೂ ಒಂದೇ ಸಮಾಜದ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಸೀಮಿತವಾಗಿದ್ದು ಬೇಸರ ತಂದಿದೆ.
ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಸುದೀಪ್ ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಯಲಿ ಇಲ್ಲದಿದ್ದರೆ ಅವರ ಮುಂದಿನ ಭವಿಷ್ಯ ಉತ್ತಮವಾಗಿರುವುದಿಲ್ಲ ಎಂದವರು ಹೇಳಿದ್ದಾರೆ.