ತಿಪ್ಪಾರೆಡ್ಡಿ ಕಾಲಿಗೆ ಬಿದ್ದ ರಘು ಆಚಾರ್ ಕೈ ಕಾರ್ಯಕರ್ತರು ಸಿಡಿಮಿಡಿ

ತಿಪ್ಪಾರೆಡ್ಡಿ ಕಾಲಿಗೆ ಬಿದ್ದ ರಘು ಆಚಾರ್ ಕೈ ಕಾರ್ಯಕರ್ತರು ಸಿಡಿಮಿಡಿ
ಚಿತ್ರದುರ್ಗ: ಕಾಂಗ್ರೆಸ್ ಮಾಜಿ ಎಂಎಲ್‌ಸಿ ರಘು ಆಚಾರ್ ನೂತನ ಗೃಹ ಪ್ರವೇಶದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಜಿಜೆಪಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿಯವರ ಕಾಲು ಮುಗಿದು ಗೃಹಪ್ರವೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆದರೆ ಕೈ ಕಾರ್ಯಕರ್ತರು ಆಚಾರ್ ನಡೆ ವಿರುದ್ಧ ಕಿಡಿ ಕಾರಿದ್ದಾರೆ.
ಮುಂಬರುವ 2023ರ ವಿಧಾನಸಭಾ ಚುನಾವಣೆಯ ಪ್ರತಿಸ್ಪರ್ಧಿಗಳೆಂದು ಬಿಂಬಿತವಾಗಿರುವ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಹಾಗೂ ರಘು ಆಚಾರ್ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಿರುವ ಆಚಾರ್, ಆಹ್ವಾನ ಪತ್ರಿಕೆ ಕೊಟ್ಟು, ಶಾಸಕ ತಿಪ್ಪಾರೆಡ್ಡಿ ಕಾಲಿಗೆ ಬಿದ್ದಿರುವುದು ಹೊಸ ಚರ್ಚೆಗೆ ದಾರಿಯಾಗಿದೆ.