ಸಚಿವರ ವಿರುದ್ದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ.

 

ಸಚಿವರ ನಡೆ ಪ್ರಶ್ನಿಸಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು.

ಬೆಂಗಳೂರು-ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಶಾಸಕರ ಭೇಟಿಗೂ ಸಿಗುತ್ತಿಲ್ಲ. ಸಚಿವರನ್ನು ಬೇಟಿಯಾಗುವುದೇ ದುಸ್ತರವಾಗಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ತಮ್ಮನ್ನು ಬೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು,
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾರಕ್ಕೆ ಎರಡು ದಿನ ವಿಧಾನಸೌಧಕ್ಕೆ ಬಂದು ಶಾಸಕರನ್ನು ಭೇಟಿಯಾಗುತ್ತಾರೆ. ಆದರೆ ಸಚಿವರನ್ನು ಭೇಟಿಯಾಗುವುದೆ ದುಸ್ತರವಾಗಿದೆ. ಈ ಹಿಂದೆ ತಮ್ಮ ಸಮಸ್ಯೆಗಳ ನಿವಾರಣೆಗೆ ಸಚಿವರ ಸಭೆಯನ್ಬು ಮುಖ್ಯಮಂತ್ರಿಗಳು ನಡೆಸಿ ಪರಿಹರಿಸಿದ್ದರು.

ಶೇ 70ರಷ್ಟು ಭಾಗ ಸಚಿವರು ವಿಧಾನ ಸೌಧಕ್ಕೆ ಬೇಟಿ ನೀಡಿ ಶಾಸಕರ ಸಮಸ್ಯೆಗಳನ್ನು ಅಲಿಸುತ್ತಿಲ್ಲ ನಮ್ಮದೇ ಈ ರೀತಿಯ ಸಮಸ್ಯೆಯಾದರೆ ಪಕ್ಷ ವನ್ನು ಬೇರು ಮಟ್ಟದಲ್ಲಿ ಬೆಳಸಿದ, ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಕಾರ್ಯಕರ್ತರ ಗತಿಯೇನ್ನು ಎಂದು ಪ್ರಶ್ನಿಸಿದ್ದಾರೆ.
ಸಚಿವರ ಈ ನಡೆ ಕುರಿತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಬೇಟಿ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದು ಸರಿಯಾಗಿಯೇ ಇದೆ.

ಸಚಿವರು ಕೇವಲ ಕ್ಯಾಬಿನೆಟ್ ಸಭೆಗಾಗಿ ವಿಧಾನ ಸೌಧಕ್ಕೆ ಬಂದು ಬೇಟಿ ನೀಡುತ್ತಾರೆ ವಿನಹ ಉಳಿದ ಸಂದರ್ಭಗಳಲ್ಲಿ ಸಿಗುವುದೇ ಇಲ್ಲ. ಅವರನ್ನು ಮನೆಯಲ್ಲಿ ಬೇಟಿಯಾಗಬೇಕು ಆದರೆ ಕಾರ್ಯಕರ್ತರಿಗೆ ಇದು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಸಚಿವರ ಈ ನಡೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

ಎಲ್ಲ ಸಚಿವರು ತಮ್ಮ ವಾರದ ಟಿಪಿ ಯನ್ನು ಕಡ್ಡಾಯವಾಗಿ ಪ್ರತಿ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ಕಳುಹಿಸಿಕೊಡಬೇಕು ಇದರಿಂದ ಶಾಸಕರನ್ನು ಸಚಿವರು ಬೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳಲು ಅನುಕೂಲವಾಗಲಿದೆ ಎಂದು ಸಲಹೆ ನೀಡಿದ್ದಾರೆ.
ಅಸಮರ್ಥ ಸಚಿವರನ್ನು ಕೂಡಲೇ ಬದಲಾಯಿಸಬೇಕು ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!