raksha bandhan; ರಕ್ಷಣೆಯ ಬಾಂಧವ್ಯ ರಕ್ಷಾ ಬಂಧನ-ಮಂಜುನಾಥ ಬಿ, ವಿದ್ಯಾರ್ಥಿ

ದಾವಣಗೆರೆ, ಆ.31: ಇಂದು ರಕ್ಷಾ ಬಂಧನ (Raksha Bandhan). ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಣ್ಣ ತಂಗಿ, ಅಕ್ಕ ತಮ್ಮಂದಿರ ಬಾಂಧವ್ಯದ ಸಂಕೇತವಾಗಿರುವ ಹಬ್ಬ ನಿಜಕ್ಕೂ ಎಲ್ಲರ ಪ್ರೀತಿಯ ಹಬ್ಬ ಎಂದು ಹೇಳಿದರೆ ತಪ್ಪಾಗಲಾರದು. ಈ ರಕ್ಷಾ ಬಂಧನ ಹಬ್ಬದ ಬಗ್ಗೆ ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಕ್ಷಣೆಯ ಬಾಂಧವ್ಯ ರಕ್ಷಾ ಬಂಧನ

ರಕ್ಷಾ ಬಂಧನ ಇದು ಒಂದು ಭಾರತದಲ್ಲಿನ ಒಡಹುಟ್ಟಿದವರಿಗಾಗಿ ಇರುವ ಹಬ್ಬವಾಗಿದೆ, ಸಹೋದರಿಯರು ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರೆ ಸಹೋದರ ಸಹೋದರಿಯನ್ನು ಜೀವನ ಪರಿಯಂತ ರಕ್ಷಿಸುವ ಭರವಸೆ ನೀಡುತ್ತಾನೆ
ಈ ಹಬ್ಬದ ಆಚರಣೆಯನ್ನು ಶ್ರಾವಣ ಮಾಸದ ಸಂದರ್ಭದಲ್ಲಿ ಈ ರಕ್ಷಾಬಂಧನ ಹಬ್ಬವನ್ನು ಆಚರಿಸುತ್ತಾರೆ

ನಾಡಿನಾದ್ಯಂತ ಭಾತೃತ್ವದ ಮಹತ್ವವನ್ನು ಸಾರುವ ಹಬ್ಬವೇ ರಕ್ಷಾಬಂಧನ ಹಬ್ಬ ರಾಕಿ ಹಬ್ಬ ಎಂತಲೂ ಕರೆಯುತ್ತಾರೆ,
ರಕ್ಷಾ ಬಂಧನ ಅಣ್ಣ ತಂಗಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬ ಶ್ರಾವಣ ಮಾಸದ ಪೂರ್ಣಿಮ ದಿನದಂದು ಸೋದರಿಕೆಯ ಮಹತ್ವವನ್ನು ಸಾರುವ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ ಈ ಹಬ್ಬದಂದು ತಂಗಿಯರು ಅಣ್ಣನ ಕೈಗೆ ರಾಗಿ ಕಟ್ಟುವ ಮೂಲಕ ಆಶೀರ್ವಾದ ಪಡೆಯುತ್ತಾರೆ ಹಾಗೆಯೇ ಅಣ್ಣನ ಕೈಯಿಂದ ಉಡುಗೊರೆಗಳನ್ನು ಪಡೆಯುತ್ತಾಳೆ. ಭಾತೃತ್ವದ ಅನುಬಂಧದ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಯಾವಾಗಲೂ ತಂಗಿಯ ಮುಖದಲ್ಲಿ ನಗು ನೋಡುವುದೇ ಪ್ರತಿಯೊಬ್ಬ ಅಣ್ಣನ ಆಸೆ ಆಗಿರುತ್ತದೆ. ಒಬ್ಬ ಅಣ್ಣ ತಂಗಿಯ ಮೇಲೆ ಇಟ್ಟಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಇದು ಅಣ್ಣ ತಂಗಿಯ ಸಂಬಂಧ ಜಗತ್ತಲ್ಲಿರುವ ಎಲ್ಲಾ ಸುಖವನ್ನು ತನ್ನ ತಂಗಿಗೆ ದಾರಿ ಇರುವುದೇ ನಿಜವಾದ ಅಣ್ಣನ ಪ್ರೀತಿ
ರಕ್ಷಾ ಬಂಧನವನ್ನು ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿ ಆಚರಿಸುತ್ತಾರೆ.

ಈ ರಾಖಿ ಹಬ್ಬದಂದು ಸಹೋದರಿ ಸಹೋದರನಿಗೆ ಆರತಿ ಬೆಳಗುವ ಮೂಲಕ ಆತನ ಯೋಗ ಕ್ಷೇಮವಾಗಿ ಪ್ರಾರ್ಥಿಸುತ್ತಾಳೆ ಹಾಗೆ ಕೈಗೆ ರಾಗಿ ಕಟ್ಟಿ ಹಣೆಯ ಮೇಲೆ ತಿಲಕ ಇಟ್ಟು ಸಿಹಿತಿನಿಸಿ ನಂತರ ಉಡುಗೊರೆ ಹಣ ನೀಡುವ ಮೂಲಕ ಪ್ರೀತಿಯನ್ನು ನೀಡುತ್ತಾರೆ. ಸರಿದ ದಿನಗಳು ಸೊರಗಿದರು ನನ್ನ ಸಹೋದರಿಯ ಮೇಲೆ ಭಾವ ಬದಲಾಗದು ಹರಿಯದೆ ನಮ್ಮಲ್ಲಿ ಅದೆಷ್ಟೋ ಜಗಳವಾದರೂ ನನ್ನ ಕಂಗಳ ಅಂಚಿನಲ್ಲೂ ನಿನ್ನ ಮೇಲಿನ ಪ್ರೀತಿ ಕಾಣೆಯಾಗದು. ತಂಗಿ ಎಂದರೆ ತಾನು ತನ್ನವರು ಎನ್ನುವಳು ಅಣ್ಣನ ಖುಷಿಯಲ್ಲಿ ತನ್ನ ಖುಷಿಯನ್ನು ಹಂಚಿಕೊಳ್ಳುವ ಅವಳು ತನ್ನದು ಎನ್ನುವ ಹಂಬಲ ಇವಳಲ್ಲಿ ಅಮ್ಮನ ಮಮತೆ ಆತ್ಮೀಯ ಕಾಳಜಿಯ ಕಂಡೆ ಅವಳೇ ನನ್ನ ಮುದ್ದು ತಂಗಿ.

ಹಿಂದೂ ಧರ್ಮದಲ್ಲಿ ರಕ್ಷಾ ಬಂಧನ ಆಚರಣೆಗೆ ಹಲವು ಧಾರ್ಮಿಕ ಮಹತ್ವಗಳಿವೆ. ಈ ಹಬ್ಬಕ್ಕೆ ಸಂಬಂಧಿಸಿದ ದಂತಕಥೆಗಳಲ್ಲಿ ಒಂದು ಮಹಾಭಾರತದಿಂದ ಹುಟ್ಟಿಕೊಂಡಿದೆ. ಪುರಾಣಗಳ ಪ್ರಕಾರ ಒಮ್ಮೆ ಆಕಸ್ಮಿಕವಾಗಿ ಸುದರ್ಶನ ಚಕ್ರಕ್ಕೆ ಸಿಲುಕಿ ಶ್ರೀ ಕೃಷ್ಣನ ಬೆರಳು ಕತ್ತರಿಸುತ್ತದೆ ಇದನ್ನು ನೋಡಿದ ದ್ರೌಪತಿ ತನ್ನ ಸೀರೆಯ ತುಂಡನ್ನು ಹರಿದು ಗಾಯಕ್ಕೆ ಕಟ್ಟಿ ರಕ್ತ ಸುರಿಯುವುದನ್ನು ನಿಲ್ಲಿಸುತ್ತಾಳೆ ಅಂದು ಆಕೆಯನ್ನು ತನ್ನ ತಂಗಿಯಾಗಿ ಸ್ವೀಕರಿಸಿ , ಎಂದಿಗೂ ಅವಳನ್ನು ರಕ್ಷಿಸುವ ಭರವಸೆ ನೀಡುತ್ತಾನೆ. ಕೌರವರು ದ್ರೌಪತಿ ವಸ್ತ್ರಾಪಹರಣ ಮಾಡಲು ಯತ್ನಿಸಿದಾಗ ಶ್ರೀ ಕೃಷ್ಣ ದ್ರೌಪತಿಗೆ ಸೀರೆ ನೀಡುವ ಮೂಲಕ ಅವಳನ್ನು ಕಾಪಾಡುತ್ತಾನೆ ಶ್ರೀ ಕೃಷ್ಣನ ಗಾಯವನ್ನು ಮಾಗಿಸಿದ ದ್ರೌಪದಿಯಿಂದ ರಾಕಿ ಹಬ್ಬ ಹುಟ್ಟಿದ್ದು ಎನ್ನುವುದು ಪುರಾಣ.

ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು..

ಮಂಜುನಾಥ ಬಿ
ದ್ವಿತೀಯ ವರ್ಷದ ಪತ್ರಿಕೋದ್ಯಮ ಸಮೂಹ ಸಂವಹನ ಅಧ್ಯಯನ ವಿಭಾಗ
ದಾವಣಗೆರೆ ವಿಶ್ವವಿದ್ಯಾನಿಲಯ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!