ಪ್ರವರ್ಗ -1 ರ ಹಿಂದುಳಿದ ಸಮೂದಾಗಳ ಅಭಿವೃದ್ಧಿ ಕಡೆಗಣನೆ :ಬಾಡದ ಆನಂದರಾಜ್

ದಾವಣಗೆರೆ : – ಪ್ರವರ್ಗ- 1ರ ಅತೀ ಹಿಂದುಳಿ ಜಾತಿಗಳ ಜನಾಂಗದವರ ಬೇಡಿಕೆಗಳನ್ನ ಹೀಡೇರಿಸುವಂತೆ ಶೋಷಿತ ವರ್ಗಗಳ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಒತ್ತಾಯಿಸಿದರು.

ಇಂದು ಉಪ್ಪಾರ ಸಮಾಜ ಹಾಸ್ಟಲನಲ್ಲಿ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ತುರ್ಚಘಟ್ಟದ ತಿಪ್ಪಣ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಾಡದ ಆನಂದರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ .

ಪ್ರವರ್ಗ-1ರ ಜಾತಿಗಳಾದ ಉಪ್ಪಾರ .ಗೊಲ್ಲ.ಗಂಗಮತಸ್ಥ.ದೊಂಬಿದಾಸ.ಗೊರ್ಖ ಮತ್ತು ಇತರೆ ಜಾತಿಗಳು ಸೇರಿದಂತೆ ಎಲ್ಲಾ ಜಾತಿಗಳ ಕುಲಶಾಸ್ತ್ರಿಯ ಅದ್ಯಯನ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತಂತೆ ಸಭೆಯಲ್ಲಿ ಚರ್ಚೆಸಿಲಾಯಿತು.

ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಈ ಸಮೂದಾಯಗಳ ಶೈಕ್ಷಣಿಕ. ಸಾಮಾಜಿಕ.ಆರ್ಥಿಕ ಅಭಿವೃದ್ದಿಗೆ ಸರ್ಕಾರಗಳು ಗಮನಹರಿಸದೇ ಕಡೆಗಣಿಸುಸುತ್ತಿರವುದಾಗಿ ವಿವಿಧ ಸಮೂದಾಯಗಳ ಮುಖಂಡರಿಂದ ಆಕ್ಷೇಪ ವ್ಯಕ್ತವಾಯಿತು.ಸರ್ಕಾರಗಳು ಈ ಸಮೂದಾಯಗಳಿಗೆ ಸಮರ್ಪಕ ಕಾರ್ಯಕ್ರಮ ರೂಪಸುತ್ತಿಲ್ಲ. ಈ ಸಮುದಾಯಕ್ಕೆ ನೀಡಿದ್ದ ಸೌಲಭ್ಯಗಳನ್ನು ಇತ್ತಿಚೆಗೆ ಕಡಿತಗೊಳಿಸಲಾಗುತ್ತಿದೆ.

ಪ್ರವರ್ಗ – 1 ರ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಅನುಕೂಲಕರ ಕಾರ್ಯಕ್ರಮ ರೂಪಿಸಬೇಕು ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡುವುಂತೆ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಯಿ ಅವರನ್ನು ವಿವಿಧ ಸಮೂದಾಯಗಳ ಮುಖಂಡರಗಳು ಸಭೆಯಲ್ಲಿ ಒತ್ತಾಯಿಸಿದರು.

ಪರಿಶಿಷ್ಟ ವಿದ್ಯಾರ್ಥಿಗಳಿಗೆ ನೀಡುವಂತೆ ವಿದ್ಯಾರ್ಥಿ ವೇತನ ಶುಲ್ಕ ವಿನಾಯಿತಿ.ಶೈಕ್ಷಣಿಕ ಸೌಲಭ್ಯಗಳನ್ನು ಈ ಹಿಂದೆ ನೀಡುತ್ತಿದ್ದಂತೆ ಪ್ರವರ್ಗ – 1 ರ ವಿದ್ಯಾರ್ಥಿಗಳಿಗೂ ನೀಡಬೇಕು.ಪ್ರವರ್ಗ 1ಸಮೂದಾಯಗಳ ಕುಲಶಾಸ್ತ್ರ ಅಧ್ಯಯನ ಮಾಡಬೇಕು.ಇದಕ್ಕಾಗಿ ಐದು ಕೋಟಿ ಹಣವನ್ನ ಮೀಸಲಿಡಬೇಕು.ವಿವಿಗಳ ಪ್ರವರ್ಗ 1 ರ ಜಾತಿಗಳ ಕೋಶವನ್ನು ಮರು ಸ್ಥಾಪಿಸಬೇಕು.ಹಾಸ್ಟಲ್ ಗಳನ್ನು ವಿವಿಗಳಲ್ಲಿ ಪುರನ್ ಆರಂಭಿಸಬೇಕು.ಎಸ್ಸಸ್ಸಲ್ಸಿ ಪಿಯುಸಿ ಪದವಿ ಸ್ನಾತಕೋತ್ತರ ಪದವಿ ಉತ್ತೀರ್ಣರಾದವರಿಗೆ ಬಹುಮನದ ಹಣ ಘೋಸಿಸುವಂತೆ ಹಾರೈಸಿದರು

.ಪರಿಶಿಷ್ಟರಿಗೆ ಇರುವಂತೆ ಪ್ರವರ್ಗ 1 ರ ಜಾತಿಗಳಿಗೂ ಭೂ ಒಡೆತನ ಯೋಜನೆ ಅನುಷ್ಟನಾಗೊಳಿಸಬೇಕು.ಉದ್ಯಮಿದಾರರಿಗೆ ಹತ್ತು ಕೋಟಿ ರೂ ವರೆಗೆ ಶೇಕಡ ನಾಲ್ಕು ರಷ್ಟು ಬಡ್ಡಿದರ ಸಾಲ ನೀಡಬೇಕು
.ಕರ್ನಾಟಕ ಕೈಗಾರಿಕಾ ಕಾರಿಡಾರಿನಲ್ಲಿ ಪ್ರವರ್ಗ 1 ರ ಜಾತಿಯವರಿಗೆ ಕೈಗಾರಿಕಾ ನಿವೇಶನ ನೀಡಬೇಕು.ಈ ನಿವೇಶನಗಳನ್ನು ಶೇಕಡ ಐವತ್ತರ ಅನುದಾನದಲ್ಲಿ ಮಂಜೂರು ಮಾಡಬೇಕು. ಬಾಕಿ ಐವತ್ತು ಶೇಕಡ ಅನುದಾನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭರಿಸಬೇಕು ಪ್ರವರ್ಗ 1 ಜಾತಿ ಪ್ರತಿನಿಧಿಸುವ ವಿಧಾನಸಭೆ ವಿಧಾನ ಪರಿಷತ್ ಸದಸ್ಯರಲ್ಲಿ ಕನಿಷ್ಠ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು.ಮುಂಬರುವ ಜಿ/ತಾ ಪಂಚಾಯತ ಬಿಬಿಎಂಪಿ ಚುನಾವಣೆಯಲ್ಲಿ ಪ್ಎವರ್ಗ 1 ಒಂದರ ಜಾತಿಗೆ ಮೀಸಲು ಸ್ಥಾನಗಳನ್ನು ಪ್ರತ್ಯಕ್ಷವಾಗಿ ನಿಗದಿಪಡಿಸಬೇಕು‌.ಸರ್ಕಾರದ ಅದೀನ ನಿಯಮಾಗಳಿಗೆ ಅದ್ಯಕ್ಷರನ್ನು ಸದಸ್ಯರನ್ನು ನೇಮಕ ಮಾಡಬೇಕು.ಎಂಬ ಇತ್ಯಾದಿ ಬೇಡಿಕೆಗಳನ್ನು ಹೀಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು.
*ಇದೇ ತಿಂಗಳು 24 ರಂದು ನಗರದ ಹದಡಿ ರಸ್ತೆಯ ಉದಯ ಮಾರ್ಟ್ ಕನ್ವೆಂಶನ್ ಹಾಲ್ ನಲ್ಲಿ ಜಿಲ್ಲಾ ಜಾಗೃತ ಸಭೆ ಹಮ್ಮಿಕೊಳ್ಳಲಾಗಿದೆ.*
ಯಾದವ ಮಹಾಸಭದ ಜಿಲ್ಲಾಧ್ಯಕ್ಷ ಬಾಡದ ಆನಂದ್ ರಾಜ್ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ತುರ್ಚಘಟ್ಟದ ಹೆಚ್.ತಿಪ್ಪಣ್ಣ.ಪಾಲಿಕೆ ಸ್ಥಾಯಿ ಸಮಿತಿ ಅದ್ಯಕ್ಷೆ ಶ್ರೀಮತಿ ಉಮಪ್ರಕಾಶ್.ಸದಸ್ಯ ಪಿಎಸ್.ಬಸವರಾಜ್.ಮಾಜಿಸದಸ್ಯ ಮಂಜುಳಮ್ಮ.ಮಾಜಿ ಜಿಲ್ಲಾ ಪಂಚಾಯತ ಅದ್ಯಕ್ಷ ಎಸ್.ಬಸವರಾಜಪ್ಪ.ಹಿರಿಯ ವಕೀಲ ಎವೈ ಪ್ರಕಾಶ್.ಯುವ ಉದ್ಯಮಿ ಉದಯ ಶಿವಕುಮಾರ್. ಬಸವರಾಜ್ ಸಾಗರ್. ಬಿಜಿ.ರೇವಣಸಿದ್ದಪ್ಪ.ತುರ್ಚಘಟ್ಟದ ಶ್ರೀನಿವಾಸ್. ಮಯಾಕೊಂಡ ಮಂಜನಾಥ.ಯಾದವ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ. ಗಂಗಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಬಿಕೆ.ಮಂಜುನಾಥ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!