raksha bandhan; ಅಣ್ಣ ತಂಗಿಯರ ಅನುಬಂಧದ ಸಂಕೇತವೆ ರಕ್ಷಾಬಂಧನ- ಸುಷ್ಮಾ ವಿ, ವಿದ್ಯಾರ್ಥಿನಿ
ಒಡಹುಟ್ಟಿದವರ ಪ್ರೀತಿ ಮತ್ತು ಬಂಧದ ಆಚರಣೆಯನ್ನು ನಾವು ರಕ್ಷಾಬಂಧನ (raksha bandhan)ಎಂದು ಕರೆಯುತ್ತೇವೆ. ರಕ್ಷಾ ಬಂಧನಕ್ಕೆ ರಾಕಿ ಅಂತಲೂ ಸಹ ಕರೆಯುತ್ತಾರೆ ನಮ್ಮ ಭಾರತದಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ಇದು ಕೂಡ ಒಂದು. ರಕ್ಷಾಬಂಧನ ಎಂದರೆ ರಕ್ಷಣೆಯ ಬಂಧ ಎಂದು ಸಹೋದರ ಸಹೋದರಿಯರ ಪ್ರೀತಿ, ವಾತ್ಸಲ್ಯವನ್ನು ಈ ರಾಖಿ ಹಬ್ಬ ತಿಳಿಸುತ್ತದೆ.
ಪುರಾಣಗಳ ಪ್ರಕಾರ ಮಹಾಭಾರತದಲ್ಲಿ ಶ್ರೀ ಕೃಷ್ಣನು ಪಾಂಡವರ ಒಡಗೂಡಿ ಗಾಳಿಪಟವನ್ನು ಆರಿಸುತ್ತಾ ಇರುತ್ತಾನೆ. ಆ ಸಮಯದಲ್ಲಿ ಶ್ರೀ ಕೃಷ್ಣನ ಬೆರಳಿಗೆ ಗಾಯವಾಗಿ ರಕ್ತ ಬರುತ್ತದೆ ಇದನ್ನು ಗಮನಿಸಿದ ದ್ರೌಪದಿಯು ತನ್ನ ಸೀರೆಯ ಅಂಚನ್ನು ಹರಿದು ಶ್ರೀ ಕೃಷ್ಣನ ಕೈಗೆ ಕಟ್ಟುತ್ತಾಳೆ. ಆಗ ಶ್ರೀ ಕೃಷ್ಣನು ದ್ರೌಪದಿಗೆ ನೀನು ಕಟ್ಟಿದ ಈ ಬಟ್ಟೆಯ ಒಂದೊAದು ದಾರವೂ ನಿನಗೆ ಶ್ರೀರಕ್ಷೆಯಾಗುತ್ತದೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಹಾಗೆಯೇ ದ್ರೌಪದಿಯ ವಸ್ತ್ರಾಭರಣದ ಸಮಯದಲ್ಲಿ ಅವಳ ಸಹಾಯಕ್ಕೆ ಅವಳು ಕಟ್ಟಿದ ಒಂದು ತುಂಡು ಬಟ್ಟೆಯೆ ಅವಳಿಗೆ ಶ್ರೀರಕ್ಷೆಯಾಗಿ ರಕ್ಷಣೆ ನೀಡುತ್ತದೆ. ಆದಕಾರಣ ಈ ರಾಖಿಯನ್ನು ರಕ್ಷಣೆಯ ಬಂಧ ಎಂದು ಕರೆಯುತ್ತಾರೆ.
ಪ್ರತಿ ಶ್ರಾವಣ ಮಾಸದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಒಡಹುಟ್ಟಿದವರ ಬಾಂಧವ್ಯಕ್ಕೆ ಈ ರಾಖಿ ಸಾಕ್ಷಿಯಾಗಿದೆ .ರಕ್ಷಾ ಎಂದರೆ ಸುರಕ್ಷತೆ ಮತ್ತು ಬಂಧ ಎಂದರೆ ಅವರಿಬ್ಬರ ನಡುವಿನ ಬಂಧನ ಅಥವಾ ಬಾಂಧವ್ಯ ಈ ದಿನದಂದು ರಾಖಿ ಎಂಬ ಪವಿತ್ರ ದಾರವನ್ನು ಕಟ್ಟುವ ಮುಂಚೆ ಅವರಿಗೆ ಆರತಿ ಬೆಳಗಿ, ತಿಲಕವನ್ನು ಇಟ್ಟು, ರಾಕಿ ಕಟ್ಟಿ ಸಿಹಿ ತಿನಿಸಿ, ಅವರಿಂದ ಆಶೀರ್ವಾದ ಪಡೆಯುತ್ತಾರೆ. ನಂತರ ಅವರಿಂದ ಉಡುಗೊರೆಗಳನ್ನು ಪಡೆಯುವುದು ವಾಡಿಕೆ. ಸಹೋದರಿಯರು ಸಹೋದರರ ಕೈಗೆ ರಾಖಿ ಕಟ್ಟುವುದರ ಮೂಲಕ ಯೋಗ ಕ್ಷೇಮ, ಯಾವ ತೊಂದರೆಯೂ ಅವರಿಗೆ ಕಾಡಿದಂತೆ ,ಜೀವನ ಸುಖವಾಗಿ ಸಾಗಲಿ ಎಂದು ಹಾರೈಸುತ್ತಾರೆ ಇದರ ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯನ್ನು ರಕ್ಷಿಸುವ ಭರವಸೆಯನ್ನು ಈ ರಾಕಿ ಹಬ್ಬದಂದು ನೀಡುತ್ತಾರೆ.
ಕೇವಲ ಒಡಹುಟ್ಟಿದವರೇ ಈ ರಾಖಿ ಹಬ್ಬವನ್ನು ಆಚರಿಸಬೇಕೆಂದೇನೂ ಇಲ್ಲ ತಾಯಿಯಂತೆ ಕಾಳಜಿ ವಹಿಸುವ ಪ್ರೀತಿಯನ್ನು ಹಂಚುವವರು ಸೋದರಿಯ ಸಮಾನವೇ ರಕ್ಷಣೆಯನ್ನು ನೀಡುವ ಪ್ರತಿಯೊಬ್ಬರೂ ತನ್ನ ಸೋದರಿಗೆ ನಿಜವಾದ ಅಣ್ಣನಾಗಿರುತ್ತಾನೆ.
ರಕ್ತ ಸಂಬAಧದಿAದ ಅಣ್ಣ ತಂಗಿ ಆಗಿರದಿದ್ದರೂ ಪ್ರೀತಿ ವಾತ್ಸಲ್ಯಗಳಿಂದ ಕೂಡಿದ ಕೆಲವು ವ್ಯಕ್ತಿಗಳಿಗೆ ನಾವು ಜೀವನದಲ್ಲಿ ಅಣ್ಣ ತಂಗಿಯ ಸ್ಥಾನವನ್ನು ಕೊಟ್ಟಿರುತ್ತೇವೆ. ನಮ್ಮ ದೇಶದಲ್ಲಿ ಭಾವನತ್ಮಕ ಸಂಬAಧಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ಅಣ್ಣ ತಂಗಿಯರ ಸಂಬAಧ ಸಾಗರದ ಮುತ್ತಿಗಿಂತಲು ಪವಿತ್ರವಾದದ್ದು. ಕೇವಲ ಒಡವಹುಟ್ಟಿದವರಲ್ಲಿ ಹೊರಗಿವರನ್ನು ಕೂಡ ಸೋದರಿಯರಂತೆ ಭಾವಿಸಿ ನಡೆದುಕೊಳ್ಳಬೇಕೆಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಹಬ್ಬವೇ ರಾಖಿ ಹಬ್ಬ. ಆದ್ದರಿಂದ ನಮ್ಮ ದೇಶದಲ್ಲಿ ರಾಖಿ ಹಬ್ಬಕ್ಕೆ ತನ್ನದೆ ಆದ ಮಹತ್ವ ಹೊಂದಿದೆ.
ಸಹೋದರ ಸಹೋದರಿಯರ ನಡುವಿನ ನಂಬಿಕೆ ಮತ್ತು ಗೌರವದ ಬಂಧವನ್ನು ಈ ರಾಖಿ ಹಬ್ಬ ಸೂಚಿಸುತ್ತದೆ .ಇದು ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಹೆಚ್ಚಿಸುತ್ತದೆ.
ಸುಷ್ಮಾ ವಿ
Davangere University
Dept journalism and mass communication