ಮೋದಿ ಅಮಿತ್ ಶಾ  ಭಾವಚಿತ್ರ ಹಿಡಿದು  ಕಾರ್ಮಿಕ ಸಂಘಟನೆಗಳ ಆಕ್ರೋಶ: ಪೋಲಿಸರ ಹಾಗು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ

ದಾವಣಗೆರೆ:- ಬೆಲೆ ಏರಿಕೆ, ರೈತ ವಿರೋಧಿ ನೀತಿಗಳು, ಹಾಗು ಲಖೀಂಪುರ್ ಖೇರಿ ರೈತ ಹತ್ಯೆ ಪ್ರಕರಣ ಖಂಡಿಸಿ ನಗರದ ಜಯದೇವ ವೃತ್ತದಲ್ಲಿ

ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ಪ್ರತಿಭಟನೆ
ದಾವಣಗೆರೆ: ರೈತರಿಗೆ ಮಾರಕವಾಗಿರುವ ಕೃಷಿ ಕಾಯಿದೆಗಳನ್ನು ಕೈಬಿಡುವಂತೆ ಆಗ್ರಹಿಸಿ ಹಾಗೂ ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ರೈತರ ಹತ್ಯೆ ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ  ಬೆಳಗ್ಗೆ 11-30ಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ  ಅಖಿಲಭಾರತ ಕರೆಯ ಮೇರೆಗೆ ದಾವಣಗೆರೆಯ ಎಲ್ಲಾ ರೈತ ಸಂಘಟನೆಗಳು ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು , ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ರೈತ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆ,ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣ, ಕರ್ನಾಟಕ ರಾಜ್ಯ ರೈತ ಸಂಘ ಕೋಡಿಹಳ್ಳಿಬಣ   ಕರ್ನಾಟಕ ಜನಶಕ್ತಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ, ಸಿಐಟಿಯು, ಎಐಯುಟಿಯುಸಿ, ದಲಿತ ಸಂಘರ್ಷ ಸಮಿತಿ, ಎಐಟಿಯುಸಿ, ಸಿಪಿಐ, ಸಿಪಿಐಎಂ, ಸಂಘಟನೆಗಳು ಜಂಟಿಯಾಗಿ
ಪ್ರತಿಭಟನೆ ನಡೆಸಲಾಯಿತು.
ಬಳಿಕ ಪ್ರಧಾನಿ ಮೋದಿ ಹಾಗು ಗೃಹ ಮಂತ್ರಿ ಅಮಿತ್ ಶಾ ರವರ ಪೋಟೋ ವಿರೂಪಗೊಳಿಸಿ ಕಾರ್ಮಿಕ ಹಾಗು ಎಡ ಪಂಥಿಯ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಹಾಗು ಅಮಿತ್ ಷಾ ರವರ ಫೋಟೊ ಪ್ರತಿಭಟನೆ ಪ್ರದರ್ಶಿಸದಂತೆ ಪೋಲಿಸರು ಪ್ರತಿಭಟನಕಾರರನ್ನು ತಡೆದ ಬೆನ್ನಲ್ಲೇ ಪೋಲಿಸರ ಹಾಗು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಮಾತಿನ ಚಕಮಕಿ ವೇಳೆ ಕಾರ್ಮಿಕ ಸಂಘಟನೆಯ ಮುಖಂಡ ಉಮೇಶ್ ಹಾಗು ಪೋಲಿಸರು ಪ್ರಧಾನಿ ಮೋದಿಯವರ ಪೋಟೋ ಎಳೆದಾಡುವ ವೇಳೆ ಹರಿದುಹಾಕಲಾಯಿತು.

ಇದೇ ವೇಳೆ ಕಾರ್ಮಿಕ ಸಂಘಟನೆಗಳ ಮುಖಂಡ ಉಮೇಶ್ ಪ್ರಧಾನಿ ಮೋದಿಯವರ ಫೋಟೊವನ್ನು ಪೋಲಿಸರೇ ಹರಿದುಹಾಕಿದ್ದಾರೆ ಎಂದು ಆರೋಪ ಮಾಡಿದರು. ಬಳಿಕ ಜಯದೇವ ವೃತ್ತದಿಂದ ಗಾಂಧಿ ವೃತ್ತದ ತನಕ ಪ್ರಧಾನಿ ಮೋದಿ ಹಾಗು ಅಮಿತ್ ಶಾರವರ ಪೋಟೊ ಪ್ರದರ್ಶಿಸಿ ಪ್ರತಿಭಟನ ಮೆರವಣಿಗೆ ಮಾಡಲು ಕಾರ್ಮಿಕಾ ಹಾಗು ಎಡಪಂಥಿಯ ರೈತ ಸಂಘಟನೆಗಳಿಗೆ ಪೋಲಿಸರು ಅನುಮತಿ ನಿರಾಕರಿಸಿದ ಬೆನ್ನಲ್ಲೇ ಪ್ರತಿಭಟನಕಾರರು ಫೋಟೊಗಳನ್ನು ಪೋಲಿಸರಿಗೆ ಹಸ್ತಾಂತರಿಸಿದರು.

ಪ್ರತಿಭಟನೆಯೂ ಜಯದೇವ ವೃತ್ತದಿಂದ ಗಾಂಧಿ ವೃತ್ತದ ಕಡೆ ಬಹಿರಂಗ ಸಭೆ ನಡೆಸಿ ಅಂತ್ಯ ಮಾಡಲಾಯಿತು
ಪ್ರತಿಭಟನೆಯಲ್ಲಿ ಅವರಗೆರೆ ಉಮೇಶ್, ಅವರಗೆರೆ ಚಂದ್ರು, ಅವರಗೆರೆ ವಾಸು, ಐರಣಿ ಚಂದ್ರು, ಮಧು ತೊಗಲೇರಿ,ಕುಕ್ಕುವಾಡ ಮಂಜುನಾಥ್, ಮತ್ತಿತರು ಇದ್ದರು

Leave a Reply

Your email address will not be published. Required fields are marked *

error: Content is protected !!