raksha bandhan; ಸಂತಸದ ಉಡುಗೊರೆಯೊಂದಿಗೆ ರಾಖಿ ಕಟ್ಟಿ- ಸಾಣಪ್ಪ ಲಮಾಣಿ, ವಿದ್ಯಾರ್ಥಿ

ಸೋದರ ಸೋದರಿ ಎಂಬುದು ಅತ್ಯಂತ ಅದ್ಭುತ ಸಂಬಂಧ. ನಿಜ, ಬಾಲ್ಯದಲ್ಲಿ ಸಣ್ಣ ಪುಟ್ಟ ವಿಷಯಕ್ಕೆ ಒಂದು ಕ್ಷಣ ಇಬ್ಬರ ನಡುವೆ ದೊಡ್ಡ ಜಗಳವೇ ನಡೆಯಬಹುದು ಅಪ್ಪ ಅಮ್ಮನ ಬಳಿ ದೂರಿನ ಪಟ್ಟಿಯೂ ಹೋಗಬಹುದು. ಆದರೆ ಈ ಜಗಳ ಕ್ಷಣಿಕವಾಗಿದೆ. ಪ್ರೀತಿ ಮಾತ್ರ ಸದಾಕಾಲ ಎತ್ತರ ಎಂಬುದು ಕೂಡಾ ಸತ್ಯವಾಗಿದೆ. ಈ ಸಂಬಂಧವೇ ಸುಂದರ. ಒಡಹುಟ್ಟಿದವರ ಪ್ರೀತಿ, ಕಾಳಜಿ, ತಮಾಷೆ, ಹುಸಿ ಕೋಪ, ನಗು, ಶುದ್ಧ ಸಂತೋಷ ನಿಜಕ್ಕೂ ಬದುಕಿಗೊಂದು ಬಲ ತರುತ್ತದೆ. ಗುರುವಾಗಿ, ಗೆಳೆಯ ಗೆಳತಿಯಾಗಿ, ಹೆತ್ತವರ ಸ್ಥಾನದಲ್ಲಿ ನಿಂತು ಆರೈಕೆ ಮಾಡುವ ಪ್ರೀತಿಯ ಪ್ರತೀಕವಾಗಿ ಒಡಹುಟ್ಟಿದವರು ಸದಾ ಜೀವನಕ್ಕೊಂದು ಧೈರ್ಯ, ಚೈತನ್ಯ ತುಂಬುತ್ತಾರೆ ಈ ಅಣ್ಣ ತಂಗಿ. ಅಣ್ಣ ತಂಗಿ ಪ್ರೀತಿಯ ಸಂಕೇತವಾದ ರಕ್ಷಾಬಂಧನವನ್ನು (raksha bandhan) ವರ್ಷವಿಡೀ ಈ ಹಬ್ಬಕ್ಕಾಗಿ ಪ್ರತಿಯೊಬ್ಬ ಸಹೋದರಸಹೋದರಿಯರು ಕಾಯುತ್ತಾರೆ.

ಈ ದಿನ ಸಹೋದರ-ಸಹೋದರಿಯ ಪ್ರೀತಿಯ ಸಂಕೇತವಾಗಿದೆ. ರಾಖಿ ಹಬ್ಬ ಬಹಳಷ್ಟು ಸಂತೋಷವನ್ನು ತರುತ್ತದೆ. ಈ ವಿಶೇಷ ದಿನದಂದು, ಸಹೋದರಿಯರು ಎಷ್ಟೇ ದೂರದಲ್ಲಿ ವಾಸಿಸುತ್ತಿದ್ದರೂ ತಮ್ಮ ಸಹೋದರನಿಗೆ ರಾಖಿ ಕಟ್ಟಲು ಬರುತ್ತಾರೆ. ಈ ದಿನ ಸಹೋದರಿಯರು ತಮ್ಮ ಸಹೋದರರ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿಯನ್ನು ಕಟ್ಟುವಾಗ ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ. ರಾಖಿ ಕಟ್ಟುವಾಗ ಪೂಜಾ ತಟ್ಟೆಯಲ್ಲಿ ಅಕ್ಷತೆ, ಕುಂಕುಮ, ಶ್ರೀಗಂಧ, ಸಿಹಿ, ಆರತಿ ಇರಬೇಕು. ಸಹೋದರನಿಗೆ ಆರತಿ ಮಾಡಿ, ತಲೆಗೆ ಅಕ್ಷತೆ ಹಾಕಿ, ಹಣೆಗೆ ಕುಂಕುಮ ಮತ್ತು ಗಂಧ ಇಟ್ಟು ಸಿಹಿ ತಿನ್ನಿಸಬೇಕು.

ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ರಕ್ಷಾಬಂಧನದಿಂದ ಸಹೋದರ-ಸಹೋದರಿಯರ ನಡುವೆ ಪ್ರೀತಿ ಹೆಚ್ಚಾಗುವುದರೊಂದಿಗೆ ಅವರ ನಡುವೆ ಇರುವ ಕೊಡ-ಕೊಳ್ಳುವ ಲೆಕ್ಕಾಚಾರ ಕಡಿಮೆಯಾಗುತ್ತದೆ.

ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಮತ್ತು ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ.

ರಕ್ಷಾ ಬಂಧನ ಬಹಳ ಜನಪ್ರಿಯ ಹಬ್ಬವಾಗಿದೆ. ಈ ಹಬ್ಬವು ಸಹೋದರ ಸಹೋದರಿಯರ ನಡುವಿನ ಪ್ರೀತಿಯನ್ನು ಆಚರಿಸುತ್ತದೆ. ಸಹೋದರಿಯರು ತಮ್ಮ ಸಹೋದರರನ್ನು ರಕ್ಷಿಸಲು ಈ ವಿಶೇಷ ದಿನದಂದು ಅವರ ಮಣಿಕಟ್ಟಿಗೆ ರಾಖಿ ಕಟ್ಟುತ್ತಾರೆ.ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲು ಪ್ರೀತಿಯ ಸೂಚಕವಾಗಿ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟಲಾಗುತ್ತದೆ. ಪ್ರತಿಯಾಗಿ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ ಮತ್ತು ಎಲ್ಲಾ ವೆಚ್ಚದಲ್ಲಿ ಅವರನ್ನು ರಕ್ಷಿಸುವ ಭರವಸೆ ನೀಡುತ್ತಾರೆ.ರಕ್ಷಾ ಬಂಧನವು ಸಹೋದರ ಸಹೋದರಿಯರ ನಡುವಿನ ಬಾಂಧವ್ಯದ ಬಾಂಧವ್ಯವನ್ನು ಆಚರಿಸುವ ಹಬ್ಬವಾಗಿದೆ.

ಅಂಗಡಿಗಳಲ್ಲಂತೂ ಬಗೆಬಗೆಯ ರಾಖಿ ಮಾರಾಟದ ಪ್ರಕ್ರಿಯೆ ಆರಂಭವಾದರೆ , ಮತ್ತೊಂದೆಡೆ ತನ್ನ ಅಣ್ಣನಿಗಾಗಿ ಯಾವ ಬಗೆಯ ರಾಖಿ ಕೊಳ್ಳುವುದು ಎಂದು ಹಪಹಪಿಸುವ ತಂಗಿಯರು! ಈ ಎಲ್ಲದರ ನಡುವೆ ರಾಖಿ ಹಬ್ಬದಂದು ಹಂಚಿಕೆಯಾಗುವುದು ಅಣ್ಣ ತಂಗಿಯರ ನಿರ್ಮಲವಾದ ಪ್ರೀತಿ , ಭಾಂಧವ್ಯ ಮತ್ತು ಸಂತಸ ಉಂಟಾಗುತ್ತದೆ. ಎಂದು ಹೇಳಬಹುದು

ಸಾಣಪ್ಪ ಲಮಾಣಿ
ಅಂತಿಮ ವರ್ಷದ ವಿದ್ಯಾರ್ಥಿ ದಾವಣಗೆರೆ ವಿಶ್ವವಿದ್ಯಾನಿಲಯ

Leave a Reply

Your email address will not be published. Required fields are marked *

error: Content is protected !!