ರಾಜ್ಯದಲ್ಲಿ ಪಿಯುಸಿ ದಾಖಲೆ ಫಲಿತಾಂಶ ದಾವಣಗೆರೆಗೆ 75.72% ಫಲಿತಾಂಶ, 21ನೇ ಸ್ಥಾನ.
ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಇದೇ ಮೊದಲ ಬಾರಿ ಶೇ 74.67 ಫಲಿತಾಂಶ ಲಭ್ಯವಾಗಿದೆ.
7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 524209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 80.72 ವಿದ್ಯಾರ್ಥಿನಿಯರು ಹಾಗೂ ಬಾಲಕರು ಶೇ 69.05 ಸಾಧಿಸಿದ್ದಾರೆ.
ಕಲಾವಿಭಾಗದಲ್ಲಿ ಅತಿ ಹೆಚ್ಚು ಅಂಗಳನ್ನು ತಬಸುಮ್ ಶೇಕ್, ಎನ್ಎಂಕೆಆರ್ ವಿ ಮಹಿಳಾ ಕಾಲೇಜು ಜಯನಗರ ಬೆಂಗಳೂರು– 593 ಅಂಕಗಳನ್ನು ಗಳಿಸಿದ್ದಾರೆ.
ವಾಣಿಜ್ಯ ವಿಭಾಗಭಾಗದಲ್ಲಿ ಅನನ್ಯ ಕೆ.ಎ, ಅಳ್ವಾಸ್ ಕಾಲೇಜು, ಮೂಡಬಿದರೆ 600 ಅಂಕಗಳು, ವಿಜ್ಞಾನ ವಿಭಾಗದಲ್ಲಿ ಕೌಶಿಕ್ ಎಸ್, ಜ್ಞಾನಗಂಗೊತ್ರಿ ಕಾಲೇಜು ಶ್ರೀನಿವಾಸಪುರ ಕೋಲಾರ ಅಂಕಗಳು– 596 ಹಾಗೂ ಸುರಭಿ ಎಸ್, ಆರ್ ವಿ ಪಿಯು ಕಾಲೇಜು ಬೆಂಗಳೂರು ಅಂಕಗಳು– 596 ಅಂಕ ಗಳಿಸಿದ್ದಾರೆ.
ದಾವಣಗೆರೆ ಜಿಲ್ಲೆ ರಾಜ್ಯಮಟ್ಟದಲ್ಲಿ 21ನೇ ಸ್ಥಾನದಲ್ಲಿದ್ದು, ಈ ಬಾರಿ ಶೇ.75.72ರಷ್ಟು ಫಲಿತಾಂಶ ಪಡೆದಿದೆ. ಕಳೆದ ವರ್ಷ 62.72ರಷ್ಟು ಫಲಿತಾಂಶ ಬಂದಿತ್ತು.