ರಕ್ಷಣೆಯ ಜವಾಬ್ದಾರಿ ಹೆಚ್ಚಿಸುವ ರಕ್ಷಾ ಬಂಧನ – ದಿವ್ಯಾ ಪತ್ರಿಕೋದ್ಯಮ ವಿದ್ಯಾರ್ಥಿನಿ
ದಾವಣಗೆರೆ: ಹೆಸರೇ ಸೂಚಿಸುವಂತೆ “ರಕ್ಷಾ ಬಂಧನ” ಎಂದರೆ ರಕ್ಷಾವನ್ನು ಕಟ್ಟುವ ಮೂಲಕ ಸೋದರ ಸೋದರಿಯ ಸಂಬಂಧವನ್ನು ಬೆಸೆಯುವ ಹಬ್ಬ ಈ ರಕ್ಷಾಬಂಧನ.ಹಿಂದು ಧರ್ಮದ ವಿಶೇಷವಾದ ಹಬ್ಬ ರಕ್ಷಾಬಂಧನ, ಈ ಹಬ್ಬದಲ್ಲಿ ಸೋದರಿ ತನ್ನ ಅಣ್ಣನ ಹಣೆಗೆ ತಿಲಕವನ್ನು ಇಟ್ಟು , ಕೈಗೆ ರಾಖಿಯನ್ನು ಕಟ್ಟಿ ನೀ ನನ್ನ ಆಪ್ತರಕ್ಷಕ ನನ್ನ ಪ್ರೀತಿಯ ಸಹೋದರ ನಿನ್ನ ಮೇಲೆ ಯಾವುದೇ ಕೆಟ್ಟ ದೃಷ್ಟ ಬೀಳದಿರಲಿ ಎಂದು ಆರತಿ ಬೆಳಗುವುದರ ಮೂಲಕ ಸಿಹಿಯನ್ನು ತಿನಿಸಿ ಶುಭ ಹಾರೈಸುತ್ತಾಳೆ,
ಅದೇ ರೀತಿ ಸೋದರ ತನ್ನ ಪ್ರೀತಿಯ ತಂಗಿಗೆ ಇಷ್ಟವಾಗುವ ಉಡುಗೊರೆ ನೀಡಿ ಸದಾ ನಿನ್ನ ಬೆನ್ನಹಿಂದೆ ಇರುವ ರಕ್ಷಕ ನಾನು ನಿನ್ನ ಸುಖ ದುಃಖದ ಕ್ಷಣಗಳಲ್ಲೂ ಸದಾ ಭಾಗಿಯಾಗಿರುವೆ ಎಂದು ಆಶೀರ್ವಾದ ನೀಡುತ್ತಾನೆ.ರಕ್ಷಾ ಬಂಧನ ಕೇವಲ ಒಡಹುಟ್ಟಿದವರಿಗೆ ಮಾತ್ರ ಸೀಮಿತವಾಗದೆ, ಸೋದರ ಸೋದರಿ ಭಾವನೆಯನ್ನು ಹೊಂದಿರುವ ಪ್ರತಿಯೊಬ್ಬರಲ್ಲೂ ಕೂಡ ಅಣ್ಣ ತಂಗಿ ಸಂಬಂಧವನ್ನು ಕಾಣಬಹುದು.ನನ್ನ ಸಹೋದರರ ಬಗ್ಗೆ ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ, ನನ್ನ ಪ್ರತಿ ಹೆಜ್ಜೆಯಲ್ಲೂ ಸದಾ ರಕ್ಷಾಕವಚ ವಾಗಿ ನನ್ನ ಜೊತೆ ನಿಲ್ಲುವರು ನನ್ನ ಪ್ರೀತಿಯ ಸಹೋದರರು, ಇವರ ಜೊತೆ ಪ್ರತಿ ದಿನ ಜಗಳ, ತರ್ಲೆ, ತಮಾಷೆ, ಎಲ್ಲದರಲ್ಲೂ ಭಾಗಿಯಾಗುವೆ ಸದಾ ಅವರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ ಯಾಗಿರುವೆ.
ದಿವ್ಯ. ಎಂ. ಅರ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ದಾವಣಗೆರೆ ವಿಶ್ವವಿದ್ಯಾಲಯ