ಮಾಡಾಳ್ ವಿರೂಪಾಕ್ಷ ವಿರುದ್ಧ ಸಿದ್ಧರಾಮಯ್ಯ ವಾಗ್ದಾಳಿ
ಚನ್ನಗಿರಿ: ಅಪ್ಪ ಹೇಳೆದೆಯೇ ಮಗ ಲಂಚ ತೆಗೆದುಕೊಳ್ತಾನಾ? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಕುರಿತು ವಾಗ್ದಾಳಿ ನಡೆಸಿದ್ದಾರೆ.
ಚನ್ನಗಿರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ಅಪ್ಪನೂ ಲಂಚ ತೆಗೆದುಕೊಳ್ತಾರೆ, ಮಗನೂ ತೆಗೆದುಕೊಳ್ತಾನೆ. ಸಾಮಾನ್ಯರು ಯಾರಾದರೂ ಆಗಿದ್ದರೆ ಹೊರಗೆ ಬರ್ತಿರಿಲ್ಲ. ಆದರೆ ವಿರೂಪಾಕ್ಷಪ್ಪ ಜಾಮೀನು ತೆಗೆದುಕೊಂಡು ಮೆರವಣಿಗೆ ಮಾಡಿಸಿಕೊಂಡು ಬಂದಿದ್ದಾರೆ. ನಾಚಿಕೆಗೇಡು. ವಿರೂಪಾಕ್ಷಪ್ಪ ಶಾಸಕನಾಗಲೂ ನಾಲಾಯಕ್ ಎಂದು ಕಿಡಿಕಾರಿದರು.
ನ್ಯಾಯಾಲಯ ವಿರೂಪಾಕಷಪ್ಪಗೆ ಜಾಮೀನು ಕೊಟ್ಟಿರಬಹುದು. ಆದರೆ ಜನತಾ ನ್ಯಾಯಾಲಯದಲ್ಲಿ ನೀವು ಜಾಮೀನು ಕೊಡಬೇಡಿ. ಬರುವ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ತೀರ್ಮಾನ ಮಾಡಿ ಎಂದು ಹೇಳಿದರು.