ಸಾರಿಗೆ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ – ದಯಾವತಿ ಪುತ್ತೂರ್ ಕರ್

ಚಳ್ಳಕೆರೆ: ಸಾರಿಗೆ ವಲಯದಲ್ಲಿ ಕನ್ನಡ ಭಾಷಾ ಬಳಕೆಗೆ ಮೊದಲ ಆದ್ಯತೆ ನೀಡಬೇಕೆಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ ದಯಾವತಿ ಪುತ್ತೂರ್ ಕರ್ ಮನವಿ ಮಾಡಿಕೊಂಡರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಸೋಮವಾರ ನಗರದ ಸಾರಿಗೆ ನಿಲ್ದಾಣದಲ್ಲಿ ಘಟಕಾಧಿಕಾರಿಗಳಿಗೆ ಕನ್ನಡ ಜಾಗೃತಿ ಕರ ಪತ್ರಗಳನ್ನು ವಿತರಿಸಿ ಮಾತನಾಡಿದರು. ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೊರ್ಲಕುಂಟೆ ತಿಪ್ಪೇಸ್ವಾಮಿ, ಸಾಮಾಜಿಕ ಹೋರಾಟಗಾರರಾದ ಭೀಮನಕೆರೆ ಶಿವಮೂರ್ತಿ, ಯಾದಲಗಟ್ಟೆ ಜಗನ್ನಾಥ, ಮುತ್ತಿಗೆರೆಹಳ್ಳಿ ನಾಗೇಶ್, ದೊಡ್ಡ ಉಳ್ಳಾರ್ತಿ ಗೌರೀಶ್, ಬೊಂಬೇರಹಳ್ಳಿ ಕಲಾವಿದ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.