363 ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿಯನ್ನ, ನ 18 ರಂದು ಬಹಿರಂಗ ಹರಾಜು

IMG_20211112_092209

ದಾವಣಗೆರೆ :ಕಳೆದ ಜುಲೈ 27 ರಂದು ದಾವಣಗೆರೆ ನಗರದ ಹೊರ ವಲಯದಲ್ಲಿ ಲಾರಿಗಳಲ್ಲಿ ಅನುಮಾನಸ್ಪದವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದ ಅಕ್ಕಿ ಮತ್ತು ಭತ್ತವನ್ನು ಆಹಾರ ಇಲಾಖೆಯ ಆಹಾರ ನಿರೀಕ್ಷಕರಿಂದ ಜಪ್ತಿ ಮಾಡಲಾಗಿದ್ದು,

363.65 ಕ್ವಿಂಟಾಲ್ ಅಕ್ಕಿ, ಹಾಗೂ 11.05 ಕ್ವಿಂಟಾಲ್ ಭತ್ತವನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ನ.18 ರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆ ಎಪಿಎಂಸಿ ಆವರಣದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು.

ಅನೌಪಚಾರಿಕ ಪಡಿತರ ಪ್ರದೇಶದ ಜಿಲ್ಲಾ ಪಂಚಾಯ್ತಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಹರಿಹರ ದಿಂದ ಚಿತ್ರದುರ್ಗ ಕಡೆಗೆ ಬರುತ್ತಿದ್ದ ಅಶೋಕ ಲೈಲ್ಯಾಂಡ್ ವಿಕೋಮೆಟ್ 2 ಅನುಮಾನಸ್ಪದ ಲಾರಿಗಳನ್ನು ಆಹಾರ ನಿರಿಕ್ಷಕರು ಕಳೆದ ಜು.27 ರಂದು ಜಪ್ತಿ ಮಾಡಿ, 363.65 ಕ್ವಿಂಟಾಲ್ ಅಕ್ಕಿ, ಹಾಗೂ 11.05 ಕ್ವಿಂಟಾಲ್ ಭತ್ತವನ್ನು ವಶಕ್ಕೆ ಪಡೆಯಲಾಗಿತ್ತು.

ಜಿಲ್ಲಾಧಿಕಾರಿಗಳ ಆದೇಶದಂತೆ ಜಪ್ತಿ ಮಾಡಿದ ಅಕ್ಕಿ ಮತ್ತು ಭತ್ತವನ್ನು ಇದೀಗ ನ. 18 ರಂದು ಬಹಿರಂಗ ಹರಾಜು ಮಾಡಲಾಗುವುದು. ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು, ಹರಾಜು ದಿನ ಒಂದು ಘಂಟೆಯ ಮುಂಚೆ ಬಂದು ಹರಾಜು ವಸ್ತುವಿನ ಮೌಲ್ಯದ ಶೇ.10 ರಷ್ಟು ಮೊಬಲಗನ್ನು ಮುಂಗಡದ ಠೇವಣಿ ಇಡಬೇಕು. ಠೇವಣಿ ಇಡದವರು ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ.

ಸರ್ಕಾರಕ್ಕೆ ಜಪ್ತಿ ಮಾಡಲಾದ 363.65 ಕ್ವಿಂಟಾಲ್ ಅಕ್ಕಿ, 11.05 ಕ್ವಿಂಟಾಲ್ ಭತ್ತವನ್ನು ಇದ್ದ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುವುದು. ಹರಾಜಿನಲ್ಲಿ ಅಕ್ಕಿ ಮತ್ತು ಭತ್ತವನ್ನು ಪಡೆದ ಬಿಡ್ಡುದಾರರು ತಕ್ಷಣವೇ ಹರಾಜಾದ ವಸ್ತುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ತೆಗೆದುಕೊಂಡು ಹೋಗಬೇಕು. ಹರಾಜಿನಲ್ಲಿ ಇಲಾಖೆಯವರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!