raksha bandhan; ರಕ್ಷಾ ಬಂಧನ ಬಾಂಧವ್ಯದಾರ- ಪ್ರತಾಪ್ ಬಾರ್ಕಿ, ವಿದ್ಯಾರ್ಥಿ

ದಾವಣಗೆರೆ; ರಕ್ಷಾ ಬಂಧನ (raksha bandhan) ಅಣ್ಣ ತಂಗಿಯರ, ಅಕ್ಕ ತಮ್ಮಂದಿರ ಭಾಂದವ್ಯವನ್ನು ಗಟ್ಟಿಗೊಳಿಸುವಂತಹ ಹಬ್ಬ,
ಭಾರತೀಯರು ಅತೀ ಹೆಚ್ಚು ಖುಷಿಯಿಂದ ಆಚರಿಸುವಂತಹ ಹಬ್ಬವೆಂದರೆ ಅದು ರಕ್ಷಾ ಬಂಧನ, ಇದು ಅಣ್ಣ ಮತ್ತು ತಂಗಿಯ ಪ್ರೀತಿಯನ್ನು ತೋರಿಸುತ್ತದೆ. ಭಾರತದಂತೆ ನೇಪಾಳದಲ್ಲೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರಾವಣ ತಿಂಗಳು ಹುಣ್ಣಿಮೆಯ ದಿನ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ, ರಕ್ಷಾ ಬಂಧನವನ್ನು ಪ್ರತಿಯೊಬ್ಬರೂ ಆಚರಿಸುತ್ತಾರೆ ಆದರೆ ಅದರ ಅರ್ಥವೇನು? ಮಹತ್ವವೇನು? ಯಾರಿಗೂ ಗೊತ್ತಿಲ್ಲ.

ರಕ್ಷಾ ಬಂಧನ ಮತ್ತುಅರ್ಥ:-

ರಕ್ಷಾಬಂಧನದಲ್ಲಿ ಎರಡು ಪದಗಳಿವೆ ಅದೇ ರಕ್ಷಾ ಮತ್ತು ಬಂಧನ ರಕ್ಷ ಎಂದರೆ ರಕ್ಷಣೆ ಬಂಧನ ಎಂದರೆ ಬಂಧ ಎಂದರ್ಥ, ಸೋದರ ಮತ್ತು ಸೋದರಿ ತಮ್ಮೊಳಗೆ ಹಂಚಿಕೊಳ್ಳುವ ಯಾವತ್ತೂ ಕೊನೆಗೊಳ್ಳದ ಪ್ರೀತಿಯನ್ನು ರಕ್ಷಾ ಬಂಧನ ಅಂತ ಹೇಳಬಹುದು, ಕೇವಲ ಸಹೋದರ ಸಹೋದರಿ ಮಾತ್ರ ಈ ಹಬ್ಬವನ್ನ ಆಚರಿಸುವಂಥದ್ದಲ್ಲ, ಸೋದರ ಸಂಬಂಧಿಗಳು ಕೂಡ ಈ ಹಬ್ಬವನ್ನು ಆಚರಿಸುವಂತದ್ದು. ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಂದು ಆಧುನಿಕರಣಗೊಂಡಿದೆ ಅದೇ ರೀತಿ ರಕ್ಷಾಬಂಧನವೂ ಕೂಡ ಕೊಂಚ ಆಧುನಿಕರಣಗೊಂಡಿದೆ ಇಂದಿನ ದಿನಗಳಲ್ಲಿ ಚಿಕ್ಕಮ್ಮ ಅತ್ತಿಗೆ ಮತ್ತು ಇತರರು ರಕ್ಷಾಬಂಧನವನ್ನು ಕಟ್ಟುತ್ತಾರೆ. ಇನ್ನೂ ರಕ್ಷಾ ಬಂಧನವನ್ನು ಯಾಕೆ ಆಚರಿಸಬೇಕು, ಸೋದರ ಮತ್ತು ಸೋದರಿ ನಡುವಿನ ಭಾಂಧವ್ಯ ಗಟ್ಟಿಗೊಳ್ಳಲಿ ಎನ್ನುವ ಕಾರಣಕ್ಕಾಗಿ ಮಾತ್ರ ಈ ಹಬ್ಬವನ್ನು ಆಚರಿಸುವುದಿಲ್ಲ, ಇದನ್ನು ಹಲವಾರು ರೀತಿಯಲ್ಲಿ ಆನಂದಿಸಲಾಗುತ್ತದೆ. ಕೆಲವೊಂದು ಪೌರಾಣಿಕ ಕಾರಣಗಳು ಕೂಡ ರಕ್ಷಾ ಬಂಧನ ಹಿಂದಿದೆ, ಅದು ಯಾವವು ಎಂದು ತಿಳಿದುಕೊಳ್ಳೋಣ.

“ರಕ್ಷಾ ಬಂಧನ ಆಚರಿಸುವ ಪೌರಾಣಿಕ ಕಾರಣಗಳು”
ವೃತ್ರ ಅಸುರನಿಂದ ಸೋಲಿಸಲ್ಪಟ್ಟಂತ ಇಂದ್ರನಿಗೆ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದರೆ ಕೈಗೆ ರಾಖಿಯನ್ನು ಕಟ್ಟಿಕೊಳ್ಳಬೇಕು ಎಂದು ಗುರು ಗೃಹಸ್ಪತಿಯವರು ಹೇಳಿದ್ದರು, ಗೃಹಸ್ಪತಿಯವರ ಮಾತಿನಂತೆ ಇಂದ್ರನ ಒಡನಾಡಿ ಸಚಿ ದೇವಿಯು ಇಂದ್ರನಿಗೆ ರಾಖಿ ಕಟ್ಟಿದಳು ಎಂದು ಭವಿಷ್ಯ ಪುರಾಣದಲ್ಲಿದೆ.

ಇನ್ನೂ ವರುಣದೇವನನ್ನು ಓಲೈಸಿಕೊಳ್ಳುವ ಸಲುವಾಗಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ ಎಂದು ಇನ್ನೊಂದು ಪುರಾಣ ಹೇಳುತ್ತದೆ ರಕ್ಷಾ ಬಂಧನ ಹಬ್ಬದಂದು ಹಬ್ಬದ ಸ್ನಾನ ತೆಂಗಿನಕಾಯಿ ಉಡುಗೊರೆ ನೀಡುವುದು ಹಾಗೂ ಸಮುದ್ರ ದೇವನಿಗೆ ಪೂಜೆ ಮಾಡುವುದು ಈ ಹಬ್ಬದ ದಿನ ನಡೆಯುತ್ತದೆ.

ರಕ್ಷಾ ಬಂಧನ ಹಬ್ಬವನ್ನು ಮೀನುಗಾರ ಸಮುದಾಯದವರು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ ಈ ವೇಳೆ ವರುಣ ದೇವನಿಗೆ ರಾಕಿ ಮತ್ತು ತೆಂಗಿನಕಾಯಿಯನ್ನು ಸಮರ್ಪಿಸುತ್ತಾರೆ. ಪುರಾಣಗಳ ಪ್ರಕಾರ ಈ ದಿನವನ್ನು ನಾರಿಯಲ್ ಪೌರ್ಣಮಿ ಎಂದು ಸಹ ಕರೆಯಲಾಗುತ್ತದೆ. ಇನ್ನು ಬಲಿ ಚಕ್ರವರ್ತಿಯು ಸ್ವರ್ಗದ ಮೇಲೆ ದಂಡೆತ್ತಿ ಬಂದಾಗ ತನ್ನ ಪತಿ ವಿಷ್ಣುವನ್ನು ಉಳಿಸಿಕೊಳ್ಳಲು ಲಕ್ಷ್ಮೀದೇವಿಯು ಬಲಿಗೆ ಈ ರಾಖಿ ಕಟ್ಟಿದಳು ಎಂದು ಇನ್ನೊಂದು ಪುರಾಣದಲ್ಲಿ ಹೇಳುತ್ತದೆ.

SS Mallikarjun; ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ 5 ಗ್ಯಾರಂಟಿ ಪ್ರಾರಂಭ; ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ರಕ್ಷಾ ಬಂಧನವನ್ನು ಭಾರತ ಸಹಿತ ಕೆಲವೊಂದು ದೇಶಗಳಲ್ಲಿ ಆಚರಿಸಲ್ಪಡುವುದಾಗಿ ನಾವು ತಿಳಿದುಕೊಂಡಿದ್ದೇವೆ, ಸಹೋದರನಿಗೆ ರಾಖಿಯನ್ನು ಕಟ್ಟುವ ಸಹೋದರಿ ಆತನಿಗೆ ಆರೋಗ್ಯ ಸಮೃದ್ಧಿ ಮತ್ತು ಸುಖ ಸಿಗಲೆಂದು ಪ್ರಾರ್ಥಿಸುತ್ತಾಳೆ. ಈ ಸಂದರ್ಭದಲ್ಲಿ ಸಹೋದರಿಯನ್ನು ಖುಷಿ ಪಡಿಸಲು ಸಹೋದರನು ಉಡುಗೊರೆ ಹಾಗೂ ಆಶೀರ್ವಾದವನ್ನು ಕೂಡ ನೀಡುತ್ತಾನೆ ಮತ್ತು ಯಾವುದೇ ಸಮಯದಲ್ಲಿ ನಿನ್ನ ಕೆಟ್ಟ ಜನರು ಮತ್ತು ಪರಿಸ್ಥಿತಿಯಿಂದ ರಕ್ಷಿಸುವುದಾಗಿ ಪ್ರಮಾಣ ಕೂಡ ಮಾಡುತ್ತಾನೆ. ಸೋದರಿಯನ್ನು ರಕ್ಷಿಸುವುದು ಮತ್ತು ಕೆಟ್ಟ ಸಮಯದಲ್ಲಿ ಆಕೆಯನ್ನು ಕಾಪಾಡುವುದು ಸೋದರನ ಕರ್ತವ್ಯವಾಗಿದೆ ಇದೆ ಈ

ರಕ್ಷಾ ಬಂಧನ ಹಬ್ಬದ ಮಹತ್ವ
ರಕ್ಷಾ ಬಂಧನವು ವರ್ಷಕ್ಕೆ ಒಂದು ಸಾರಿ ಬಂದರೂ ಕೂಡ ಅದರ ಸಂಭ್ರಮ ಮಾತ್ರ ತುಂಬಾ ಖುಷಿಯಿಂದ ಮನೆ ಮಾಡಿರುತ್ತದೆ, ತಂಗಿ ಎಷ್ಟೇ ದೂರವಿದ್ದರೂ ತನ್ನ ಅಣ್ಣನಿಗಾಗಿ ರಾಖಿ ಕಟ್ಟುವ ಸಲುವಾಗಿ ತಿಂಗಳ ಮುಂಚೆ ಎಲ್ಲಾ ತಯಾರಿ ನಡೆಸಿಕೊಂಡು ಅವನಿಗೋಸ್ಕರ ರಕ್ಷಾಬಂಧನ ಬಾಂಧವ್ಯದ ದಾರವನ್ನು ಅಣ್ಣನಿಗೆ ಕಟ್ಟಿ ಸಂತೋಷವನ್ನು ವ್ಯಕ್ತಪಡಿಸುತ್ತಾಳೆ. ಅದೇ ರೀತಿಯಾಗಿ ಅಣ್ಣನು ಕೂಡಾ ತನ್ನ ತಂಗಿಯ ಬರುವುವಿಕೆಗಾಗಿ ಕಾತುರದಿಂದ ಕಾಯುತ್ತಾ ಅವಳ ಆಗಮನವನ್ನು ಬಹಳ ಸಡಗರದಿಂದ ಆಹ್ವಾನಿಸುತ್ತಾನೆ. ಇದರಿಂದ ಅಣ್ಣ ತಂಗಿಯ ಬಂಧನವನ್ನು ಎತ್ತಿ ಹಿಡಿಯುವಂತಹ ಈ ರಕ್ಷಾ ಬಂಧನ ತುಂಬಾ ಪ್ರಿಯವಾದದ್ದಾಗಿದೆ.

ಪ್ರತಾಪ್ ಬಾರ್ಕಿ,

ವಿದ್ಯಾರ್ಥಿ, ದಾವಣಗೆರೆ ವಿಶ್ವವಿದ್ಯಾನಿಲ

Leave a Reply

Your email address will not be published. Required fields are marked *

error: Content is protected !!