2024ರ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಪೂಜ್ಯಶ್ರೀ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಕಣಕ್ಕೆ

ಗದಗ ಜಿಲ್ಲೆ ಶಿರಹಟ್ಟಿ ಹಾಗೂ ಬಾಳೇಹೊಸೂರ ಭಾವೈಕ್ಯತಾ ಸಂಸ್ಥಾನಮಠಗಳ ಅಧಿಪತಿಗಳಾದ ಪೂಜ್ಯಶ್ರೀ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು 2024ರ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಬೇಕೆಂದು ನಾಡಿನ ಬಹುಸಂಖ್ಯಾತ ಮಠಾಧಿಪತಿಗಳು, ಭಕ್ತರು, ಸಾಹಿತಿಗಳು, ಕಲಾವಿದರು. ರೈತರು, ವ್ಯಾಪಾರಿಗಳು, ನೌಕರರು ಹಾಗೂ ಸರ್ವ ಸಮಾಜದ ಮುಖಂಡರು ಬಯಸಿದ ಕಾರಣ ಸ್ಪರ್ಧೆಗೆ ನಿಲ್ಲುವ ನಿರ್ಣಯ ಕೈಗೊಂಡಿದ್ದಾರೆ.

ಈ ಕೆಳಕಂಡ ಕೆಲವು ಕಾರಣಗಳನ್ನು ಪತ್ರಿಕೆ, ದೃಶ್ಯ ಹಾಗೂ ಸಾಮಾಜಿಕ ಜಾಲತಾಣಗಳಂತಹ ಇತ್ಯಾದಿ ಮಾಧ್ಯಮಗಳಿಗೆ ಕೊಟ್ಟಿದ್ದಾರೆ.

1ಎರಡು ಪಕ್ಷಗಳು ಎಲೆಕ್ಷನ್‌ ಫಿಕ್ಸಿಂಗ್‌ ಮಾಡಿಕೊಂಡಿವೆ ಎಂದು ಜನರು ಮಾತನಾಡುತ್ತಿದ್ದಾರೆ. ಇದು ಮತದಾರರಿಗೆ ಮಾಡುವ ಮೋಸವಾಗಿದೆ.
2 ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ನಮ್ಮನ್ನು ಮತದಾರರು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ.
3 ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಮತ್ತು ಸ್ವಾರ್ಥಿ ರಾಜಕಾರಣಿಗಳ ದುರಾಡಳಿತದ ವಿರುದ್ಧ-ಸ್ವಾಭಿಮಾನಿಗಳು ಸಾರಿದ ಧರ್ಮಯುದ್ಧವಿದು.
4 ರಾಜಕೀಯ ಪ್ರಜ್ಞೆಯನ್ನು ಜನರಿಗೆ ಮೂಡಿಸಲಿಕ್ಕಾಗಿ- ರಾಜಕೀಯ ಪ್ರವೇಶ ಮಾಡಲಾಗಿದೆ- ಧರ್ಮದಲ್ಲಿ ರಾಜಕೀಯವಿರಬಾರದು. ರಾಜಕೀಯದಲ್ಲಿ ಧರ್ಮವಿರಬೇಕೆಂದು ಜನ ಬಯಸಿರುತ್ತಾರೆ. ಈ ವಿಚಾರವನ್ನು ಚುನಾವಣೆಯ ನಂತರವೂ ಮುಂದುವರೆಸುತ್ತೇವೆ.
5 ನೊಂದ ಸಮಾಜಗಳು, ನಾಯಕರುಗಳು ನಮ್ಮ ಮುಂದೆ ತಮ್ಮ ನೋವು ತೋಡಿಕೊಂಡ ಕಾರಣ ಈ ಹೋರಾಟಕ್ಕೆ ಬಂದಿದ್ದೇವೆ.
6 ಕುರುಬ, ರೆಡ್ಡಿ, ಜಂಗಮ, ಅಂಬಿಗ ಹೀಗೆ ಬಹಳಷ್ಟು ಸಮಾಜಗಳನ್ನು ಅಲಕ್ಷ ಮಾಡಿ, ಅತ್ಯಂತ ಕಡಿಮೆ ಜನಸಂಖ್ಯೆ ಇರುವವರಿಗೆ ಮೂರು (3) ಸ್ಥಾನಗಳನ್ನು ಕೊಟ್ಟಿರುವುದು ಬಹುಜನರ ನೋವಿಗೆ ಕಾರಣವಾಗಿದೆ. ಎಲ್ಲಿದೆ ಸಾಮಾಜಿಕ ನ್ಯಾಯ?
7 ಒಂಭತ್ತು ಜನ ವೀರಶೈವ-ಲಿಂಗಾಯತ ಸಂಸದರು ಆಯ್ಕೆಗೊಂಡಾಗ, ಒಬ್ಬರಿಗೂ ಕೇಂದ್ರ ಕ್ಯಾಬಿನೆಟ್ ದರ್ಜೆಯಲ್ಲಿ ಅವಕಾಶ ಮಾಡಿಕೊಡದಿರುವುದು ಹಿಂದಿನಿಂದಲೂ ವೀರಶೈವ-ಲಿಂಗಾಯತರಿಗೆ ರಾಜ್ಯ ಖಾತೆಯನ್ನು ಕೊಟ್ಟಿರುವುದು ಮತದಾರರು ಮಾತಾಡಿಕೊಳ್ಳುವಂತಾಗಿದೆ.
8 ಬೆಂಗಳೂರು ದಕ್ಷಿಣದಲ್ಲಿ- ವಿ.ಸೋಮಣ್ಣನವರಿಗೆ ಕೊಡುವುದನ್ನು ಬಿಟ್ಟು- ತುಮಕೂರಿಗೆ ಕೊಟ್ಟು- ವೀರಶೈವ-ಲಿಂಗಾಯತರು ಜಗಳವಾಡುವಂತೆ ಮಾಡಿದ್ದು ನಮ್ಮ ಸಮಾಜಕ್ಕೆ ನೋವಾಗಿದೆ. ವೀರಶೈವ-ಲಿಂಗಾಯತರ ಪ್ರಾಬಲ್ಯ ಕ್ಷೇತ್ರದಲ್ಲಿ ಬ್ರಾಹ್ಮಣರಿಗೆ ಕೊಟ್ಟಂತೆ- ಬ್ರಾಹ್ಮಣರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ನಮ್ಮ ಸಮುದಾಯದವರಿಗೆ ಕೊಡದಿರಲು ಕಾರಣವೇನು ?
9 ವೀರಶೈವ-ಲಿಂಗಾಯತರ ಹಾಗೂ ಇತರ ಸಮಾಜಗಳ ಮತಗಳು ಬೇಕು- ಅಧಿಕಾರ ಮಾತ್ರ ಇವರಿಗೆ ಇರಬೇಕು ಮತ್ತು ಇತರರು ಎರಡು ಅಥವಾ ಮೂರು ಅವಧಿಗೆ ಮೀಸಲಾಗಬೇಕು. ಇವರು ಐದನೇ ಅವಧಿಗೂ ಮುಂದುವರೆಯಬೇಕು. ಇದು ಯಾವ ಸಾಮಾಜಿಕ ನ್ಯಾಯ ?
10 ಕೇಂದ್ರ ಓ.ಬಿ.ಸಿ. ಪಟ್ಟಿಯಲ್ಲಿ ವೀರಶೈವ-ಲಿಂಗಾಯತರನ್ನು ಸಮಗ್ರವಾಗಿ ಸೇರಿಸದೇ ಕೆಲವರನ್ನು ಸೇರಿಸಿ. ಕೆಲವರನ್ನು ಬಿಟ್ಟಿರುವುದು ಸಮಾಜದ ಅವನತಿಗೆ ಕಾರಣವಾಗಿದೆ. ವೀರಶೈವ-ಲಿಂಗಾಯತರನ್ನು ಬಿ.ಜೆ.ಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳು ಅಲಕ್ಷ್ಯ ಮಾಡಿರುತ್ತವೆ.
11 ನಮ್ಮ ನಾಯಕರನ್ನು ಹಾಗೂ ಸಮಾಜವನ್ನು ತುಳಿದಾಳುವಲ್ಲಿ ಜೋಶಿಯವರ ಪಾತ್ರ ಎದ್ದು ಕಾಣುತ್ತದೆ.
12 ಹಾವೇರಿ ಮತಕ್ಷೇತ್ರದಲ್ಲಿ ಈಶ್ವರಪ್ಪನವರ ಮಗನಿಗೆ ಟಿಕೆಟ್ ತಪ್ಪಿಸಿದ್ದು ಇದೇ ಜೋಶಿ.
13 ಇಬ್ಬರು ಮಹಿಳೆಯರು ಪಕ್ಷೇತರ ಚುನಾವಣೆಗೆ ನಿಂತು ಮತದಾರರು ಪ್ರಜ್ಞಾವಂತರಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
14 ಇಪ್ಪತ್ತು ವರ್ಷಗಳ ಅಧಿಕಾರದಲ್ಲಿ ಅಭಿವೃದ್ಧಿ ಕಾರ್ಯಗಳು “ಜೀರೋ” ಆಗಿ ಸಮಾಜಗಳನ್ನು, ನಾಯಕರುಗಳನ್ನು ಜೋಶಿಯವರು “ಹೀರೋ” ಆಗಿದ್ದಾರೆ.
15 ನೂರ ಇಪ್ಪತ್ತು (120) ಮಠಾಧೀಶರನ್ನು ಸುಳ್ಳು ಮಾಹಿತಿಯನ್ನು ನೀಡಿ ಬಿ.ಜೆ.ಪಿ. ಪಕ್ಷದ ಕಾರ್ಯಾಲಯದ ಉದ್ಘಾಟನೆಗೆ ಕರೆದು ಮಠಾಧಿಪತಿಗಳ ತೇಜೋವಧೆಗೆ ಕಾರಣರಾಗಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಮಠಗಳನ್ನು ರಾಜಕೀಯ ಕೇಂದ್ರಗಳನ್ನಾಗಿ ಮಾಡುತ್ತಿದ್ದಾರೆ.
16 ಶೌರ್ಯ ಪ್ರಶಸ್ತಿ ಪಡೆದ ಹುಬ್ಬಳ್ಳಿಯ ಬಾಲಕಿಯು ಪ್ರಧಾನ ಮಂತ್ರಿಗಳಿಂದ ಪುರಸ್ಕಾರ ಪಡೆದರೂ ಮಾನ್ಯ ಜೋಶಿಯವರು ತಿರಸ್ಕಾರ ಮಾಡಿರುವುದನ್ನು ಜನರಿಗೆ ತಿಳಿಸಿ ಮತವನ್ನು ನಿಮಗ್ಯಾಕೆ ಹಾಕಬೇಕು ಎಂದು ಬಾಲಕಿಯು ಕೇಳಿದ್ದಾಳೆ.
17 ಪಕ್ಷಗಳಿಗೆ ಮತದಾರ ಅನಿವಾರ್ಯವೇ ಹೊರತು, ಮತದಾರರಿಗೆ ಪಕ್ಷಗಳು ಅನಿವಾರ್ಯವಲ್ಲ.
18 ಎರಡು ಪಕ್ಷಗಳು ಬಸವಾದಿ ಶಿವಶರಣರನ್ನು ಮತಗಳಿಕೆಗೆ ಬಳಕೆ ಮಾಡಿಕೊಂಡು ಅವರ ತತ್ವಸಿದ್ಧಾಂತಗಳನ್ನು ಗಾಳಿಗೆ ತೂರಿವೆ.
19 ವೀರಶೈವ-ಲಿಂಗಾಯತ ಹೋರಾಟದಲ್ಲಿ ತಾತ್ವಿಕ ಭಿನ್ನಾಬಿಪ್ರಾಯ ಬಂದಾಗ ಪರಸ್ಪರರು ಅಡಿಕೊಂಡ ಮಾತುಗಳನ್ನು ಇಂದು ಜೋಶಿಯವರ ಹಿಂಬಾಲಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಲಿಂಗಾಯತರನ್ನು ನಮ್ಮ ವಿರುದ್ಧ ನಿಲ್ಲಿಸುವ ಪ್ರಯತ್ನದಲ್ಲಿ ಜೋಶಿಯವರ ಶಿಷ್ಯರು ನಿರತರಾಗಿದ್ದಾರೆ. ಆದರೆ “ವೀರಶೈವ-ಲಿಂಗಾಯತರು ಸಂಪೂರ್ಣ” ಎಚ್ಚೆತ್ತುಕೊಂಡಿರುವುದು ಚುನಾವಣೆಯಲ್ಲಿ ಸಾಭಿತಾಗುತ್ತದೆ. ಈ
20 ಸ್ವತಃ ಅವರ ಸಮಾಜದವರೇ ಜೋಶಿಯವರಿಂದ ತುಳಿತಕ್ಕೊಳಗಾಗಿರುವುದನ್ನ ಕಳೆದ 20 ವರ್ಷಗಳಿಂದ ನಾವುಗಳು ಕಾಣಬಹುದಾಗಿದೆ.
21 ಎಲ್ಲ ಸಮಾಜಗಳ ನಾಯಕರು ಮತ್ತು ಲಿಂಗಾಯತರು ಸತ್ತಿರಬಾರದು. ಬದುಕಿರಬಾರದು ಹಾಗೆ ಮಾಡಿದ್ದಾರೆ. ಆದ ಕಾರಣ ನಾವು ಚುನಾವಣೆಗೆ ಸ್ಪರ್ಧಿಸುವುದು ಅನಿವಾರ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!